ಇದು ಸ್ಮಾರ್ಟ್ಫೋನ್ ಯುಗ. ಮೊಬೈಲ್ ಒಳಗೆ ಎಲ್ಲರೂ ಮುಳುಗಿರುತ್ತಾರೆ. ಸದಾ ಕಾಲ ಮೆಸೇಜ್ ಮಾಡುತ್ತ ಕುಳಿತುಕೊಳ್ಳುವವರೇ ಹೆಚ್ಚು. ತಮ್ಮ ಆಪ್ತರಿಗೆ ಕಳಿಸಿದ ಸೀಕ್ರೆಟ್ ಸಂದೇಶಗಳು ಯಾರ ಕಣ್ಣಿಗೂ ಕಾಣದಿರಲಿ ಎಂದು ನಾನಾ ಬಗೆಯ ಸೆಕ್ಯೂರಿಟಿ ಪಾಸ್ವರ್ಡ್ಗಳನ್ನು ಬಳಸಲಾಗುತ್ತದೆ. ಆದರೂ ಕೂಡ ಕೆಲವೊಮ್ಮೆ ನಮ್ಮ ಖಾಸಗಿ ಮೆಸೇಜ್ಗಳನ್ನು ಬೇರೆಯವರು ಎಲ್ಲಿ ಕದ್ದು ಓದುತ್ತಾರೋ ಎಂಬ ಭಯ ಇದ್ದೇ ಇರುತ್ತದೆ. ಅಂಥವರಿಗಾಗಿ ನಟಿ ಸನ್ನಿ ಲಿಯೋನ್ ಒಂದು ಉಪಾಯ ಹೇಳಿದ್ದಾರೆ.
ಬಾಲಿವುಡ್ ಮಾತ್ರವಲ್ಲದೆ ಭಾರತದ ಇತರೆ ಭಾಷೆಗಳ ಚಿತ್ರರಂಗದಿಂದಲೂ ಸನ್ನಿ ಲಿಯೋನ್ಗೆ ಅವಕಾಶಗಳಿಗೆ. ಈ ಮಾಜಿ ನೀಲಿ ತಾರೆ ಸೋಶಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಪ್ರತಿ ದಿನ ಏನಾದರೊಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಅವರು ಸಂಪರ್ಕದಲ್ಲಿ ಇರಲು ಬಯಸುತ್ತಾರೆ. ಇತ್ತೀಚೆಗೆ ಅವರು ಪರ್ಸನಲ್ ಮೆಸೇಜ್ಗಳ ಪ್ರೈವೆಸಿ ಬಗ್ಗೆ ಒಂದು ವಿಚಾರ ಹಂಚಿಕೊಂಡಿದ್ದಾರೆ.
ಬಗೆಬಗೆಯ ಲಾಕ್ ಹಾಕಿರುವಾಗ ಯಾರೂ ಕೂಡ ನಿಮ್ಮ ಮೊಬೈಲ್ನಲ್ಲಿ ಇರುವ ಖಾಸಗಿ ಮೆಸೇಜ್ಗಳನ್ನು ಓದುಲು ಸಾಧ್ಯವಿಲ್ಲ. ಆದರೆ, ಮೆಸೇಜ್ ಟೈಪ್ ಮಾಡುತ್ತಿರುವಾಗಲೇ ಯಾರಾದರೂ ನಿಮ್ಮ ಪಕ್ಕದಲ್ಲಿ ಕುಳಿತಿದ್ದರೆ ಅವರು ಇಣುಕಿ ನೋಡಿದಾಗ ಖಂಡಿತವಾಗಿಯೂ ನೀವು ಮಾಡುತ್ತಿರುವ ಮೆಸೇಜ್ ಏನು ಮತ್ತು ಯಾರಿಗೆ ಎಂಬುದು ಗೊತ್ತಾಗುತ್ತದೆ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು. ಮರ ಹತ್ತಿ ಕುಳಿತುಕೊಳ್ಳಬೇಕು! ಹೌದು, ಸದ್ಯಕ್ಕೆ ಸನ್ನಿ ಲಿಯೋನ್ ಕಂಡುಕೊಂಡಿರುವ ಉಪಾಯ ಇದು.
ಸನ್ನಿ ಲಿಯೋನ್ ಸುತ್ತಮುತ್ತ ಸದಾ ಕಾಲ ಜನರು ಇದ್ದೇ ಇರುತ್ತಾರೆ. ಸಹಾಯಕರು, ಮೇಕಪ್ ಕಲಾವಿರು, ಕೇಶವಿನ್ಯಾಸರು ಪಕ್ಕದಲ್ಲೇ ಇರುತ್ತಾರೆ. ಪತಿ ಡೇನಿಯಲ್ ವೆಬರ್ ಕೂಡ ಇರುತ್ತಾರೆ. ಇಂಥ ಸಂದರ್ಭದಲ್ಲಿ ಮೊಬೈಲ್ನಲ್ಲಿ ಗುಟ್ಟಾದ ಮೆಸೇಜ್ ಟೈಪ್ ಮಾಡುತ್ತಿದರೆ ಖಂಡಿತವಾಗಿಯೂ ಪಕ್ಕದಲ್ಲಿ ಇರುವವರಿಗೆ ಕಾಣುತ್ತದೆ. ಅದಕ್ಕಾಗಿ ಸನ್ನಿ ಲಿಯೋನ್ ಮರವೇರಿ ಕುಳಿತು ಮೆಸೇಜ್ ಮಾಡುತ್ತಾರಂತೆ!
ಆ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸನ್ನಿ ಲಿಯೋನ್ ಟಿಪ್ಸ್ ನೀಡಿದ್ದಾರೆ. ‘ಮೆಸೇಜ್ನಲ್ಲಿ ನೀವು ಮಾಡುವ ಮಾತುಕತೆ ಬೇರೆಯವರಿಗೆ ಗೊತ್ತಾಗಬಾರದು ಎಂದು ಎಲ್ಲ ಪ್ರಯತ್ನಗಳನ್ನು ಮಾಡಿದಾಗ ಹೀಗಾಗುತ್ತದೆ’ ಎಂದು ಅವರು ಈ ಫೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಸನ್ನಿ ಕೊಟ್ಟ ಐಡಿಯಾವನ್ನು ಬಳಸಿಕೊಳ್ಳುವುದು ಬಿಡುವುದು ಅವರ ಅಭಿಮಾನಿಗಳ ಆಯ್ಕೆಗೆ ಬಿಟ್ಟ ವಿಚಾರ.
ಇದನ್ನೂ ಓದಿ:
Sunny Leone: ಸನ್ನಿ ಲಿಯೋನ್ಗೆ ಬಟ್ಟೆ ತೊಡಿಸಲು ಕಷ್ಟಪಟ್ಟ ಆರ್ಮಿ; ವಿಡಿಯೋ ವೈರಲ್
ಸನ್ನಿ ಲಿಯೋನ್ ಸಂಸಾರಕ್ಕೆ 10 ವರ್ಷ; ದಾಂಪತ್ಯದ 5 ಸೀಕ್ರೆಟ್ ತೆರೆದಿಟ್ಟ ಮಾದಕ ನಟಿ