‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸೋಕೆ ರಾಜಮೌಳಿ ಒಪ್ಪಿಸಿದ್ದು ಹೇಗೆ? ನಿರ್ದೇಶಕ ಹೇಳಿದ್ದು ಇಷ್ಟು  

‘ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ಕ್ರಿಪ್ಟ್ ಬರೆಯುವಾಗ ಪ್ರತಿ ಪಾತ್ರದ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾರ ಪಾತ್ರ ಇಲ್ಲದಿದ್ದರೆ ಸಿನಿಮಾ ಆಗುವುದಿಲ್ಲ ಎನ್ನುವ ಪ್ರಶ್ನೆ ಬಂತು. ಅದಕ್ಕೆ ಸಿಂಪಲ್ ಉತ್ತರ ದೀಪಿಕಾ ಪಡುಕೋಣೆ’ ಎಂದಿದ್ದಾರೆ ಅವರು.

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ನಟಿಸೋಕೆ ರಾಜಮೌಳಿ ಒಪ್ಪಿಸಿದ್ದು ಹೇಗೆ? ನಿರ್ದೇಶಕ ಹೇಳಿದ್ದು ಇಷ್ಟು  
Prabhas
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Jul 27, 2024 | 8:52 AM

ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಯಶಸ್ಸು ಕಂಡಿದೆ. ಈ ಚಿತ್ರ ಒಟ್ಟಾರೆ 1100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರಿದ ಕೆಲವೇ ಕೆಲವು ಭಾರತೀಯ ಚಿತ್ರಗಳಲ್ಲಿ ಇದು ಕೂಡ ಒಂದು ಎನಿಸಿಕೊಂಡಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ರಾಜಮೌಳಿ, ರಾಮ್ ಗೋಪಾಲ್ ವರ್ಮಾ ಹಾಗೂ ದುಲ್ಖರ್ ಸಲ್ಮಾನ್ ಅವರು ಅತಿಥಿ ಪಾತ್ರ ಮಾಡಿದ್ದಾರೆ. ಅವರ ಬಗ್ಗೆ ನಾಗ್ ಅಶ್ವಿನ್ ಮಾತನಾಡಿದ್ದಾರೆ.

ಪ್ರಭಾಸ್​ ಅವರಿಗೆ ಅನೇಕ ಹೀರೋಗಳು, ನಿರ್ದೇಶಕರ ಜೊತೆ ಒಳ್ಳೆಯ ಫ್ರೆಂಡ್​ಶಿಪ್ ಇದೆ. ರಾಜಮೌಳಿ ವಿಚಾರದಲ್ಲಂತೂ ಕೇಳೋದೇ ಬೇಡ. ಅವರು ‘ಬಾಹುಬಲಿ’, ‘ಬಾಹುಬಲಿ 2’ ಸಿನಿಮಾಗಳಲ್ಲಿ ನಟಿಸಿದ್ದರು. ‘ರಾಜಮೌಳಿ ಹಾಗೂ ರಾಮ್ ಗೋಪಾಲ್ ವರ್ಮಾ ಅವರ ಮನ ಒಲಿಸಬೇಕಿತ್ತು. ಆದರೆ, ಅವರು ಸುಲಲಿತವಾಗಿ ಸಿನಿಮಾನ ಬೆಂಬಲಿಸಲು ಒಪ್ಪಿಕೊಂಡರು’ ಎಂದಿದ್ದಾರೆ ನಾಗ್ ಅಶ್ವಿನ್.

‘ನಾಲ್ಕು ಮುಖ್ಯಪಾತ್ರಧಾರಿಗಳು ಸಿನಿಮಾದಲ್ಲಿ ನಟಿಸೋದು ಎಲ್ಲರ ಆಸೆ ಆಗಿತ್ತು. ಅಮಿತಾಭ್ ಬಚ್ಚನ್ ಅವರು ಅಶ್ವತ್ಥಾಮನ ಪಾತ್ರ ಮಾಡಬೇಕು ಎಂಬುದು ನನ್ನದೇ ಆಯ್ಕೆ ಆಗಿತ್ತು. ಮಹಭಾರತದಲ್ಲಿ ಅವರನ್ನು ಗ್ರೇಟ್ ವಾರಿಯರ್ ಎಂದು ಕರೆಯಲಾಗುತ್ತದೆ. ಅಮಿತಾಭ್ ಹಾಗೂ ಪ್ರಭಾಸ್ ಮಧ್ಯೆ ಫೈಟ್ ನೋಡೋದು ಎಲ್ಲರ ಆಸೆ ಆಗಿತ್ತು’ ಎಂದಿದ್ದಾರೆ ನಾಗ್ ಅಶ್ವಿನ್.

‘ದೀಪಿಕಾ ಪಡುಕೋಣೆ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಸ್ಕ್ರಿಪ್ಟ್ ಬರೆಯುವಾಗ ಪ್ರತಿ ಪಾತ್ರದ ಬಗ್ಗೆ ಚರ್ಚೆ ಮಾಡಿದ್ದೇವೆ. ಯಾರ ಪಾತ್ರ ಇಲ್ಲದಿದ್ದರೆ ಸಿನಿಮಾ ಆಗುವುದಿಲ್ಲ ಎನ್ನುವ ಪ್ರಶ್ನೆ ಬಂತು. ಅದಕ್ಕೆ ಸಿಂಪಲ್ ಉತ್ತರ ದೀಪಿಕಾ ಪಡುಕೋಣೆ. ಅವರ ಪಾತ್ರ ಇಲ್ಲದೆ ಇದ್ದರೆ ಇಡೀ ಸಿನಿಮಾನೇ ಇಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: 1100 ಕೋಟಿ ರೂ. ಕ್ಲಬ್ ಸೇರಿದ ‘ಕಲ್ಕಿ 2898 ಎಡಿ’; ಆದರೂ ನಿರ್ಮಾಪಕರಿಗಾದ ಲಾಭ ಕಡಿಮೆ?

‘ಕಲ್ಕಿ 2898 ಎಡಿ’ ಚಿತ್ರ ಕಳೆದ ತಿಂಗಳು 27ರಂದು ರಿಲೀಸ್ ಆಯಿತು. ಈ ಸಿನಿಮಾ ರಿಲೀಸ್ ಆಗಿ ಸರಿಯಾಗಿ ಒಂದು ತಿಂಗಳು ಕಳೆದಿದೆ. ಈವರೆಗೆ ಚಿತ್ರ 1100 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಸದ್ಯ ಯಾವುದೇ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಕಮಾಲ್ ಮಾಡುತ್ತಿಲ್ಲ. ಇದು ಚಿತ್ರತಂಡಕ್ಕೆ ಸಹಕಾರಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ