ಇತಿಹಾಸ ಬರೆದ ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್

Kichcha Sudeep-PV Sindhu: ಕ್ರಿಕೆಟ್ ಎಂದರೆ ಎಲ್ಲಿಲ್ಲದ ಉತ್ಸಾಹದಿಂದ ಫೀಲ್ಡ್​​ಗೆ ಇಳಿಯುತ್ತಾರೆ ಸುದೀಪ್. ಕ್ರಿಕೆಟ್ ಆಡುವುದು ಮಾತ್ರವೇ ಅಲ್ಲದೆ ಆಟದ ಬಗ್ಗೆ ಅಪಾರ ಪ್ರೀತಿ, ಗೌರವಗಳನ್ನು ಸಹ ಹೊಂದಿದ್ದಾರೆ. ಅಂದಹಾಗೆ ಸುದೀಪ್ ಅವರ ಕ್ರೀಡಾ ಪ್ರೀತಿ ಕ್ರಿಕೆಟ್​​ಗೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ಕ್ರೀಡೆಯನ್ನಾಗಲಿ, ಕ್ರೀಡಾಪಟುವನ್ನಾಗಲಿ ಅವರು ಗೌರವದಿಂದ ಕಾಣುತ್ತಾರೆ. ಇದಕ್ಕೆ ಜಾತಾ ಉದಾಹರಣೆ ಭಾರತದ ಹೆಮ್ಮೆಯ ಬ್ಯಾಡ್​​ಮಿಂಟನ್ ಆಟಗಾರ್ತಿ ಪಿವಿ ಸಿಂಧು.

ಇತಿಹಾಸ ಬರೆದ ಪಿವಿ ಸಿಂಧುಗೆ ವಿಶೇಷ ಉಡುಗೊರೆ ಕೊಟ್ಟ ಕಿಚ್ಚ ಸುದೀಪ್
Sudeep Pv Sindhu

Updated on: Jul 30, 2026 | 12:36 PM

ಕಿಚ್ಚ ಸುದೀಪ್ (Kichcha Sudeep) ಅದ್ಭುತ ನಟ, ನಿರ್ದೇಶಕ ಆಗಿರುವ ಜೊತೆಗೆ ಕ್ರೀಡಾಪಟು ಮತ್ತು ಕ್ರೀಡಾಪ್ರೇಮಿ ಸಹ. ಪ್ರತಿ ವರ್ಷವೂ ತಂಡವೊಂದನ್ನು ಕಟ್ಟಿಕೊಂಡು ಕ್ರಿಕೆಟ್ ಆಡುತ್ತಾ, ಪ್ರೇಕ್ಷಕರನ್ನು ರಂಜಿಸುತ್ತಾ ಬರುತ್ತಿದ್ದಾರೆ ಸುದೀಪ್. ಕ್ರಿಕೆಟ್ ಎಂದರೆ ಎಲ್ಲಿಲ್ಲದ ಉತ್ಸಾಹದಿಂದ ಫೀಲ್ಡ್​​ಗೆ ಇಳಿಯುತ್ತಾರೆ. ಕ್ರಿಕೆಟ್ ಆಡುವುದು ಮಾತ್ರವೇ ಅಲ್ಲದೆ ಆಟದ ಬಗ್ಗೆ ಅಪಾರ ಪ್ರೀತಿ, ಗೌರವಗಳನ್ನು ಸಹ ಹೊಂದಿದ್ದಾರೆ. ಅಂದಹಾಗೆ ಸುದೀಪ್ ಅವರ ಕ್ರೀಡಾ ಪ್ರೀತಿ ಕ್ರಿಕೆಟ್​​ಗೆ ಮಾತ್ರ ಸೀಮಿತವಾಗಿಲ್ಲ. ಯಾವುದೇ ಕ್ರೀಡೆಯನ್ನಾಗಲಿ, ಕ್ರೀಡಾಪಟುವನ್ನಾಗಲಿ ಅವರು ಗೌರವದಿಂದ ಕಾಣುತ್ತಾರೆ. ಇದಕ್ಕೆ ಜಾತಾ ಉದಾಹರಣೆ ಭಾರತದ ಹೆಮ್ಮೆಯ ಬ್ಯಾಡ್​​ಮಿಂಟನ್ ಆಟಗಾರ್ತಿ ಪಿವಿ ಸಿಂಧು.

ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದು ತಂದಿರುವ ಹೆಮ್ಮೆಯ ಬ್ಯಾಡ್​ಮಿಂಟನ್ ಆಟಗಾರ್ತಿ ಪಿವಿ ಸಿಂಧು, ಇತ್ತೀಚೆಗಷ್ಟೆ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಜಪಾನ್ ಓಪನ್ ಸೂಪರ್ 750 ಟೂರ್ನಿಯಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಈ ಟೂರ್ನಿ ಗೆದ್ದ ಮೊಟ್ಟ ಮೊದಲ ಭಾರತೀಯ ಆಟಗಾರ್ತಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಪಿವಿ ಸಿಂಧು ಅವರ ಈ ಸಾಧನೆಯನ್ನು ಹಲವರು ಗುರುತಿಸಿಲ್ಲ. ಬಹಳ ಕಡಿಮೆ ಮಂದಿ ಪಿವಿ ಸಿಂಧು ಅವರ ಈ ಸಾಧನೆಯನ್ನು ಗುರುತಿಸಿ ಅವರಿಗೆ ಶುಭಾಶಯ ಹೇಳಿದ್ದಾರೆ. ಅದರಲ್ಲಿ ನಟ ಕಿಚ್ಚ ಸುದೀಪ್ ಸಹ ಒಬ್ಬರು.

ಇದನ್ನೂ ಓದಿ:ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಕಿಚ್ಚ ಸುದೀಪ್?

ಜಪಾನ್ ಟೂರ್ನಿ ಗೆದ್ದ ಪಿವಿ ಸಿಂಧು ಅವರಿಗೆ ವಿಶೇಷ ಉಡುಗೊರೆಯನ್ನು ಸುದೀಪ್ ಕಳಿಸಿದ್ದಾರೆ. ವಿಶೇಷವಾದ ಅಭಿನಂದನಾ ಪತ್ರವನ್ನು ಸುದೀಪ್, ಸಿಂಧು ಅವರಿಗೆ ಕಳಿಸಿದ್ದು, ‘ಜಪಾನ್ ಓಪನ್‌ನಲ್ಲಿ ದಾಖಲೆ ಮುರಿಯುವಂತಹ ಅದ್ಭುತ ಗೆಲುವು ಸಾಧಿಸಿದ್ದಕ್ಕಾಗಿ ನಿಮಗೆ ಹೃದಯಪೂರ್ವಕ ಅಭಿನಂದನೆಗಳು. ನಮ್ಮ ಪ್ರೀತಿಯ ದೇಶವನ್ನು ಮತ್ತೊಮ್ಮೆ ವಿಶ್ವ ಭೂಪಟದಲ್ಲಿ ಎತ್ತಿ ಹಿಡಿದಿದ್ದಕ್ಕಾಗಿ ಪ್ರತಿಯೊಬ್ಬ ಕನ್ನಡಿಗರ ಪರವಾಗಿ ನಿಮಗೆ ಧನ್ಯವಾದಗಳು. ನೀವು ಯಾವಾಗಲೂ ನಮಗೆ ಪ್ರೇರಣೆಯಾಗಿದ್ದೀರಿ ಎಂದು ಅವರು ತಮ್ಮ ಕೈಬರಹದಲ್ಲಿ ಬರೆದಿದ್ದಾರೆ.

ಇದರ ಜೊತೆಗೆ ವಿಶೇಷ ಗಿಫ್ಟ್ ಹ್ಯಾಂಪರ್ ಅನ್ನು ಸಹ ಸುದೀಪ್ ಅವರು ಪಿವಿ ಸಿಂಧುಗೆ ಕಳಿಸಿಕೊಟ್ಟಿದ್ದಾರೆ. ಸುದೀಪ್ ಅವರು ಕಳಿಸಿರುವ ಪತ್ರ ಮತ್ತು ಗಿಫ್ಟ್ ಹ್ಯಾಂಪರ್​​ನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪಿವಿ ಸಿಂಧು, ‘ಬಹಳ ಧನ್ಯವಾದಗಳು ಸುದೀಪ್ ಸರ್’ ಎಂದು ಬರೆದುಕೊಂಡಿದ್ದಾರೆ.

ಕ್ರೀಡಾಪಟುಗಳೊಟ್ಟಿಗೆ ಆಪ್ತ ಗೆಳೆತನವನ್ನು ಸುದೀಪ್ ಹೊಂದಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿರುವ, ಐಪಿಎಲ್ ಸ್ಟಾರ್​​ಗಳಾಗಿರುವ ಹಲವು ಕ್ರಿಕೆಟ್ ಆಟಗಾರರು ಸುದೀಪ್ ಅವರ ಆಪ್ತ ಗೆಳೆಯರಾಗಿದ್ದಾರೆ. ಕರ್ನಾಟಕದ ಆಟಗಾರರು ಮಾತ್ರವಲ್ಲದೆ ಹೊರ ರಾಜ್ಯದ ಆಟಗಾರರು, ಕೆಲ ವಿದೇಶಿ ಆಟಗಾರರೊಟ್ಟಿಗೆ ಸಹ ಸುದೀಪ್ ಆಪ್ತ ಗೆಳೆತನ ಹೊಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us