ಬಂಗಾರದ ಬೆಳೆ ತೆಗೆದ ‘ಕಲ್ಕಿ’; ನಾಲ್ಕೇ ದಿನಕ್ಕೆ 500 ಕೋಟಿ ರೂ. ಗಳಿಕೆ ಮಾಡಿದ ಪ್ರಭಾಸ್ ಸಿನಿಮಾ
‘ಕಲ್ಕಿ 2898 ಎಡಿ’ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಪ್ರಭಾಸ್, ಕಮಲ್ ಹಾಸನ್, ಅಮಿತಾಭ್ ಬಚ್ಚನ್ ಮೊದಲಾದವರು ಅಭಿನಯಿಸಿದ್ದಾರೆ. ಈ ಸಿನಿಮಾ 5 ಭಾಷೆಗಳಲ್ಲಿ ಬಿಡುಗಡೆ ಕಂಡಿದೆ. ಎಲ್ಲಾ ಭಾಷೆಗಳಿಂದ ಚಿತ್ರ ಭಾರತದಲ್ಲಿ 300 ಕೋಟಿ ಬಾಚಿದೆ. ಭಾನುವಾರ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.
‘ಕಲ್ಕಿ 2898 ಎಡಿ’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾ ಜೂನ್ 27ರಂದು ಬಿಡುಗಡೆ ಆಗಿದೆ. ಸದ್ಯ ಸಿನಿಮಾ ರಿಲೀಸ್ ಆಗಿ ನಾಲ್ಕು ದಿನ ಕಳೆದಿದ್ದು ಭಾರತದ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂಪಾಯಿ ಗಳಿಸುವತ್ತ ಹೆಜ್ಜೆ ಇಟ್ಟಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲೂ ಸಿನಿಮಾದ ಕಲೆಕ್ಷನ್ ಭರ್ಜರಿ ಆಗುತ್ತಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಹಾಕಿದ ಹಣ ಬಂದ ಖುಷಿಯಲ್ಲಿ ಚಿತ್ರತಂಡ ಇದೆ.
‘ಕಲ್ಕಿ 2898 ಎಡಿ’ ಚಿತ್ರದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆ ಕಂಡಿದೆ. ಎಲ್ಲಾ ಭಾಷೆಗಳಿಂದ ಚಿತ್ರ ಭಾರತದಲ್ಲಿ 300 ಕೋಟಿ ಬಾಚಿದೆ. ಭಾನುವಾರ ಈ ಸಿನಿಮಾ 83.2 ಕೋಟಿ ರೂಪಾಯಿ ಗಳಿಸಿದೆ.
First Ever Indian Film to sell 95K+ tickets in an hour on BookMyShow – #Kalki2898AD beating Jawan.
1.28M tickets sold in last 24 hours🔥🔥🔥🔥🔥
All Time Record ‘s Everywhere #Prabhas 😎😎😎 pic.twitter.com/5r1flpdGGa
— Siva Harsha (@SivaHarsha_23) June 30, 2024
‘ಕಲ್ಕಿ 2898 ಎಡಿ’ ಚಿತ್ರ ಮೂರು ದಿನಕ್ಕೆ ವಿಶ್ವ ಬಾಕ್ಸ್ ಆಫೀಸ್ನಲ್ಲಿ 415 ಕೋಟಿ ರೂಪಾಯಿ ಬಾಚಿಕೊಂಡಿತ್ತು. ನಾಲ್ಕನೇ ದಿನದ ವಿಶ್ವ ಮಾರುಕಟ್ಟೆ ಲೆಕ್ಕಾಚಾರ ಇನ್ನಷ್ಟೇ ಹೊರಬೀಳಬೇಕಿದೆ. ಅದನ್ನೂ ಸೇರಿದರೆ ಸಿನಿಮಾದ ಗಳಿಕೆ ವಿಶ್ವಮಟ್ಟದಲ್ಲಿ 500 ಕೋಟಿ ರೂಪಾಯಿ ದಾಟಲಿದೆ.
ಇದನ್ನೂ ಓದಿ: ಒಟಿಟಿಯಲ್ಲಿ ‘ಕಲ್ಕಿ 2898 ಎಡಿ’ ಸಿನಿಮಾ ನೋಡಬೇಕು ಎಂದುಕೊಂಡವರಿಗೆ ಬ್ಯಾಡ್ ನ್ಯೂಸ್
ಸದ್ಯ ಬಂದಿರೋದು ಮೊದಲನೆಯ ಭಾಗ ಮಾತ್ರ. ಎರಡನೇ ಭಾಗ ಕೂಡ ಬರಬೇಕಿದೆ. ಈ ಚಿತ್ರದ ಎರಡನೇ ಭಾಗದ ಶೂಟಿಂಗ್ ಶೇ. 60 ಪೂರ್ಣಗೊಂಡಿದೆ ಎಂದು ವರದಿ ಆಗಿದೆ. ಇದನ್ನು ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಚಿತ್ರವನ್ನು ಹಿಂದಿ ಮಂದಿ ಕೂಡ ಸಖತ್ ಇಷ್ಟಪಟ್ಟಿದ್ದಾರೆ. ಅಲ್ಲಿಯೂ ಚಿತ್ರ ಭರ್ಜರಿ ಗಳಿಕೆ ಮಾಡುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:53 am, Mon, 1 July 24