‘ಕಂಗುವ’ ಸಿನಿಮಾ ಬಿಡುಗಡೆ ದಿನಾಂಕ ಬದಲು, ಕಾರಣವೇನು?

Kanaguva release date: ನಟ ಸೂರ್ಯ, ನಟಿಸಿರುವ ಭಾರಿ ಬಜೆಟ್ ಸಿನಿಮಾ ‘ಕಂಗುವ’ ಬಿಡುಗಡೆ ದಿನಾಂಕ ಈ ಹಿಂದೆಯೇ ಘೋಷಿಸಲಾಗಿತ್ತು. ಇದೀಗ ಸಿನಿಮಾದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ.

‘ಕಂಗುವ’ ಸಿನಿಮಾ ಬಿಡುಗಡೆ ದಿನಾಂಕ ಬದಲು, ಕಾರಣವೇನು?

Updated on: Sep 22, 2024 | 6:27 PM

ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಿರುವ ಭಾರಿ ಬಜೆಟ್ ಸಿನಿಮಾ ‘ಕಂಗುವ’ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಈ ಹಿಂದೆ ಅಕ್ಟೋಬರ್ 10 ಕ್ಕೆ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿತ್ತು. ಆದರೆ ಇದೀಗ ಹಠಾತ್ತನೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಬದಲಾಯಿಸಲಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿದಿದ್ದರೂ ಸಹ ಸಿನಿಮಾ ಬಿಡುಗಡೆ ದಿನಾಂಕ ಮುಂದೂಡಲು ಕಾರಣವೇನೆಂದು ತಿಳಿದು ಬಂದಿಲ್ಲ.

ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ‘ಕಂಗುವ’ ಸಿನಿಮಾ ನಿರ್ಮಾಪಕ ಜ್ಞಾನವೇಲು, ‘ಕಲ್ಕಿ’ ಸಿನಿಮಾ ಹಿಟ್ ಆಗಲೆಂದು ನಾನು ಕಾಯುತ್ತಿದ್ದೆ. ಆ ಸಿನಿಮಾ ಇದೀಗ ಉತ್ತರ ಭಾರತದಲ್ಲಿ ದೊಡ್ಡ ಹಿಟ್ ಆಗಿದೆ. ಅದರಿಂದ ನಮ್ಮ ಸಿನಿಮಾಕ್ಕೆ ಸಹಾಯ ಆಗಲಿದೆ. ಅದೇ ಕಾರಣಕ್ಕೆ ‘ಕಲ್ಕಿ’ ಸಿನಿಮಾ ಹಿಟ್ ಎನಿಸಿಕೊಂಡ ದಿನವೇ ನಮ್ಮ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಿದೆವು’ ಎಂದಿದ್ದರು. ಆದರೆ ಈಗ ಬಿಡುಗಡೆ ದಿನಾಂಕವನ್ನು ಮತ್ತೆ ಮುಂದೂಡಿದ್ದು ಏಕೆ ಎಂದು ಜ್ಞಾನವೇಲು ಹೇಳಿಲ್ಲ.

ಇದನ್ನೂ ಓದಿ:‘ಬಡವ ರಾಸ್ಕಲ್’ ಡೈರೆಕ್ಟರ್ ಈಗ ನಿರ್ಮಾಪಕ; ಭಿನ್ನ ಟೈಟಲ್ ಚಿತ್ರಕ್ಕೆ ಒಂದಾದ ಅರ್ಜುನ್ ಸೂರ್ಯ-ನಿಧಿ ಹೆಗಡೆ

ಅಕ್ಟೋಬರ್ 10 ಕ್ಕೆ ಬಿಡುಗಡೆ ಆಗಬೇಕಿದ್ದ ‘ಕಂಗುವ’ ಸಿನಿಮಾದ ಮೊದಲ ಭಾಗ ಇದೀಗ ನವೆಂಬರ್ 14 ಕ್ಕೆ ಬಿಡುಗಡೆ ಆಗಲಿದೆ. ಸುಮಾರು ಒಂದು ತಿಂಗಳ ಕಾಲ ಸಿನಿಮಾದ ಬಿಡುಗಡೆ ಮುಂದೂಡಲಾಗಿದೆ. ಅಕ್ಟೋಬರ್ ತಿಂಗಳಲ್ಲಿ ಬೇರೆ ಕೆಲವು ದೊಡ್ಡ ಬಜೆಟ್ ಸಿನಿಮಾಗಳ ಬಿಡುಗಡೆ ಇರುವ ಕಾರಣದಿಂದ ಈ ನಿರ್ಣಯ ಮಾಡಿರುವ ಸಾಧ್ಯತೆ ಇದೆ. ನಿರ್ಮಾಪಕ ಜ್ಞಾನವೇಲು, ಬಿಡುಗಡೆ ವಿಚಾರದಲ್ಲಿ ಜಾಣತನದ ನಿರ್ಧಾರ ತೆಗೆದುಕೊಳ್ಳುವುದಾಗಿ ಈ ಮೊದಲೇ ಹೇಳಿದ್ದರು. ಜೊತೆಗೆ ಸಿನಿಮಾದ ಬಿಡುಗಡೆ ದಿನಾಂಕ, ಒಂದು ಸಿನಿಮಾದ ಯಶಸ್ಸಿನ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಎಂದು ಸಹ ಹೇಳಿದ್ದರು. ಹಾಗಾಗಿ ಜ್ಞಾನವೇಲು, ಯೋಚಿಸಿಯೇ ಸಿನಿಮಾ ಬಿಡುಗಡೆ ಮುಂದೂಡಿದ್ದಾರೆ ಎನ್ನಬಹುದು.

ಇನ್ನು ‘ಕಂಗುವ’ ಸಿನಿಮಾ ಪೀರಿಯಡ್ ಡ್ರಾಮಾ ಆಗಿದೆ. ವನವಾಸಿ ಮನುಷ್ಯರ ನಡುವಿನ ಹೋರಾಟ, ಯುದ್ಧದ ಕತೆಯನ್ನು ಸಿನಿಮಾ ಒಳಗೊಂಡಿದೆ. ಜೊತೆಗೆ ಆಧುನಿಕ ಕಾಲದ ಕತೆಯೂ ಸಿನಿಮಾದಲ್ಲಿದೆ. ಸೂರ್ಯ ಎದುರು ವಿಲನ್ ಆಗಿ ಬಾಲಿವುಡ್​ನ ಸನ್ನಿ ಡಿಯೋಲ್ ವಿಲನ್ ಆಗಿದ್ದಾರೆ. ಸಿನಿಮಾದಲ್ಲಿ ದಿಶಾ ಪಟಾನಿ ನಾಯಕಿ. ಶಿವ ನಿರ್ದೇಶನ ಮಾಡಿರುವ ಈ ಸಿನಿಮಾದ ಮೊದಲ ಭಾಗವಷ್ಟೆ ಈಗ ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:56 am, Sun, 22 September 24

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us