ಉಪೇಂದ್ರ ನಟನೆಯ ಸಿನಿಮಾ ದೃಶ್ಯ ಲೀಕ್; ಬೇಸರ ಹೊರಹಾಕಿದ ನಿರ್ದೇಶಕ

ಉಪೇಂದ್ರ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ರಜನಿಕಾಂತ್, ಅಕ್ಕಿನೇನಿ ನಾಗಾರ್ಜುನ ನಟನೆಯ ‘ಕೂಲಿ’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾದ ದೃಶ್ಯವೊಂದು ಸೋರಿಕೆ ಆಗಿದೆ.ಈ ಬಗ್ಗೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಅಸಮಧಾನ ಹೊರಹಾಕಿದ್ದಾರೆ.

ಉಪೇಂದ್ರ ನಟನೆಯ ಸಿನಿಮಾ ದೃಶ್ಯ ಲೀಕ್; ಬೇಸರ ಹೊರಹಾಕಿದ ನಿರ್ದೇಶಕ
Follow us
ರಾಜೇಶ್ ದುಗ್ಗುಮನೆ
|

Updated on: Sep 19, 2024 | 8:49 AM

ಡಿಜಿಟಲ್ ಜಗತ್ತು ವಿಸ್ತಾರವಾಗಿ ಬೆಳೆಯುತ್ತಿದೆ. ಇದರ ಪರಿಣಾಮವಾಗಿ ಹಲವು ಹೀರೋಗಳ ಸಿನಿಮಾಗಳ ಪೋಸ್ಟರ್​ಗಳು ಲೀಕ್ ಆಗುತ್ತಿವೆ. ಈಗ ರಜನಿಕಾಂತ್, ಉಪೇಂದ್ರ, ಅಕ್ಕಿನೇನಿ ನಾಗಾರ್ಜುನ ನಟಿಸುತ್ತಿರುವ ‘ಕೂಲಿ’ ಸಿನಿಮಾದ ದೃಶ್ಯ ಲೀಕ್ ಆಗಿದೆ. ಈ ಬಗ್ಗೆ ನಿರ್ದೇಶಕ ಲೋಕೇಶ್ ಕನಗರಾಜ್ ಅವರು ಅಸಮಧಾನ ಹೊರಹಾಕಿದ್ದಾರೆ. ಅಲ್ಲದೆ, ಅವರು ಕೈಮುಗಿದು ಒಂದು ಕೋರಿಕೆಯನ್ನು ಮಾಡಿಕೊಂಡಿದ್ದಾರೆ.

ರಜನಿಕಾಂತ್ ಅವರು ಸದ್ಯ ‘ವೆಟ್ಟೈಯನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಸೃಷ್ಟಿ ಆಗಿದೆ. ರಜನಿಕಾಂತ್, ಅಕ್ಕಿನೇನಿ ನಾಗಾರ್ಜುನ, ಉಪೇಂದ್ರ ಅವರಂಥ ಸ್ಟಾರ್ ಕಲಾವಿದರು ನಟಿಸುತ್ತಿರುವದರಿಂದ ಸಹಜವಾಗಿಯೇ ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ. ಈ ಸಿನಿಮಾದ ದೃಶ್ಯವೊಂದು ಸೋರಿಕೆ ಆಗಿದೆ.

ನಾಗಾರ್ಜುನ ಅವರು ಶೂಟ್​ನಲ್ಲಿ ಭಾಗಿ ಆದ ದೃಶ್ಯ ಇದಾಗಿದೆ. ನಾಗಾರ್ಜುನ ಅವರು ಆ್ಯಕ್ಷನ್ ಅವತಾರದಲ್ಲಿ ಮಿಂಚಿದ್ದಾರೆ. ಇದನ್ನು ಶೂಟ್ ಮಾಡಿದ್ದು ಯಾರು, ಲೀಕ್ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಮೂಡಿದೆ. ಈ ಘಟನೆ ಲೋಕೇಶ್ ಅವರಿಗೆ ಬೇಸರ ಮೂಡಿಸಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಈ ರೆಕಾರ್ಡಿಂಗ್​ನಿಂದಾಗಿ ಹಲವು ಜನರ ಎರಡು ತಿಂಗಳ ಶ್ರಮ ವ್ಯರ್ಥವಾಯಿತು. ಈ ರೀತಿಯ ಕೆಲಸ ಮಾಡಬೇಡಿ. ಇದು ಒಳ್ಳೆಯ ಅನುಭವವನ್ನು ನಾಶ ಮಾಡುತ್ತದೆ’ ಎಂದಿದ್ದಾರೆ.

ಇದನ್ನೂ ಓದಿ: ಕನ್ವೆನ್ಷನ್ ಸೆಂಟರ್​ ನೆಲಸಮ ವಿವಾದ, ನಾಗಾರ್ಜುನ ಸಹೋದರ ಹೇಳಿದ್ದೇನು?

ಸಾಮಾನ್ಯವಾಗಿ ಸಿನಿಮಾಗಳ ಬಗ್ಗೆ ತಂಡದವರು ಅಪ್​ಡೇಟ್ ಕೊಟ್ಟಾಗ, ತಂಡದ ಕಡೆಯಿಂದ ಪೋಸ್ಟರ್​-ಟೀಸರ್ ರಿಲೀಸ್ ಆದಾಗ ಒಂದು ಕುತೂಹಲ ಇರುತ್ತದೆ. ಆದರೆ, ಈ ರೀತಿ ದೃಶ್ಯ ಲೀಕ್ ಆಗುವುದರಿಂದ ಸಿನಿಮಾ ಬಗ್ಗೆ ಇರುವ ನಿರೀಕ್ಷೆ, ಕುತೂಹಲ ಹೋಗಿ ಬಿಡುತ್ತವೆ. ಆ ರೀತಿ ಆಗಬಾರದು ಎನ್ನುವ ದೃಶ್ಯ ಸೋರಿಕೆ ಆಗದಂತೆ ತಡೆಯಲು ಎಲ್ಲರೂ ಬಯಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.