AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಜನಿಕಾಂತ್ ನಟನೆಯ ಈ ಸೂಪರ್ ಹಿಟ್ ಚಿತ್ರದ ಆಫರ್ ಮೊದಲು ಹೋಗಿದ್ದು ಕಮಲ್​ ಹಾಸನ್​ಗೆ

2010ರಲ್ಲಿ ‘ರೋಬೋ’ ಚಿತ್ರ ರಿಲೀಸ್ ಆಯಿತು. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಹೀರೋ ಆಗಿ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ನಟಿಸಲು ಮೊದಲು ಆಫರ್ ನೀಡಿದ್ದು ಕಮಲ್ ಹಾಸನ್​ಗೆ ಅನ್ನೋದು ವಿಶೇಷ. ಆ ಬಗ್ಗೆ ಇಲ್ಲಿದೆ ವಿವರ.

ರಜನಿಕಾಂತ್ ನಟನೆಯ ಈ ಸೂಪರ್ ಹಿಟ್ ಚಿತ್ರದ ಆಫರ್ ಮೊದಲು ಹೋಗಿದ್ದು ಕಮಲ್​ ಹಾಸನ್​ಗೆ
ರಜನಿಕಾಂತ್ ನಟನೆಯ ಈ ಸೂಪರ್ ಹಿಟ್ ಚಿತ್ರದ ಆಫರ್ ಮೊದಲು ಹೋಗಿದ್ದು ಕಮಲ್​ ಹಾಸನ್​ಗೆ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on:Jul 01, 2024 | 9:03 AM

Share

ಕಮಲ್ ಹಾಸನ್ ಅವರು ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ನೆಗೆಟಿವ್ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಕಲ್ಕಿ ಚಿತ್ರದ ಸೀಕ್ವೆಲ್​ಗೆ ಅವರೇ ವಿಲನ್. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಹಲವು ಗೆಟಪ್​ನಲ್ಲಿ ಕಮಲ್ ಹಾಸನ್ ಮಿಂಚಲಿದ್ದಾರೆ. ಈ ಚಿತ್ರವನ್ನು ನಿರ್ದೇಶನ ಮಾಡಿದ್ದು ಶಂಕರ್. ‘ರೋಬೋ’ ಚಿತ್ರವನ್ನು ಶಂಕರ್ ಅವರೇ ನಿರ್ದೇಶನ ಮಾಡಿದ್ದರು. ಕಮಲ್ ಹಾಸನ್ ಈ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಈ ಚಿತ್ರದ ಆಫರ್ ರಜನಿಗೆ ಹೋಯಿತು.

2010ರಲ್ಲಿ ‘ರೋಬೋ’ ಚಿತ್ರ ರಿಲೀಸ್ ಆಯಿತು. ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ರಜನಿಕಾಂತ್ ಹೀರೋ ಆಗಿ ನಟಿಸಿದ್ದರು. ಈ ಸಿನಿಮಾ ಭರ್ಜರಿ ಮೆಚ್ಚುಗೆ ಪಡೆಯಿತು. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲೂ ಗಮನ ಸೆಳೆಯಿತು. ಆರಂಭದಲ್ಲಿ ಕಮಲ್ ಹಾಸನ್ ಹಾಗೂ ಪ್ರೀತಿ ಜಿಂಟಾ ಅವರನ್ನು ಇಟ್ಟುಕೊಂಡು ಈ ಸಿನಿಮಾ ಮಾಡಬೇಕು ಎಂಬುದು ಶಂಕರ್ ಉದ್ದೇಶ ಆಗಿತ್ತು. ಇವರ ಲುಕ್ ಟೆಸ್ಟ್ ಕೂಡ ಆಗಿತ್ತು.

ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಕಮಲ್ ಹಾಸನ್ ಅವರು ಈ ಬಗ್ಗೆ ಮಾತನಾಡಿದ್ದಾರೆ. ಅಚ್ಚರಿ ಎಂದರೆ ಅಕ್ಷಯ್ ಕುಮಾರ್ ಮಾಡಿದ್ದ ವಿಲನ್ ಪಾತ್ರದಲ್ಲಿ ನಟಿಸೋಕೂ ಕಮಲ್ ಹಾಸನ್​ಗೆ ಆಫರ್ ಹೋಗಿತ್ತು. ಇದನ್ನೂ ಅವರು ಅಲ್ಲಗಳೆದರು. ‘ಐ ರೋಬೋಟ್ ಕಾದಂಬರಿಯನ್ನು ಸಿನಿಮಾ ಮಾಡುವ ಬಗ್ಗೆ ನಾನು, ಶಂಕರ್ ಹಾಗೂ ಈ ಕಾದಂಬರಿ ಬರೆದ ಸುಜಾತಾ ಚರ್ಚೆ ಮಾಡಿದ್ದೆವು. ಅದೂ 90ರ ದಶಕದಲ್ಲಿ. ಲುಕ್ ಟೆಸ್ಟ್ ಕೂಡ ಮಾಡಲಾಗಿತ್ತು. ಆದರೆ ಬಜೆಟ್, ಸಂಭಾವನೆ ಸೇರಿ ಅನೇಕ ವಿಚಾರದಿಂದ ಸಿನಿಮಾ ಫೈನಲ್ ಆಗಿಲ್ಲ’ ಎಂದಿದ್ದಾರೆ ಕಮಲ್ ಹಾಸನ್.

‘ಆ ಸಮಯದ ಮಾರುಕಟ್ಟೆ ಪರಿಸ್ಥಿತಿ ನೋಡಿ ಈ ಸಿನಿಮಾ ಮಾಡೋದು ಸರಿ ಅಲ್ಲ ಎಂದೆನಿಸಿತು. ಹೀಗಾಗಿ ನಾನು ಸಿನಿಮಾದಿಂದ ಹಿಂದೆ ಸರಿದೆ. ಆದರೆ, ಶಂಕರ್ ಅವರು ಇದನ್ನು ಬಿಡಲಿಲ್ಲ. ಕೆಲವು ವರ್ಷ ಬಿಟ್ಟು ಅವರು ಸಿನಿಮಾನ ನಿರ್ದೇಶನ ಮಾಡಿದರು. ಅದು ದೊಡ್ಡ ಗೆಲುವು ಕಂಡಿತು’ ಎಂದಿದ್ದಾರೆ ಶಂಕರ್. 100 ಕೋಟಿ ರೂಪಾಯಿ ಗಳಿಕೆ ಮಾಡಿದರೇ ದೊಡ್ಡದು ಎಂದಿದ್ದ ಕಾಲದಲ್ಲಿ ಈ ಚಿತ್ರ 300+ ಕೋಟಿ ರೂಪಾಯಿ ಬಾಚಿಕೊಂಡಿತ್ತು.

ಇದನ್ನೂ ಓದಿ: ‘ಇಂಡಿಯನ್ 2’ ಬಜೆಟ್​ ಮಿತಿಮೀರಲು ಕಾರಣವೇನು? ಕಮಲ್ ಹಾಸನ್ ಕೊಟ್ಟರು ಉತ್ತರ

‘ಶಂಕರ್ ಅವರು 2.O ಸಂದರ್ಭದಲ್ಲೂ ನನ್ನನ್ನು ಆ ಸಂದರ್ಭದಲ್ಲಿ ಅಪ್ರೋಚ್ ಮಾಡಿದರು. ನನಗೆ ವಿಲನ್ ರೋಲ್ ಕೊಟ್ಟಿದ್ದರು. ನಾನು ಇನ್ನಷ್ಟು ವರ್ಷ ಹೀರೋ ಆಗಿ ಚಿತ್ರರಂಗದಲ್ಲಿ ಮುಂದುವರಿಯಲಿ ಬಯಸುತ್ತೇನೆ ಎಂದು ಹೇಳಿದ್ದೆ’ ಎಂದಿದ್ದಾರೆ ಕಮಲ್ ಹಾಸನ್.

‘ಎಂದಿರನ್’ ಅನ್ನೋದು ಸಿನಿಮಾದ ಮೂಲ ಹೆಸರು. ಇದರ ಹಿಂದಿ ವರ್ಷನ್​ಗೆ ‘ರೋಬೋ’ ಎಂದು ಕರೆಯಲಾಯಿತು. ಈ ಚಿತ್ರದಲ್ಲಿ ರಜನಿ, ಐಶ್ವರ್ಯಾ ರೈ ಮೊದಲಾದವರು ನಟಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:02 am, Mon, 1 July 24