‘ಕಲ್ಕಿ 2898 ಎಡಿ’ ವಿಚಾರದಲ್ಲಿ ಕನ್ನಡಿಗರಿಗೆ ಮೋಸ; KVN ಸಂಸ್ಥೆಗೆ ಛೀಮಾರಿ

‘ಕಲ್ಕಿ 2898 ಎಡಿ’  ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ಜೂನ್ 27ರಂದು ಬಿಡುಗಡೆ ಆಗಿದೆ. ಸದ್ಯ ಸಿನಿಮಾ ರಿಲೀಸ್ ಆಗಿ ನಾಲ್ಕು ದಿನ ಕಳೆದಿದ್ದು ಭಾರತದ ಬಾಕ್ಸ್ ಆಫೀಸ್​ನಲ್ಲಿ 300 ಕೋಟಿ ರೂಪಾಯಿ ಗಳಿಸಿದೆ. ಆದರೆ, ಈ ಚಿತ್ರಕ್ಕೆ 3ಡಿ ಕನ್ನಡ ವರ್ಷನ್ ಸಿಗುತ್ತಿಲ್ಲ.

‘ಕಲ್ಕಿ 2898 ಎಡಿ’ ವಿಚಾರದಲ್ಲಿ ಕನ್ನಡಿಗರಿಗೆ ಮೋಸ; KVN ಸಂಸ್ಥೆಗೆ ಛೀಮಾರಿ
ಕಲ್ಕಿ
Follow us
ರಾಜೇಶ್ ದುಗ್ಗುಮನೆ
|

Updated on: Jul 01, 2024 | 7:29 AM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ನಾಲ್ಕೇ ದಿನಕ್ಕೆ 500 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಇದು ಚಿತ್ರದ ನಿರ್ಮಾಪಕರಿಗೆ ಲಾಭ ತಂದಿದೆ. ಈ ಸಿನಿಮಾದ ಗಳಿಕೆ ವಾರದ ದಿನವೂ ಹೀಗೆಯೇ ಇದ್ದರೆ ನಿರ್ಮಾಪಕರಿಗೆ ಲಾಭ ಆಗಿದೆ. ಹೀಗಿರುವಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಒಂದು ನಡೆಯುತ್ತಿದೆ. ಕನ್ನಡಿಗರಿಗೆ ಈ ಸಿನಿಮಾ ವಿಚಾರದಲ್ಲಿ ಮೋಸ ಆಗಿದೆ. ಅಷ್ಟಕ್ಕೂ ಆಗಿರೋದು ಏನು? ಆ ಬಗ್ಗೆ ಈ ಸ್ಟೋರಿಯಲ್ಲಿದೆ ಉತ್ತರ.

‘ಕಲ್ಕಿ 2898 ಎಡಿ’ ಚಿತ್ರ 2D ಜೊತೆ 3Dಯಲ್ಲೂ ವೀಕ್ಷಣೆಗೆ ಲಭ್ಯವಿದೆ. ಬೆಂಗಳೂರಲ್ಲಿ ತೆಲುಗು, ಹಿಂದಿ ಹಾಗೂ ತಮಿಳು ಭಾಷೆಗಳಿಗೆ 3D ವರ್ಷನ್ ವೀಕ್ಷಣೆಗೆ ಲಭ್ಯವಿದೆ. ಆದರೆ, ಕನ್ನಡದಲ್ಲಿ ಮಾತ್ರ 3ಡಿ ವರ್ಷನ್ ಇಲ್ಲ. ಇದನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ತಮಿಳು, ಹಿಂದಿ, ತೆಲುಗಿಗೆ 3D ವರ್ಷನ್ ನೀಡೋಕೆ ಆಗುತ್ತದೆ, ಕನ್ನಡಕ್ಕೆ ಏಕೇ ನೀಡೋಕೆ ಸಾಧ್ಯವಿಲ್ಲ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದಲ್ಲಿ ‘ಕಲ್ಕಿ 2898 ಎಡಿ’ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್​​ ಸಂಸ್ಥೆ ಹಂಚಿಕೆ ಮಾಡುತ್ತಿದೆ. ಇದು ಕರ್ನಾಟಕದ ನಿರ್ಮಾಣ ಸಂಸ್ಥೆ. ಕನ್ನಡದ ಸಿನಿಮಾಗಳನ್ನು ಈ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಯಶ್ ಅವರ ‘ಟಾಕ್ಸಿಕ್’ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವುದು ಇದೇ ‘ಕೆವಿಎನ್ ಪ್ರೊಡಕ್ಷನ್ಸ್’. ಹೀಗಿರುವಾಗ ಕನ್ನಡದಲ್ಲಿ ‘ಕಲ್ಕಿ 2898 ಎಡಿ’ 3D ವರ್ಷನ್​ಗೆ ಏಕೆ​ ಶೋ ನೀಡಲ್ಲ ಎಂಬುದು ಅನೇಕರ ಪ್ರಶ್ನೆ.

ಸದ್ಯ ‘ಕಲ್ಕಿ 2898 ಎಡಿ’ ಕನ್ನಡ 2D ವರ್ಷನ್​ಗೆ ಮೆಚ್ಚುಗೆ ಸಿಕ್ಕಿದೆ. ಅನೇಕರು ಕನ್ನಡದಲ್ಲೇ ಸಿನಿಮಾ ನೋಡುತ್ತಿದ್ದಾರೆ. ವೀಕೆಂಡ್​ನಲ್ಲಿ ಹಾಗೂ ವಾರದ ದಿನಗಳಲ್ಲಿ ಕನ್ನಡ 2D ವರ್ಷನ್ ಹೌಸ್​ಫುಲ್ ಕಾಣುತ್ತಿದೆ. ಮಾಲ್​ಗಳಲ್ಲೂ ಜನರು ಸಿನಿಮಾನ ನೋಡುತ್ತಿದ್ದಾರೆ. ಹೀಗಿರುವಾಗ 3D ವರ್ಷನ್ ಶೋ ನೀಡೋಕೆ ಸಮಸ್ಯೆ ಏನು ಎಂಬುದು ಕನ್ನಡಿಗರ ಪ್ರಶ್ನೆ.

ಇದನ್ನೂ ಓದಿ: ಬಂಗಾರದ ಬೆಳೆ ತೆಗೆದ ‘ಕಲ್ಕಿ’; ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ಪ್ರಭಾಸ್ ಸಿನಿಮಾ

ಕನ್ನಡ ನಿರ್ಮಾಣ ಸಂಸ್ಥೆಗಳು ಕನ್ನಡಿಗರಿಗೇ ಈ ರೀತಿ ಮಲತಾಯಿ ಧೋರಣೆ ತೋರುತ್ತಿರುವುದು ಇದೇ ಮೊದಲೇನು ಅಲ್ಲ. ಈ ಮೊದಲು ಕೂಡ ಅನೇಕ ಸಿನಿಮಾಗಳು ಕನ್ನಡ ವರ್ಷನ್​ನಲ್ಲಿ ಬಿಡುಗಡೆ ಆದರೂ ಕೆಲವೇ ಕೆಲವು ಶೋಗಳನ್ನು ನೀಡಿದ ಉದಾಹರಣೆ ಸಾಕಷ್ಟಿದೆ. ಈಗ ‘ಕಲ್ಕಿ 2898 ಎಡಿ’ ವಿಚಾರದಲ್ಲೂ ಹಾಗೆಯೇ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.