ಉಪೇಂದ್ರ ಜೊತೆಗೆ ಪ್ರೇಮಾಗೆ ಲವ್ ಇತ್ತಾ? ನೇರ ಮಾತುಗಳಲ್ಲಿ ಎಲ್ಲವನ್ನೂ ವಿವರಿಸಿದ ನಟಿ
‘ಏನಿಲ್ಲ ಏನಿಲ್ಲ..’ ಹಾಡು ಸಖತ್ ಹಿಟ್ ಆಗಿತ್ತು. ಇದು ‘ಉಪೇಂದ್ರ’ ಸಿನಿಮಾದ ಹಾಡು. ಈ ಹಾಡಿನ ಉದ್ದೇಶ ಏನು ಎಂಬುದನ್ನು ಸಂಗೀತ ಸಂಯೋಜಕ ಗುರುಕಿರಣ್ ಮಾತನಾಡಿದ್ದರು. ಉಪೇಂದ್ರ ಹಾಗೂ ಪ್ರೇಮಾ ಲವರ್ಸ್ ಎನ್ನುವ ಟಾಕ್ ಇದ್ದಿದ್ದರಿಂದ ಈ ಹಾಡನ್ನು ಬರೆಯಲಾಗಿತ್ತು ಎನ್ನಲಾಗಿತ್ತು. ಈ ಬಗ್ಗೆ ಪ್ರೇಮಾ ಮಾತನಾಡಿದ್ದಾರೆ.
ಹೀರೋ-ಹೀರೋಯಿನ್ಗಳು ಒಟ್ಟಾಗಿ ಸಿನಿಮಾ ಮಾಡಿದರೆ ಇಬ್ಬರ ಮಧ್ಯೆ ಪ್ರೀತಿ ಮೂಡಿದೆ ಎಂದು ಮಾತನಾಡಿಕೊಳ್ಳುವವರು ಜಾಸ್ತಿ ಇದ್ದಾರೆ. ಇದು ಕನ್ನಡ ಚಿತ್ರರಂಗ ಸೇರಿ ಎಲ್ಲಾ ಕಡೆಗಳಲ್ಲೂ ಇದೆ. ಅದೇ ರೀತಿ ಉಪೇಂದ್ರ ಹಾಗೂ ಪ್ರೇಮಾ ಒಟ್ಟಾಗಿ ಸಿನಿಮಾ ಮಾಡಿದಾಗ ಹೀಗೊಂದು ವರದಿ ಹುಟ್ಟಿಕೊಂಡಿತ್ತು. ಇವರು ಪ್ರೀತಿಯಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ನಟಿ ಪ್ರೇಮಾ ಅವರು ಸ್ಪಷ್ಟನೆ ನೀಡಿದ್ದಾರೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಆ ಬಗ್ಗೆ ನಾವು ಹೇಳ್ತೀವಿ.
ಉಪೇಂದ್ರ ಹಾಗೂ ಪ್ರೇಮಾ ಅವರು ‘ಉಪೇಂದ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಇಂದು (ಸೆಪ್ಟೆಂಬರ್ 20) ರೀ-ರಿಲೀಸ್ ಆಗಿದೆ. ಈ ಚಿತ್ರದ ‘ಏನಿಲ್ಲ ಏನಿಲ್ಲ..’ ಹಾಡು ಸಖತ್ ಹಿಟ್ ಆಗಿತ್ತು. ಈ ಹಾಡನ್ನು ಅನೇಕರು ಇಷ್ಟಪಟ್ಟರು. ಆದರೆ, ಈ ಹಾಡಿನ ಉದ್ದೇಶ ಏನು ಎಂಬುದನ್ನು ಸಂಗೀತ ಸಂಯೋಜಕ ಗುರುಕಿರಣ್ ಮಾತನಾಡಿದ್ದರು. ‘ಉಪೇಂದ್ರ ಹಾಗೂ ಪ್ರೇಮಾ ಲವರ್ಸ್ ಎನ್ನುವ ಟಾಕ್ ಇತ್ತು. ಅದಕ್ಕೆ ಕೌಂಟರ್ ಕೊಡೋ ಕಾರಣಕ್ಕೆ ಈ ಹಾಡನ್ನು ಮಾಡಲಾಯಿತು’ ಎಂಬುದಾಗಿ ಗುರುಕಿರಣ್ ಹೇಳಿದ್ದರು.
ಈಗ ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಪ್ರೇಮಾಗೆ ಈ ಬಗ್ಗೆ ಪ್ರಶ್ನೆ ಎದುರಾಗಿದೆ. ನಿಮ್ಮಿಬ್ಬರ ಮಧ್ಯೆ ಪ್ರೀತಿ ಇತ್ತೇ ಎಂದು ಕೇಳಲಾಗಿದೆ. ಇದಕ್ಕೆ ಪ್ರೇಮಾ ನೇರ ಉತ್ತರ ನೀಡಿದ್ದಾರೆ. ‘ಉಪೇಂದ್ರ ತಲೇಲಿ ಏನಿತ್ತು ಗೊತ್ತಿಲ್ಲ. ಆ ಲಿರಿಕ್ಸ್ ಮೂಲಕ ಉತ್ತರ ಕೊಟ್ರೋ ಅದು ಕೂಡ ಗೊತ್ತಿಲ್ಲ. ಆದರೆ, ಹಾಡು ಸಿನಿಮಾಗೆ ಹೊಂದಿಕೆ ಆಯ್ತು. ನಮ್ಮಿಬ್ಬರಿಗೂ ಒಳ್ಳೆಯ ಕೆಲಸ ಮಾಡಬೇಕು ಎಂದಿತ್ತು ಅಷ್ಟೇ. ಲವ್ ಮಾಡೋ ತಲೆ ಇರಲಿಲ್ಲ. ಅವರ ಕೆಲಸ ಇಷ್ಟ ಆಗುತ್ತಾ ಇತ್ತು. ನಮ್ಮಿಬ್ಬರ ಮಧ್ಯೆ ಫ್ರೆಂಡ್ಶಿಪ್ ಇತ್ತು ಅಷ್ಟೇ ಹೊರತು ಪ್ರೀತಿ ಇರಲಿಲ್ಲ. ಸಿಕ್ಕ ಅವಕಾಶ ಬಳಸಿಕೊಳ್ಳುತ್ತಿದ್ದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಅದೇ ಎನರ್ಜಿ, ಅದೇ ಗತ್ತು’; ಜೀ ಕನ್ನಡ ವೇದಿಕೆ ಮೇಲೆ ಶಿವಣ್ಣ-ಪ್ರೇಮಾ ‘ಓಂ’ ರೀ ಕ್ರಿಯೇಷನ್
‘ಎ’ ಪ್ರೇಮಾ ಅವರ ಜೀವನಕ್ಕೆ ಸಂಬಂಧಿಸಿದ್ದು ಎನ್ನುವ ಮಾತಿದೆ. ಒಂದು ನಟಿಯನ್ನು ಪರಿಚಯಿಸಿ ಅವರನ್ನು ಸ್ಟಾರ್ ಹೀರೋ ಆಗಿ ಮಾಡ್ತಾನೆ ನಿರ್ದೇಶಕ. ಬೆಳೆದ ನಂತರ ನಟಿ ಆತನ ದೂರ ಮಾಡುತ್ತಾಳೆ, ಕಡೆಗಣಿಸುತ್ತಾಳೆ. ಇದು ‘ಎ’ ಚಿತ್ರದ ಕಥೆ. ಆದರೆ, ಇದನ್ನು ಪ್ರೇಮಾ ಒಪ್ಪುವುದಿಲ್ಲ. ‘ಅವರ ಕಲ್ಪನೆ ಏನಿತ್ತೋ ಗೊತ್ತಿಲ್ಲ. ಸಿನಿಮಾದಲ್ಲಿ ಇರೋದು ಫ್ರೆಶ್ ಲವ್ಸ್ಟೋರಿ. ನನಗೂ ಅದಕ್ಕೂ ಸಂಬಂಧವಿಲ್ಲ. ಚಾಂದಿನಿ ರೋಲ್ಗೂ ನನಗೂ ಸಂಬಂಧವಿಲ್ಲ. ಹಿಟ್ ಆದ ಬಳಿಕ ಹೀಗೋಂದು ಸಿನಿಮಾ ಇದೆ ಅನ್ನೋದು ಗೊತ್ತಾಯ್ತು. ನಾನು ಸಿನಿಮಾನ ಟಿವಿಯಲ್ಲಿ ನೋಡಿದ್ದೇನೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.