AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಮವಾರವೂ ಸುಮಾರು 100 ಕೋಟಿ ರೂ. ಬಾಚಿದ ‘ಕಲ್ಕಿ 2898 ಎಡಿ’; ಒಟ್ಟೂ ಗಳಿಕೆ ಎಷ್ಟು?

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರ ಹಿಟ್ ಆಗಿದೆ. ಈ ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ. ಈ ಚಿತ್ರದಲ್ಲಿ ದೊಡ್ಡ ಪಾತ್ರವರ್ಗ ಇದೆ. ಈ ಸಿನಿಮಾ ವಿಶ್ವಾದ್ಯಂತ ಭರ್ಜರಿ ಗಳಿಕೆ ಮಾಡಿದೆ.

ಸೋಮವಾರವೂ ಸುಮಾರು 100 ಕೋಟಿ ರೂ. ಬಾಚಿದ ‘ಕಲ್ಕಿ 2898 ಎಡಿ’; ಒಟ್ಟೂ ಗಳಿಕೆ ಎಷ್ಟು?
ಸೋಮವಾರವೂ ಸುಮಾರು 100 ಕೋಟಿ ರೂ. ಬಾಚಿದ ‘ಕಲ್ಕಿ 2898 ಎಡಿ’; ಒಟ್ಟೂ ಗಳಿಕೆ ಎಷ್ಟು?
ರಾಜೇಶ್ ದುಗ್ಗುಮನೆ
|

Updated on: Jul 02, 2024 | 7:43 AM

Share

‘ಕಲ್ಕಿ 2898 ಎಡಿ’ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ವಾರಾಂತ್ಯದಲ್ಲಿ ಈ ಚಿತ್ರ ಒಳ್ಳೆಯ ಗಳಿಕೆ ಮಾಡಿತ್ತು. ಮೊದಲ ಸೋಮವಾರ (ಜುಲೈ 1) ಈ ಚಿತ್ರದ ಭವಿಷ್ಯ ಏನಾಗಲಿದೆ ಎನ್ನುವ ಕುತೂಹಲ ಕಾಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ. ಈ ಚಿತ್ರ ಸೋಮವಾರ ವಿಶ್ವಾದ್ಯಂತ 84 ಕೋಟಿ ರೂಪಾಯಿ ಬಾಚಿಕೊಂಡಿದೆ. ವಾರದ ದಿನ ಇಷ್ಟೊಂದು ಗಳಿಕೆ ಮಾಡಿದ್ದು ಅನೇಕರಿಗೆ ಅಚ್ಚರಿ ಎನಿಸಿದೆ. ಸಿನಿಮಾದ ಒಟ್ಟೂ ಗಳಿಕೆ 635 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಚಿತ್ರ ಅನಾಯಾಸವಾಗಿ 1000 ಕೋಟಿ ರೂಪಾಯಿ ತಲುಪಲಿದೆ.

ಸೋಮವಾರ ‘ಕಲ್ಕಿ 2898 ಎಡಿ’ ಸಿನಿಮಾ ಭಾರತದಲ್ಲಿ 34.6 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಶ್ವ ಮಟ್ಟದಲ್ಲಿ 45-50 ಕೋಟಿ ರೂಪಾಯಿ ಬಾಚಿದೆ. ಈ ಮೂಲಕ ಒಟ್ಟೂ ಗಳಿಕೆ 635 ಕೋಟಿ ರೂಪಾಯಿ ಆಗಿದೆ. ‘ಕಲ್ಕಿ 2898 ಎಡಿ’ ಚಿತ್ರ ಜೂನ್ 27ರಂದು ಬಿಡುಗಡೆ ಕಂಡಿದೆ.

ಇದನ್ನೂ ಓದಿ: ‘ಕಲ್ಕಿ 2898 ಎಡಿ’ ವಿಚಾರದಲ್ಲಿ ಕನ್ನಡಿಗರಿಗೆ ಮೋಸ; KVN ಸಂಸ್ಥೆಗೆ ಛೀಮಾರಿ

‘ಕಲ್ಕಿ 2898 ಎಡಿ’ ಚಿತ್ರ ಮೊದಲ ದಿನವೇ ವಿಶ್ವಾದ್ಯಂತ 191 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಈ ಮೂಲಕ ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ ‘ಕೆಜಿಎಫ್ 2’, ‘ಸಲಾರ್’, ‘ಲಿಯೋ’ ಮೊದಲಾದ ಚಿತ್ರಗಳನ್ನು ಹಿಂದಿಕ್ಕಿದೆ. ಈ ಮೂಲಕ ದಾಖಲೆ ಬರೆದಿದೆ.

‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ಅಮಿತಾಭ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಆರ್​ಜಿವಿ, ದುಲ್ಕರ್ ಸಲ್ಮಾನ್ ಸೇರಿ ಅನೇಕರು ಅತಿಥಿ ಪಾತ್ರ ಮಾಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನಿ ದತ್ ಬಂಡವಾಳ ಹೂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ
ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ
ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ
ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ
ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ