ಕಾರ್ತಿಕ್ ಅಭಿಮಾನಿಗಳಿಗೆ ಗುಡ್ ನ್ಯೂಸ್; ಮೆಕ್ಸಿಕೋ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ ‘ಡೊಳ್ಳು’ ಸಿನಿಮಾ
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’, ಸೂರ್ಯ ಅಭಿನಯದ ‘ಸೂರರೈ ಪೊಟ್ರು’, ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಬಾಜಿರಾವ್ ಮಸ್ತಾನಿ’, ಅಜಯ್ ದೇವಗನ್ ನಟನೆಯ ‘ತಾನಜಿ’ ಸಿನಿಮಾಗಳ ಜೊತೆಗೆ ‘ಡೊಳ್ಳು’ ಸಿನಿಮಾ ಕೂಡ ಮೆಕ್ಸಿಕೋ ಫಿಲ್ಮ್ ಫೆಸ್ಟ್ನಲ್ಲಿ ಪ್ರದರ್ಶನ ಕಾಣುತ್ತಿರುವುದು ವಿಶೇಷ.
ಕಾರ್ತಿಕ್ ಮಹೇಶ್ (Karthik Mahesh) ಅವರು ಇತ್ತೀಚೆಗೆ ‘ಬಿಗ್ ಬಾಸ್’ ವಿನ್ ಆದರು. ಇದಾದ ಬಳಿಕ ಅವರ ಖ್ಯಾತಿ ಹೆಚ್ಚಾಗಿದೆ. ಅವರು ಹೋದಲ್ಲಿ ಬಂದಲ್ಲಿ ಜನರು ಮುತ್ತಿಕೊಳ್ಳುತ್ತಿದ್ದಾರೆ. ಈಗ ಅವರ ನಟನೆಯ ‘ಡೊಳ್ಳು’ ಸಿನಿಮಾ ತಂಡ ಒಂದು ಸಿಹಿ ಸುದ್ದಿ ಹಂಚಿಕೊಂಡಿದೆ. ಈ ಸಿನಿಮಾ ಈಗಾಗಲೇ ಹಲವು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಬಂದಿದೆ. ಈಗ ಸಿನಿಮಾ ಮತ್ತೊಂದು ಅಂತರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ. ‘ಡೊಳ್ಳು’ ಸಿನಿಮಾ ಮೆಕ್ಸಿಕೋದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ.
‘ಡೊಳ್ಳು’ ಚಿತ್ರವನ್ನು ಸಾಗರ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಬಾಬು ಹಿರಣ್ಣಯ್ಯ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಪವನ್ ಒಡೆಯರ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಈಗ ಮೆಕ್ಸಿಕೋ ಸಿನಿಮೋತ್ಸವದಲ್ಲಿ ಪ್ರದರ್ಶನ ಕಾಣಲು ರೆಡಿ ಆಗಿದೆ. ಈ ಖುಷಿ ಸುದ್ದಿಯನ್ನು ತಂಡ ಹಂಚಿಕೊಂಡಿದೆ.
ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’, ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟನೆಯ ‘ಬಾಜಿರಾವ್ ಮಸ್ತಾನಿ’, ಸೂರ್ಯ ಅಭಿನಯದ ‘ಸೂರರೈ ಪೊಟ್ರು’, ಅಜಯ್ ದೇವಗನ್ ನಟನೆಯ ‘ತಾನಜಿ’ ಸಿನಿಮಾಗಳ ಜೊತೆಗೆ ‘ಡೊಳ್ಳು’ ಸಿನಿಮಾ ಕೂಡ ಮೆಕ್ಸಿಕೋ ಫಿಲ್ಮ್ ಫೆಸ್ಟ್ನಲ್ಲಿ ಪ್ರದರ್ಶನ ಕಾಣುತ್ತಿರುವುದು ವಿಶೇಷ.
‘ಡೊಳ್ಳು’ ಸಿನಿಮಾದಲ್ಲಿ ಜನಪದ ವಾದ್ಯ ಡೊಳ್ಳಿನ ಕಥೆ ಇದೆ. ಭದ್ರ (ಕಾರ್ತಿಕ್) ಹಾಗೂ ಆತನ ತಂಡ ಡೊಳ್ಳು ಬಾರಿಸುವ ಮೂಲಕ ಜನಪದ ಕಲೆಯನ್ನು ಬೆಳೆಸುವ ಪ್ರಯತ್ನದಲ್ಲಿರುತ್ತದೆ. ಭದ್ರನ ಹೊರತಪಡಿಸಿ ಉಳಿದ ಎಲ್ಲರಿಗೂ ಬೆಂಗಳೂರಿನ ಜೀವನ ಆಕರ್ಷಣೀಯವಾಗಿ ಕಾಣುತ್ತದೆ. ಅವರು ಬಸ್ ಹತ್ತಿ ಬೆಂಗಳೂರು ಸೇರುತ್ತಾರೆ. ಆ ಬಳಿಕ ಭದ್ರ ಈ ಜನಪದ ಕಲೆಯನ್ನು ಹೇಗೆ ಉಳಿಸುತ್ತಾನೆ ಅನ್ನೋದು ಸಿನಿಮಾದ ಕಥೆ. ಪಕ್ಕಾ ಹಳ್ಳಿ ಸೊಗಡಿನಲ್ಲಿ ಸಿನಿಮಾ ಮೂಡಿ ಬಂದಿದೆ.
ಇದನ್ನೂ ಓದಿ: ಜನಪದ ಕಲೆಗಳ ಅಳಿವು-ಉಳಿವಿಗೆ ಕನ್ನಡಿ ಹಿಡಿದ ‘ಡೊಳ್ಳು’ ಸಿನಿಮಾ
ಪವನ್ ಒಡೆಯರ್ ಅವರು ಹಲವು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿ ಫೇಮಸ್ ಆಗಿದ್ದಾರೆ. ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ ‘ಒಡೆಯರ್ ಮೂವೀಸ್’ ಮೂಲಕ ಪತ್ನಿ ಅಪೇಕ್ಷಾ ಜೊತೆಗೂಡಿ ‘ಡೊಳ್ಳು’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಮೊದಲು ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಸಿಕ್ಕಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ