AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂಟಿಮೇಟ್ ದೃಶ್ಯವನ್ನು ಆರು ಬಾರಿ ಶೂಟ್ ಮಾಡಿಸಿದ್ದ ನಿರ್ದೇಶಕ; ನೆಲದ ಮೇಲೆ ಬಿದ್ದು ಅತ್ತಿದ್ದ ಕುಬ್ರಾ ಸೇಠ್

‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿ ನೆಟ್​ಫ್ಲಿಕ್ಸ್ ಮೂಲಕ ರಿಲೀಸ್ ಆಯಿತು. ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಕುಬ್ರಾ ಸೇಠ್ ಕುಕೂ ಹೆಸರಿನ ತೃತೀಯಲಿಂಗಿ ಪಾತ್ರ ಮಾಡಿದ್ದರು. ಈ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್​ ಸೀರಿಸ್​ನಲ್ಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಇಂಟಿಮೇಟ್ ದೃಶ್ಯವನ್ನು ಆರು ಬಾರಿ ಶೂಟ್ ಮಾಡಿಸಿದ್ದ ನಿರ್ದೇಶಕ; ನೆಲದ ಮೇಲೆ ಬಿದ್ದು ಅತ್ತಿದ್ದ ಕುಬ್ರಾ ಸೇಠ್
ಕುಬ್ರಾ
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 27, 2024 | 7:52 AM

Share

ನಟ, ಆ್ಯಂಕರ್​ ಹಾಗೂ ಆರ್​ಸಿಬಿ ಇನ್​ಸೈಡರ್​ ದ್ಯಾನಿಶ್ ಸೇಠ್​ ಸಹೋದರಿ ಕುಬ್ರಾ ಸೇಠ್​ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅಲ್ಲೊಂದು, ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಅವರು ಈಗಾಗಲೇ ಹಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ಕುಬ್ರಾ ಸೇಠ್ ಅವರಿಗೆ ಇಂದು (ಜುಲೈ 26) ಜನ್ಮದಿನ. ಅವರಿಗೆ ಈಗ 41 ವರ್ಷ ವಯಸ್ಸು ಎನ್ನಲಾಗಿದೆ. ಈ ಮೊದಲು ಅವರು ಹಳೆಯ ಘಟನೆ ಒಂದನ್ನು ನೆನಪು ಮಾಡಿಕೊಂಡಿದ್ದರು. ಈ ಘಟನೆ ಬಗ್ಗೆ ವಿವರಿಸುವಾಗ ಅವರು ಭಾವುಕರಾಗಿದ್ದರು.

‘ಸೇಕ್ರೆಡ್​ ಗೇಮ್ಸ್​’ ವೆಬ್​ ಸರಣಿ ನೆಟ್​ಫ್ಲಿಕ್ಸ್ ಮೂಲಕ ರಿಲೀಸ್ ಆಯಿತು. ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದೆ. ಕುಬ್ರಾ ಸೇಠ್ ಕುಕೂ ಹೆಸರಿನ ತೃತೀಯಲಿಂಗಿ ಪಾತ್ರ ಮಾಡಿದ್ದರು. ಈ ಪಾತ್ರ ಗಮನ ಸೆಳೆದಿತ್ತು. ಅವರು ಆ ವೆಬ್​ ಸೀರಿಸ್​ನಲ್ಲಿ ಇಂಟಿಮೇಟ್​ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ದೃಶ್ಯಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ದೃಶ್ಯ ಶೂಟ್​ ಮಾಡುವಾಗ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈ ಬಗ್ಗೆ ಕುಬ್ರಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಡಾನ್ ಗಣೇಶ್​ ಕಾಯ್ತೊಂಡೆಗೆ (ನವಾಜುದ್ದೀನ್​ ಸಿದ್ಧಕಿ) ಕುಕೂ (ಕುಬ್ರಾ ಸೇಟ್​​) ಮೇಲೆ ಪ್ರೀತಿ ಮೂಡುವ ರೀತಿಯ ದೃಶ್ಯ ‘ಸೇಕ್ರೆಡ್ ಗೇಮ್ಸ್’ ಸೀರಿಸ್​ನಲ್ಲಿ ಇದೆ. ಇಬ್ಬರೂ ಒಂದೆಡೆ ಸೇರುತ್ತಾರೆ. ಈ ವೇಳೆ ಇಬ್ಬರ ನಡುವೆ ಇಂಟಿಮೇಟ್​ ದೃಶ್ಯಗಳು ಇವೆ. ಇಬ್ಬರ ನಡುವೆ ಮೊಳೆತ ಪ್ರೀತಿಯನ್ನು ವ್ಯಕ್ತಪಡಿಸಲು ಈ ದೃಶ್ಯದ ಅವಶ್ಯಕತೆ ಇತ್ತು ಎಂದು ನಿರ್ದೇಶಕರು ವಿವರಿಸಿದ್ದರು. ಇದನ್ನು ಶೂಟ್​ ಮಾಡುವುದು ಕುಬ್ರಾಗೆ ಅಷ್ಟು ಸುಲಭವಾಗಿರಲಿಲ್ಲ. ಈ ದೃಶ್ಯದ ಶೂಟ್​ ಮಾಡುವಾಗ ಬರೋಬ್ಬರಿ ಏಳು ಟೇಕ್​ ತೆಗೆದುಕೊಳ್ಳಲಾಗಿತ್ತು. ಇದರಿಂದ ಕುಬ್ರಾ ಆಘಾತಕ್ಕೆ ಒಳಗಾಗಿದ್ದರು. ಅಲ್ಲದೆ, ನೆಲದ ಮೇಲೆ ಬಿಕ್ಕಿಬಿಕ್ಕಿ ಅತ್ತಿದ್ದರು.

‘ಇಂಟಿಮೇಟ್ ದೃಶ್ಯವನ್ನು ಆರು ಬಾರಿ ಶೂಟ್​ ಮಾಡಲಾಗಿತ್ತು. ಆದರೆ, ನಿರ್ದೇಶಕರಿಗೆ ದೃಶ್ಯದ ಬಗ್ಗೆ ಖುಷಿ ಇರಲಿಲ್ಲ. ಏಳನೇ ಬಾರಿಗೆ ಶೂಟ್​ ಮಾಡಿ ಮುಗಿಸಿದೆ. ನಂತರ ನಾನು ನೆಲದಮೇಲೆ ಮಲಗಿಕೊಂಡು ಬಿಕ್ಕಿಬಿಕ್ಕಿ ಅತ್ತೆ. ನಾನು ತುಂಬಾನೇ ಭಾವುಕಳಾಗಿದ್ದೆ.  ನಿರ್ದೇಶಕರು ಬಂದು ನೀವು ಹೊರಗೆ ಕಾಯಬಹುದು ಎಂದರು. ಆಗ ನನ್ನ ದೃಶ್ಯದ ಶೂಟ್​ ಮುಗಿದಿದೆ ಎಂಬುದು ಖಚಿತವಾಗಿತ್ತು. ಆದಾಗ್ಯೂ ನಾನು ನೆಲದ ಮೇಲೆ ಮಲಗಿಕೊಂಡು ಅಳುತ್ತಲೇ ಇದ್ದೆ. ಆಗ ನವಾಜುದ್ದೀನ್​ ಸಿದ್ಧಕಿ ಅವರು ಬಂದು, ನೀವು ಹೊರ ಹೋಗಬಹುದು. ನನ್ನ ದೃಶ್ಯದ ಶೂಟಿಂಗ್​ ಇದೆ ಎಂದಿದ್ದರು’  ಎಂದು ಹಳೆಯ ಘಟನೆ ವಿವರಿಸಿದ್ದಾರೆ ಕುಬ್ರಾ.

ಇದನ್ನೂ ಓದಿ: ದಾನಿಶ್ ಸೇಠ್ ನೋಡಿದ್ದು ಯಾವ ‘ಕಲ್ಕಿ’ ಸಿನಿಮಾ? ಕತೆ ಭಿನ್ನವಾಗಿದೆಯಲ್ಲ

‘ಸೇಕ್ರೆಡ್​ ಗೇಮ್ಸ್​’ ಎರಡು ಸೀಸನ್​ ಪ್ರಸಾರವಾಗಿದೆ. ನೆಟ್​ಫ್ಲಿಕ್ಸ್​ನಲ್ಲಿ ಇದು ಪ್ರಸಾರವಾಗಿದೆ. ಅನುರಾಗ್ ಕಶ್ಯಪ್​, ವಿಕ್ರಮಾದಿತ್ಯ ಮೋಟ್ವಾನೆ, ನೀರಜ್​ ಗಾಯ್ವನ್​ ಇದನ್ನು ನಿರ್ದೇಶಿಸಿದ್ದಾರೆ. ಸೈಫ್​ ಅಲಿ ಖಾನ್​ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದರು. ಎರಡನೇ ಸೀಸನ್ ಮಿಶ್ರ ಪ್ರತಿಕ್ರಿಯೆ ಪಡೆದಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:48 am, Sat, 27 July 24

Follow Us
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಿಂದ ವಂಚಿತರಾಗಲು ಕಾಂಗ್ರೆಸ್ ಕಾರಣ ಎಂದ ಅಶೋಕ
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಎಡೆ ಹೊಡೆಯಲು ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟ ರೈತ ಕುಟುಂಬಸ್ಥರು!
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ
ಮಕ್ಕಳ ಗೆಟಪ್​​​ನಲ್ಲಿ ಬಂದು ಗಮನ ಸೆಳೆದ ಆ್ಯಂಕರ್ ಅನುಶ್ರೀ