AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾನಿಶ್ ಸೇಠ್ ನೋಡಿದ್ದು ಯಾವ ‘ಕಲ್ಕಿ’ ಸಿನಿಮಾ? ಕತೆ ಭಿನ್ನವಾಗಿದೆಯಲ್ಲ

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ವೀಕ್ಷಿಸಿರುವ ದಾನಿಶ್ ಸೇಠ್ ಸಿನಿಮಾದ ಕತೆ ಹೇಳಿದ್ದಾರೆ. ಆದರೆ ಅವರ ಕತೆ ಸಿನಿಮಾದ ಕತೆಗಿಂತಲೂ ಭಿನ್ನವಾಗಿದೆ. ಅಂದಹಾಗೆ ದಾನಿಶ್ ಸೇಠ್ ನೋಡಿರುವುದು ಯಾವ ‘ಕಲ್ಕಿ 2898 ಎಡಿ’?

ದಾನಿಶ್ ಸೇಠ್ ನೋಡಿದ್ದು ಯಾವ ‘ಕಲ್ಕಿ’ ಸಿನಿಮಾ? ಕತೆ ಭಿನ್ನವಾಗಿದೆಯಲ್ಲ
ಮಂಜುನಾಥ ಸಿ.
|

Updated on:Jul 02, 2024 | 4:50 PM

Share

ಪ್ರಭಾಸ್ ನಟನೆಯ ‘ಕಲ್ಕಿ 2909 ಎಡಿ’ ಸಿನಿಮಾ ಕಳೆದ ಗುರುವಾರ ಬಿಡುಗಡೆ ಆಗಿದ್ದು ದೇಶದಾದ್ಯಂತ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಸಿನಿಮಾ ಈಗಾಗಲೇ ವಿಶ್ವದಾದ್ಯಂತ 500 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದು, 1000 ಕೋಟಿ ಕಲೆಕ್ಷನ್ ದಾಟುವ ಮುನ್ಸೂಚನೆ ನೀಡಿದೆ. ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿದ್ದು, ಸಿನಿಮಾದ ಕತೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ನಿರ್ದೇಶಕ ನಾಗ್ ಅಶ್ವಿನ್ ಭೂತ ಹಾಗೂ ಭವಿಷ್ಯತ್ ಅನ್ನು ಹೆಣೆದು ಮಾಡಿರುವ ಕತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ, ನಿರೂಪಕ, ಕಮಿಡಿಯನ್ ದಾನಿಶ್ ಸೇಠ್ ಸಹ ‘ಕಲ್ಕಿ 2898 ಎಡಿ’ ಸಿನಿಮಾ ನೋಡಿದ್ದಾರೆ. ಆದರೆ ಅವರು ನೋಡಿದ ಸಿನಿಮಾದಲ್ಲಿ ಬೇರೆಯದ್ದೇ ಕತೆ ಇದ್ದಂತಿದೆ. ಅಥವಾ ಅವರು ಕತೆಯನ್ನು ಗ್ರಹಿಸಿರುವ ರೀತಿ ಬಹಳ ಭಿನ್ನವಾಗಿದೆ.

ದಾನಿಶ್ ಸೇಠ್ ಬೇರೆ ಬೇರೆ ಪಾತ್ರಗಳಂತೆ ಮಾತನಾಡುತ್ತಾ ಕಾಮಿಡಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿರುತ್ತಾರೆ. ಇದೀಗ ‘ಕಲ್ಕಿ’ ಸಿನಿಮಾ ನೋಡಿಬಂದು ಆಂಧ್ರ ರೆಡ್ಡಿಗಳ ಅಣಕು ವಿಡಿಯೋ ಒಂದನ್ನು ಅಪ್​ಲೋಡ್ ಮಾಡಿದ್ದಾರೆ. ವಿಡಿಯೋನಲ್ಲಿ ಶ್ರೀನಿವಾಸ ಹಾಗೂ ರಾಜಶೇಖರ್ ಆಗಿ ನಟಿಸಿದ್ದಾರೆ. ಶ್ರೀನಿವಾಸ್ ‘ಕಲ್ಕಿ’ ನೋಡಿದ್ದಾರೆ ಆದರೆ ರಾಜಶೇಖರ್ ಸಿನಿಮಾ ನೋಡಿಲ್ಲ. ಶ್ರೀನಿವಾಸ್, ರಾಜಶೇಖರ್​ಗೆ ‘ಕಲ್ಕಿ’ ಕತೆ ವಿವರಿಸಿದ್ದಾರೆ.

ಶ್ರೀನಿವಾಸ್​ (ದಾನಿಶ್ ಸೇಠ್) ಪ್ರಕಾರ ‘ಕಲ್ಕಿ’ ಸಿನಿಮಾ ರಿಯಲಿಸ್ಟಿಕ್ ಸಿನಿಮಾ ಅಲ್ಲವಂತೆ ಬದಲಿಗೆ ಅದೊಂದು ರಿಯಲ್ ಎಸ್ಟೇಟ್ ಸಿನಿಮಾ ಅಂತೆ. ಹೆಸರಿನಲ್ಲಿ 2898 ಫ್ಲಾಟ್ ಸೈಜ್ ಆಗಿರುವ ಸಾಧ್ಯತೆ ಇದೆಯಂತೆ. ‘ಸಿನಿಮಾದಲ್ಲಿ ಒಂದು ಕಾಂಪ್ಲೆಕ್ಸ್​ ಇದೆ ಅದನ್ನು ಯಾಸ್ಕಿನ್ ಬಿಲ್ಡರ್ಸ್​ನವರು ಕಟ್ಟಿದ್ದಾರೆ. ಅದರ ಡೆವೆಲಪರ್ ಕಮಲ್ ಹಾಸನ್. ಆ ಕಾಂಪ್ಲೆಕ್ಸ್​ ಒಳಗೆ ಬಹಳ ಅಮಿನಿಟೀಸ್ ಇದೆ. ಪ್ರೈವೇಟ್ ಬೀಚ್, ಗಾಲ್ಫ್ ಯಾರ್ಡ್, ಸ್ವಿಮ್ಮಿಂಗ್ ಪೂಲ್, ಅನಿಮಲ್ ಪಾರ್ಕ್, ಪಬ್ ಎಲ್ಲವೂ ಇದೆಯಂತೆ. ಪ್ರಭಾಸ್​ಗೆ ಕಾಂಪ್ಲೆಕ್ಸ್​ನಲ್ಲಿ ಅಪಾರ್ಟ್​ಮೆಂಟ್ ಕೊಳ್ಳಬೇಕು ಎನ್ನುವ ಆಸೆ ಹಾಗಾಗಿ ಅವರು ಇಂಟ್ರೆಸ್ಟೆಡ್ ಬಯ್ಯರ್ ಅಂತೆ!

ಇದನ್ನೂ ಓದಿ:ಸೋಮವಾರವೂ ಸುಮಾರು 100 ಕೋಟಿ ರೂ. ಬಾಚಿದ ‘ಕಲ್ಕಿ 2898 ಎಡಿ’; ಒಟ್ಟೂ ಗಳಿಕೆ ಎಷ್ಟು?

ಅಷ್ಟೋಂದು ಅಮಿನಿಟೀಸ್ ಇರುವಾಗ ಕಾಂಪ್ಲೆಕ್ಸ್​ನ ರೇಟ್ ಜಾಸ್ತಿ ಇರಬೇಕಲ್ಲವೆ ಎಂದರೆ ಇಲ್ಲ ಬರೀ ಒಂದು ಮಿಲಿಯನ್ ಯುನಿಟ್ಸ್ ಅಂದರೆ ಕೇವಲ ಹತ್ತು ಲಕ್ಷ ರೂಪಾಯಿಗಳು. ಅಂದಹಾಗೆ ದೀಪಿಕಾ ಹಾಗೂ ಅಮಿತಾಬ್ ಬಚ್ಚನ್ ಪಾತ್ರವನ್ನೂ ಸಹ ಶ್ರೀನಿವಾಸ್ (ದಾನಿಶ್) ವಿವರಿಸಿದ್ದಾರೆ. ಸಿನಿಮಾದಲ್ಲಿ ಅಮಿತಾಬ್ ಹಾಗೂ ದೀಪಿಕಾ ಅವರದ್ದು ಮಾಮೂಲಿ ಹೈದರಾಬಾದ್ ಜೀವನವಂತೆ ಒಬ್ಬರದ್ದು ಫ್ಯಾಮಿಲಿ ಸಮಸ್ಯೆ ಇನ್ನೊಬ್ಬರದ್ದು ಫ್ಯಾಮಿಲಿ ವಿವಾದವಂತೆ.

View this post on Instagram

A post shared by Danish sait (@danishsait)

ಕೊಲೆಯಲ್ಲಿ ಸಿನಿಮಾದ ಮಾರೆಲ್ ಸ್ಟೋರಿಯನ್ನು ಸಹ ವಿವರಿಸಿದ್ದಾರೆ ಶ್ರೀನಿವಾಸ್, ‘ಈಗ ಇರುವ ರಿಯಲ್ ಎಸ್ಟೇಟ್​ಗೆ ಬಹಳ ಲಿಟಿಗೇಶನ್ ಇದೆ. ಹಾಗೆಯೇ ಅದೇ ಲಿಟಿಗೇಶನ್ 2898 ಎಡಿಯಲ್ಲಿಯೂ ಸಹ ಮುಂದುವರೆಯಲಿದೆ ಜಾಗೃತೆ ಎಂದು ಸಿನಿಮಾದಲ್ಲಿ ತೋರಿಸಿದ್ದಾರೆ’ ಎಂದು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮ್ಯಾನ್ ಶ್ರೀನಿವಾಸ್ ವಿವರಿಸಿದ್ದಾರೆ. ಅವರವರ ಭಾವಕ್ಕೆ ತಕ್ಕಂತೆ ಕತೆ.

ಅಂದಹಾಗೆ ‘ಕಲ್ಕಿ 2898 ಎಡಿ’ ರಿಯಲ್ ಎಸ್ಟೇಟ್ ಕತೆಯಲ್ಲ. ಮಹಾಭಾರತದ ಕುರುಕ್ಷೇತ್ರ ಯುದ್ಧದಿಂದ ಪ್ರಾರಂಭವಾಗಿ ಕಲಿಯುಗದ ಅಂತ್ಯ 2898 ನೇ ವರ್ಷದಲ್ಲಿ ನಡೆಯುವ ಕತೆ. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ಭೈರವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ವಿಲನ್ ಕಮಲ್ ಹಾಸನ್ ಅವರ ಪಾತ್ರದ ಹೆಸರು ಯಾಸ್ಕಿನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:45 pm, Tue, 2 July 24

ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ