‘ಬಡವ ರಾಸ್ಕಲ್’ ಡೈರೆಕ್ಟರ್ ಈಗ ನಿರ್ಮಾಪಕ; ಭಿನ್ನ ಟೈಟಲ್ ಚಿತ್ರಕ್ಕೆ ಒಂದಾದ ಅರ್ಜುನ್ ಸೂರ್ಯ-ನಿಧಿ ಹೆಗಡೆ
‘ಶಾಖಾಹಾರಿ’, ‘ಡೊಳ್ಳು’ ಮೊದಲಾದ ಸಿನಿಮಾಗಳಲ್ಲಿ ನಟಿಸಿರುವ ನಿಧಿ ಹೆಗ್ಡೆ ಈ ಚಿತ್ರಕ್ಕೆ ನಾಯಕಿ. ಅವರು ಈಗ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಗುರುತಿಸಿಕೊಳ್ಳುವ ಹಂಬಲದಲ್ಲಿ ಇದ್ದಾರೆ. ಇವರಿಗೆ ಅರುಣ್ ಸೂರ್ಯ ಜೊತೆ ಆಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಕೂಡ ಪೂರ್ಣಗೊಂಡಿದೆ.
‘ಬಡವ ರಾಸ್ಕಲ್’ ಸಿನಿಮಾ ಮಾಡಿ ಗಮನ ಸೆಳೆದವರು ನಿರ್ದೇಶಕ ಶಂಕರ್ ಗುರು. ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾ ಪಕ್ಕಾ ಫ್ಯಾಮಿಲಿ ಎಂಟರ್ಟೇನ್ ರೂಪದಲ್ಲಿ ಮೂಡಿ ಬಂದಿತ್ತು. ಈಗ ಅವರು ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ಈ ಚಿತ್ರಕ್ಕೆ ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಎನ್ನುವ ಶೀರ್ಷಿಕೆ ಇಡಲಾಗಿದೆ. ಈ ಭಿನ್ನ ಟೈಟಲ್ ಸಿನಿಮಾದಲ್ಲಿ ಅರ್ಜುನ್ ಸೂರ್ಯ ಹಾಗೂ ನಿಧಿ ಹೆಗಡೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಬಡವರ ಮನೆ ಮಕ್ಕಳು ಬೆಳಿಬೇಕು ಕಣ್ರಯ್ಯ..’ ಎಂಬ ಟೈಟಲ್ ‘ಬಡವ ರಾಸ್ಕಲ್’ ಸಿನಿಮಾದ ಹೈಲೈಟ್ ಆಗಿತ್ತು. ಈ ಮಾತನ್ನು ಶಂಕರ್ ಗುರು ಗಂಭೀರವಾಗಿ ಸ್ವೀಕರಿಸಿದ್ದು, ಹೊಸ ಮುಖಗಳಿಗೆ ಆದ್ಯತೆ ನೀಡುತ್ತಿದ್ದಾರೆ. ‘ಗ್ರೀನ್ ಚಿಲ್ಲೀಸ್ ಸ್ಟುಡಿಯೋಸ್’ ಹಾಗೂ ‘ಧೀರಜ್ ಎಂವಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಧೀರಜ್ ಎಂವಿ ಹಾಗೂ ವರುಣ್ ಗುರುರಾಜ್ ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇವರಿಗೆ ಗುರು ಶಂಕರ್ ಕೂಡ ಸಾಥ್ ನೀಡಿದ್ದಾರೆ.
‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಸಿನಿಮಾ ಟೈಟಲ್ ಭಿನ್ನವಾಗಿದೆ. ಗುರು ಪ್ರಸಾದ್ ಗರಡಿಯಲ್ಲಿ ಪಳಗಿರುವ ರಂಗ ಹೆಸರಿನ ಹೊಸ ಪ್ರತಿಭೆ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಎಂದರೆ ಈಗಾಗಲೇ ಸಿನಿಮಾಗೆ ಶೂಟಿಂಗ್ ಪೂರ್ಣಗೊಂಡಿದೆ. ಈಗ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನಾವರಣ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ. ಅರುಣ್ ಸೂರ್ಯ ಅವರು ಈಗತಾನೇ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ನಿಧಿ ಹೆಗಡೆ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ನಟನಾ ಅನುಭವ ಇದೆ. ಈ ಮೊದಲು ‘ಶಾಖಾಹಾರಿ’, ‘ಡೊಳ್ಳು’ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಈಗ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಗುರುತಿಸಿಕೊಳ್ಳುವ ಹಂಬಲದಲ್ಲಿ ಇದ್ದಾರೆ.
ಇದನ್ನೂ ಓದಿ: ಕಾರ್ತಿಕ್ ಅಭಿಮಾನಿಗಳಿಗೆ ಗುಡ್ ನ್ಯೂಸ್; ಮೆಕ್ಸಿಕೋ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ ‘ಡೊಳ್ಳು’ ಸಿನಿಮಾ
ಅಭಿನಂದನ್ ಕಶ್ಯಪ್ ಅವರ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ. ವೀರೇಶ್ ಎನ್ ಟಿಎ ಛಾಯಾಗ್ರಹಣ ಮಾಡಿದ್ದಾರೆ. ವಸಂತ್ ಅವರ ಸಂಕಲನ ಚಿತ್ರಕ್ಕಿದೆ. ಈ ಚಿತ್ರ ಡಾರ್ಕ್ ಸೋಶಿಯಲ್ ಸರ್ಟಿಕಲ್ ಡ್ರಾಮಾ ಕಂಟೆಂಟ್ ಹೊಂದಿದೆ. ಹೊಸದಾಗಿ ಮದುವೆಯಾದ ನವದಂಪತಿಗಳು ಸಾಮಾಜಿಕ ಕಟ್ಟುಪಾಡುಗಳಿಗೆ ಸಿಲುಕುವ ಕಥೆಯೇ ಚಿತ್ರದ ತಿರುಳು. ‘ರಾವಣ ರಾಜ್ಯದಲ್ಲಿ ನವದಂಪತಿಗಳು’ ಸಿನಿಮಾ ಶೀಘ್ರವೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:41 am, Thu, 19 September 24