AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲಿನಿಂದ ಹಗಲು-ರಾತ್ರಿ ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗೆ ಬೇಡಿಕೆ ಇಡುತ್ತಿರುವ ದರ್ಶನ್

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್ ಅವರು ಬೇಲ್​ ಪಡೆಯಲು ಸಖತ್ ಪ್ರಯತ್ನ ಮಾಡುತ್ತಿದ್ದಾರೆ. ಜೈಲಿನಿಂದಲೇ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಫೋನ್​ ಕರೆ ಮಾಡಿ ಜಾಮೀನಿಗಾಗಿ ಒತ್ತಾಯಿಸುತ್ತಿದ್ದಾರೆ. ವಾರಕ್ಕೆ ಮೂರು ಬಾರಿ ಕರೆ ಮಾಡುವ ಅವಕಾಶ ಇದೆ. ಆ ಮೂರು ಬಾರಿಗೂ ದರ್ಶನ್​ ಅವರು ನಿರ್ಮಾಪಕರಿಗೆ ಕರೆ ಮಾಡಿದ್ದಾರೆ. ಅಕ್ಕ-ಪಕ್ಕದ ಖೈದಿಗಳ ಲಿಮಿಟ್​ ಕೂಡ ದರ್ಶನ್​ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

ಜೈಲಿನಿಂದ ಹಗಲು-ರಾತ್ರಿ ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗೆ ಬೇಡಿಕೆ ಇಡುತ್ತಿರುವ ದರ್ಶನ್
ದರ್ಶನ್​
Kiran HV
| Edited By: |

Updated on: Jul 02, 2024 | 3:36 PM

Share

ದೇಶಾದ್ಯಂತ ಸುದ್ದಿ ಆಗಿರುವ ರೇಣುಕಾ ಸ್ವಾಮಿ (Renuka Swamy) ಕೊಲೆ ಕೇಸ್​ನಲ್ಲಿ ನಟ ದರ್ಶನ್​ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರು ನ್ಯಾಯಾಂಗ ಬಂಧನಕ್ಕೆ ಒಳಗಾಗಿ 11 ದಿನ ಆಗಿದೆ. ಆದಷ್ಟು ಬೇಗ ಜಾಮೀನು ಪಡೆಯಬೇಕು ಎಂದು ದರ್ಶನ್​ (Darshan) ಪ್ರಯತ್ನಿಸುತ್ತಿದ್ದಾರೆ. ಜೈಲಿನಲ್ಲಿ ದಿನ ಕಳೆಯುವುದು ದರ್ಶನ್​ಗೆ ಕಷ್ಟ ಆಗುತ್ತಿದೆ. ಅದಕ್ಕಾಗಿ ಅವರು ಚಿತ್ರರಂಗದಲ್ಲಿ ತಮಗೆ ಆಪ್ತರಾಗಿರುವ ಕೆಲವು ನಿರ್ಮಾಪಕರಿಗೆ ಕರೆ ಮಾಡಿ ಜಾಮೀನಿಗಾಗಿ ಒತ್ತಾಯ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಪರಪ್ಪನ ಅಗ್ರಹಾರ (Parappana Agrahara) ಜೈಲಿನಿಂದ ಹಗಲು-ರಾತ್ರಿ ಕರೆ ಮಾಡಿ ಜಾಮೀನಿಗೆ ವ್ಯವಸ್ಥೆ ಮಾಡುವಂತೆ ದರ್ಶನ್​ ಕೋರುತ್ತಿದ್ದಾರೆ.

ವಾರಕ್ಕೆ 3 ಬಾರಿ ಫೋನ್ ಕರೆ ಮಾಡಲು ಜೈಲಿನ ಸಿಬ್ಬಂದಿ ಅವಕಾಶ ಕೊಟ್ಟಿದ್ದಾರೆ. ಜೈಲಿನ ಫೋನ್ ಬೂತ್‌ನಿಂದ ದರ್ಶನ್ ಕರೆ ಮಾಡುತ್ತಿದ್ದಾರೆ. ಆದರೆ ಈವರೆಗೆ ಒಂದೇ ಒಂದು ಬಾರಿಯೂ ಅವರು ತಮ್ಮ ಕುಟುಂಬದವರಿಗೆ ಫೋನ್​ ಮಾಡಿಲ್ಲ. ಬದಲಿಗೆ, ನಿರ್ಮಾಪಕರಿಗೆ ಮತ್ತು ನಿರ್ದೇಶಕರಿಗೆ ಕರೆ ಮಾಡಿ ಜಾಮೀನಿಗಾಗಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ರಾತ್ರಿಯಾದರೆ ಸಾಕು ದರ್ಶನ್​ ಕಡೆಯಿಂದ ನಿರ್ಮಾಪಕರಿಗೆ ಫೋನ್ ಕರೆಗಳು ಹೋಗಲು ಶುರುವಾಗುತ್ತವೆ.

ಹೇಗಾದರೂ ಮಾಡಿ ತಮ್ಮನ್ನು ಜೈಲಿನಿಂದ ಹೊರಗೆ ತರುವಂತೆ ದರ್ಶನ್​ ಒತ್ತಾಯ ಮಾಡುತ್ತಿದ್ದಾರೆ. ಅಕ್ಕ-ಪಕ್ಕದ ಖೈದಿಗಳಿಗೆ ಮೀಸಲಾಗಿದ್ದ ಫೋನ್​ ಕರೆಗಳನ್ನು ಕೂಡ ದರ್ಶನ್​ ಅವರೇ ಬಳಸಿಕೊಳ್ಳುತ್ತಿದ್ದಾರೆ. ಜಾಮೀನು ಪಡೆಯಬೇಕು ಎಂಬ ಹಂಬಲ ಅವರಲ್ಲಿ ಹೆಚ್ಚಾಗಿದೆ. ಸತತ 11 ದಿನಗಳಿಂದ ಜೈಲು ವಾಸದಲ್ಲಿ ಇರುವ ದರ್ಶನ್​ ಅವರನ್ನು ನೋಡಲು ಪರಪ್ಪನ ಅಗ್ರಹಾರದ ಬಳಿ ಅನೇಕರು ಬರುತ್ತಿದ್ದಾರೆ.

ಹೇಗಿದೆ ದರ್ಶನ್​ ಪರಿಸ್ಥಿತಿ?

ಪವಿತ್ರಾ ಗೌಡ ಜೊತೆ ದರ್ಶನ್​ ಜೈಲು ಸೇರಿದ ಕೂಡಲೇ ನಟನ ಕುಟುಂಬದವರು ಭೇಟಿಯಾಗಲು ಬಂದಿರಲಿಲ್ಲ. ನಂತರ ಪತ್ನಿ ವಿಜಯಲಕ್ಷ್ಮಿ ಅವರು ಜೈಲಿಗೆ ಭೇಟಿ ನೀಡಿದರು. ಆ ಬಳಿಕ ಸಹೋದರ ದಿನಕರ್ ತೂಗುದೀಪ, ತಾಯಿ ಮೀನಾ ಕೂಡ ಪರಪ್ಪನ ಅಗ್ರಗಾರಕ್ಕೆ ಬಂದು ದರ್ಶನ್​ ಅವರನ್ನು ಮಾತನಾಡಿಸಿದರು. ಕುಟುಂಬದರ ಭೇಟಿಯ ಬಳಿಕ ದರ್ಶನ್​ ಅವರು ಸ್ವಲ್ಪ ರಿಲ್ಯಾಕ್ಸ್​ ಆಗಿದ್ದಾರೆ.

ಇದನ್ನೂ ಓದಿ: ‘ದರ್ಶನ್​ ರಿಲೀಸ್​ ಆಗ್ತಾರಾ?’: ದೇವರಿಗೆ ಪ್ರಶ್ನೆ ಕೇಳಿ ಉತ್ತರ ಪಡೆದ ಪೂಜಾರಿ

ಜುಲೈ 1ರಂದು ತಾಯಿ, ತಮ್ಮ, ಪತ್ನಿ, ಅಕ್ಕ ಸೇರಿದಂತೆ ದರ್ಶನ್ ಕುಟುಂಬದ ಹಲವರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು. ಇದರಿಂದ ದರ್ಶನ್​ಗೆ ಸ್ವಲ್ಪ ಸಮಾಧಾನ ಆಗಿದೆ. ಹಾಗಾಗಿ, ರಾತ್ರಿ ಬೇಗನೇ ನಿದ್ರೆಗೆ ಜಾರಿದ್ದ ಅವರು ಇಂದು (ಜುಲೈ 2) ಬೆಳಿಗ್ಗೆ ಬೇಗ ಎದ್ದು ಸೆಲ್​ನಲ್ಲೇ ಕೆಲವೊತ್ತು ವಾಕಿಂಗ್ ಮಾಡಿದ್ದಾರೆ. ಜೈಲ್ ಸಿಬ್ಬಂದಿ ಬಳಿ ಬಿಸಿನೀರು ಕೇಳಿ ಪಡೆದರು. ಜೈಲಿನ ಮೆನುವಿನಂತೆ ದರ್ಶನ್​ಗೆ ಅವಲಕ್ಕಿ, ಉಪ್ಪಿಟ್ಟು ನೀಡಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
RSS, ಬಿಜೆಪಿ ಹಿಂದೂ ರಾಷ್ಟ್ರ ಮಾಡಲು ಹೊರಟಿಲ್ಲ, ಈಗಾಗಲೇ ಇದೆ: ಜೋಶಿ
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!