‘ಅಜ್ಜಿ-ತಂದೆಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ’; ಸಮಾಧಿ ತೊಳೆದು ವಿಶೇಷ ವಿಡಿಯೋ ಮಾಡಿದ ರಕ್ಷಕ್ ಬುಲೆಟ್

ರಕ್ಷಕ್ ಅವರು ‘ಬಿಗ್ ಬಾಸ್​ ಕನ್ನಡ ಸೀನ್ 10’ರಲ್ಲಿ ಭಾಗಿ ಆಗಿದ್ದರು. ಒಂದೇ ತಿಂಗಳಿಗೆ ಅವರು ಎಲಿಮಿನೇಟ್ ಆದರು. . ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಂದೆ ಬುಲೆಟ್ ಪ್ರಕಾಶ್ ಹಾಗೂ ಅಜ್ಜಿ ಗೌರಮ್ಮ ಅವರ ಸಮಾಧಿಯನ್ನು ತೊಳೆದಿದ್ದಾರೆ.

‘ಅಜ್ಜಿ-ತಂದೆಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ’; ಸಮಾಧಿ ತೊಳೆದು ವಿಶೇಷ ವಿಡಿಯೋ ಮಾಡಿದ ರಕ್ಷಕ್ ಬುಲೆಟ್
ರಕ್ಷಕ್
Follow us
ರಾಜೇಶ್ ದುಗ್ಗುಮನೆ
|

Updated on:Jul 01, 2024 | 9:01 AM

ರಕ್ಷಕ್ ಬುಲೆಟ್ ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಸತ್ಯಕ್ಕೆ ದೂರವಾದ ಮಾತನ್ನು ಹೇಳುತ್ತಾ ಅವರು ಚರ್ಚೆ ಆಗುತ್ತಾರೆ. ಕೆಲವೊಮ್ಮೆ ಅವರು ಬಿಲ್ಡಪ್​ ಕೊಟ್ಟಿಕೊಂಡು ಓಡಾಡುತ್ತಾರೆ. ಈ ಕಾರಣಕ್ಕೆ ಅವರು ಅನೇಕ ಬಾರಿ ಟ್ರೋಲ್ ಆಗಿದ್ದೂ ಇದೆ. ಈಗ ಅವರ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ತಂದೆ ಬುಲೆಟ್ ಪ್ರಕಾಶ್ ಹಾಗೂ ಅಜ್ಜಿ ಗೌರಮ್ಮ ಅವರ ಸಮಾಧಿಯನ್ನು ತೊಳೆದಿದ್ದಾರೆ. ಈ ವಿಡಿಯೋಗೆ ಎಲ್ಲಾ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.

ಗೌರಮ್ಮ ಹಾಗೂ ಬುಲೆಟ್ ಪ್ರಕಾಶ್ ಸಮಾಧಿ ಅಕ್ಕ ಪಕ್ಕದಲ್ಲೇ ಇದೆ. ಈ ಸಮಾಧಿಗೆ ರಕ್ಷಕ್ ಬುಲೆಟ್ ಭೇಟಿ ನೀಡಿದ್ದಾರೆ. ‘ನನಗೆ ಎಷ್ಟೇ ಖುಷಿ ಆಗಲಿ, ಬೇಸರ ಆಗಲಿ ನಾನು ಇಲ್ಲಿಗೆ ಬಂದು ಐದು ನಿಮಿಷ ಕುಳಿತು ನನ್ನ ಮನಸ್ಸಿನ ಮಾತನ್ನು ಹೇಳಿದಾಗ ತುಂಬಾ ಖುಷಿ ಎನಿಸುತ್ತದೆ. ನಾವು ಕ್ಲೀನ್ ಆಗಿದ್ದಂತೆ, ಇವರು ಕ್ಲೀನ್ ಆಗಿರಬೇಕು. ಹೀಗಾಗಿ, ವಾರಕ್ಕೆ ಒಮ್ಮೆ ಬಂದು ಇಲ್ಲಿ ಸಮಾಧಿ ತೊಳೆದು ಹೋಗುತ್ತೇನೆ’ ಎಂದಿದ್ದಾರೆ ರಕ್ಷಕ್.

‘ರಕ್ಷಕ್ ಮೂರೇ ವರ್ಷದಲ್ಲಿ ಹೇಗೆ ಬೆಳೆದ ಎಂದು ಎಲ್ಲರೂ ಕೇಳುತ್ತಾರೆ. ಅದರ ಹಿಂದೆ ಒಂದು ಶ್ರಮ ಇದೆ. ನಮ್ಮ ಅಜ್ಜಿ, ತಂದೆನ ತುಂಬಾ ಚೆನ್ನಾಗಿ ನೋಡಿಕೊಂಡಿದ್ದೇನೆ. ಮಗು ರೀತಿ ನೋಡಿಕೊಂಡಿದ್ದೇನೆ. ಊದಿನಕಡ್ಡಿ ಹಚ್ಚಿ, ಅವರಿಷ್ಟದ ತಿಂಡಿನ ಇಟ್ಟು ಹೋಗುತ್ತೇನೆ. ನಮಸ್ಕಾರ ಮಾಡಿ ಹೋಗುತ್ತೇನೆ. ದೊಡ್ಡವರ ಆಶೀರ್ವಾದ ಇದ್ದರೆ ಬೆಳೆಯುತ್ತೀರಾ. ದೊಡ್ಡವರ ಆಶೀರ್ವಾದವೇ ಇದಕ್ಕೆ ಕಾರಣ’ ಎಂದಿದ್ದಾರೆ ರಕ್ಷಕ್.

ಇದನ್ನೂ ಓದಿ: ‘ಹತ್ತಿರವಾದವರು ಕಷ್ಟ ಅನುಭವಿಸುತ್ತಿರುವಾಗ ಸಂಭ್ರಮಾಚರಣೆ ಸರಿಯಲ್ಲ’ ಎಂದ ರಕ್ಷಕ್ ಬುಲೆಟ್

ರಕ್ಷಕ್ ಅವರು ವಿಡಿಯೋಗಳನ್ನು ಹಂಚಿಕೊಂಡಾಗ ನೆಗೆಟಿವ್ ಕಮೆಂಟ್​ಗಳು ಬರೋದೆ ಹೆಚ್ಚು. ಆದರೆ, ಈಗ ಅವರು ಹಂಚಿಕೊಂಡಿರೋ ಈ ವಿಡಿಯೋಗೆ ಎಲ್ಲ ಕಡೆಗಳಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಎಲ್ಲರೂ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ರಕ್ಷಕ್ ಅವರು ‘ಬಿಗ್ ಬಾಸ್​ ಕನ್ನಡ ಸೀನ್ 10’ರಲ್ಲಿ ಭಾಗಿ ಆಗಿದ್ದರು. ಒಂದೇ ತಿಂಗಳಿಗೆ ಅವರು ಎಲಿಮಿನೇಟ್ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:00 am, Mon, 1 July 24