AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಪರ್​ಸ್ಟಾರ್ ಆದಮೇಲೆ ರಜನಿ ಜೊತೆ ಏಕೆ ನಟಿಸಲಿಲ್ಲ? ಒಪ್ಪಂದದ ಬಗ್ಗೆ ಹೇಳಿದ ಕಮಲ್ ಹಾಸನ್

ಕಾಲಿವುಡ್​ನಲ್ಲಿ ರಜನಿಕಾಂತ್ ಹಾಗೂ ಕಮಲ್ ಹಾಸನ್​ಗೆ ಭರ್ಜರಿ ಬೇಡಿಕೆ ಇದೆ. ಇಬ್ಬರೂ ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇತ್ತೀಚೆಗೆ ಇವರು ಒಟ್ಟಾಗಿ ನಟಿಸಿಲ್ಲ. ಈಗ ಇಬ್ಬರೂ ಒಟ್ಟಾಗಿ ನಟಿಸಲು ಕಾರಣ ಏನು ಎಂಬುದನ್ನು ಕಮಲ್ ಹಾಸನ್ ಅವರು ರಿವೀಲ್ ಮಾಡಿದ್ದಾರೆ.

ಸೂಪರ್​ಸ್ಟಾರ್ ಆದಮೇಲೆ ರಜನಿ ಜೊತೆ ಏಕೆ ನಟಿಸಲಿಲ್ಲ? ಒಪ್ಪಂದದ ಬಗ್ಗೆ ಹೇಳಿದ ಕಮಲ್ ಹಾಸನ್
ರಜನಿ-ಕಮಲ್ ಹಾಸನ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Jul 02, 2024 | 8:53 AM

Share

ಕಮಲ್ ಹಾಸನ್ ಹಾಗೂ ರಜನಿಕಾಂತ್ ಅವರು ತಮಿಳು ಚಿತ್ರರಂಗದ ಎರಡು ದೊಡ್ಡ ಸ್ಟಾರ್​ಗಳು. ಇವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ಅಪೂರ್ವ ರಾಗಂಗಳ್’, ‘ಗಿರಫ್ತಾರ್’ ಸೇರಿ 16 ಚಿತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಆದರೆ, ಇಬ್ಬರಿಗೂ ಸ್ಟಾರ್ ಪಟ್ಟ ಸಿಕ್ಕ ಬಳಿಕ ಇವರು ಒಟ್ಟಾಗಿ ನಟಿಸಿಯೇ ಇಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇಬ್ಬರೂ ಒಟ್ಟಾಗಿ ನಟಿಸಲಿ ಎಂಬುದು ಫ್ಯಾನ್ಸ್ ಬಯಕೆ. ಇಬ್ಬರೂ ಒಂದಾಗದಿರಲು ಕಾರಣ ಏನು ಎಂಬುದನ್ನು ಕಮಲ್ ಹಾಸನ್ ಅವರು ರಿವೀಲ್ ಮಾಡಿದ್ದಾರೆ.

ಎರಡು ಸ್ಟಾರ್​ಗಳು ಒಟ್ಟಾಗಿ ಕೆಲಸ ಮಾಡದೆ ಇರಲು ಹಲವು ಕಾರಣ ಇರುತ್ತದೆ. ಎರಡೂ ಹೀರೋಗಳನ್ನು ಒಟ್ಟಾಗಿ ಹ್ಯಾಂಡಲ್​ ಮಾಡಬಲ್ಲ ನಿರ್ದೇಶಕರು ಸಿಕ್ಕಿರುವುದಿಲ್ಲ. ಇನ್ನು ಸಿನಿಮಾದ ಬಜೆಟ್ ಕೂಡ ಹೆಚ್ಚುವುದರಿಂದ ನಿರ್ಮಾಪಕರು ಕೂಡ ರೆಡಿ ಇರಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಒಳ್ಳೆಯ ಕಥೆ ಸಿಗಬೇಕಾಗುತ್ತದೆ. ಈ ಬಗ್ಗೆ ಕಮಲ್ ಹಾಸನ್ ಅವರು ಮಾತನಾಡಿದ್ದಾರೆ.

‘ಇದು ಹೊಸ ಕಾಂಬಿನೇಷನ್ ಅಲ್ಲ. ನಾವಿಬ್ಬರೂ ಒಟ್ಟಾಗಿ ಹಲವು ಸಿನಿಮಾ ಮಾಡಿದ್ದೇವೆ. ಆ ಬಳಿಕ ನಾವು ಒಟ್ಟಾಗಿ ಕೆಲಸ ಮಾಡಬಾರದು ಎಂದು ನಿರ್ಧರಿಸಿದೆವು. ನಾವು ಸ್ಪರ್ಧಿಗಳು ಎಂದಲ್ಲ. ನಮ್ಮಿಬ್ಬರಿಗೂ ಇದ್ದಿದ್ದು ಒಂದೇ ಮೆಂಟರ್ (ತಮಿಳು ನಿರ್ದೇಶಕ ಕೆ ಬಾಲಚಂದರ್). ಇಲ್ಲಿ ಸ್ಪರ್ಧೆ ಇದೆ. ಆದರೆ, ಯಾವುದೇ ವೈರತ್ವ ಇಲ್ಲ. ನಮ್ಮಿಬ್ಬರದ್ದೂ ಬೇರೆ ಬೇರೆ ದಾರಿ’ ಎಂದಿದ್ದಾರೆ ಕಮಲ್ ಹಾಸನ್

‘ನಾವು ಒಬ್ಬರ ವಿರುದ್ಧ ಒಬ್ಬರು ಮಾತನಾಡಿಲ್ಲ. 20ರ ಹರೆಯದಲ್ಲೇ ಈ ಬಗ್ಗೆ ನಾವು ಮಾತನಾಡಿಕೊಂಡಿದ್ದೆವು’ ಎಂದಿದ್ದಾರೆ ಕಮಲ್ ಹಾಸನ್. ಈ ಮೂಲಕ ಒಟ್ಟಿಗೆ ನಟಿಸದೆ ಇರಲು ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಕಮಲ್ ಹಾಸನ್ ಹಾಗೂ ರಜನಿಕಾಂತ್ ಇಬ್ಬರೂ ಆ್ಯಕ್ಷನ್ ಸಿನಿಮಾಗಳ ಮೂಲಕ ಮಿಂಚುತ್ತಿದ್ದಾರೆ. ಇಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದರೆ ಚಿತ್ರದ ತೂಕ ಹೆಚ್ಚುತ್ತದೆ ಅನ್ನೋದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ಸಲ್ಮಾನ್ ಖಾನ್, ಕಮಲ್ ಹಾಸನ್ ಜೊತೆ ಅಟ್ಲಿ ಹೊಸ ಸಿನಿಮಾ? ಸನ್ ಪಿಕ್ಚರ್ಸ್ ನಿರ್ಮಾಣ

ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ‘ಕಲ್ಕಿ 2898 ಎಡಿ’ ಚಿತ್ರ ಇತ್ತೀಚೆಗೆ ರಿಲೀಸ್ ಆಗಿದೆ. ಪ್ರಭಾಸ್, ಅಮಿತಾಭ್ ಬಚ್ಚನ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ 635 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನು, ಕಮಲ್ ಹಾಸನ್ ಅವರು ‘ಇಂಡಿಯನ್ 2’ ಚಿತ್ರದಲ್ಲಿ ನಟಿಸಿದ್ದಾರೆ. ಶಂಕರ್ ನಿರ್ದೇಶನದ ಈ ಸಿನಿಮಾದ ಟ್ರೇಲರ್ ಮೆಚ್ಚುಗೆ ಪಡೆಯುತ್ತಿದೆ. ಕಮಲ್ ಹಾಸನ್ ಅವರು ಸಲ್ಮಾನ್ ಖಾನ್ ಜೊತೆ ಹಿಂದಿ ಸಿನಿಮಾ ಮಾಡುತ್ತಾರೆ ಎನ್ನುವ ವರದಿಯೂ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:26 am, Tue, 2 July 24