ಕಾಲಿವುಡ್ನ ಖ್ಯಾತ ನಟ ಸೂರ್ಯ (Suriya) ಅವರು ಪ್ರತಿ ಸಿನಿಮಾದಲ್ಲೂ ಡಿಫರೆಂಟ್ ಮಾತ್ರ ಮಾಡುತ್ತಾರೆ. ಅವರ ಅಭಿಮಾನಿ ಬಳಗ ದೊಡ್ಡದಿದೆ. ಒಂದಕ್ಕಿಂತ ಒಂದು ಭಿನ್ನ ಸಿನಿಮಾಗಳನ್ನು ಮಾಡುವ ಮೂಲಕ ಸೂರ್ಯ ಗುರುತಿಸಿಕೊಂಡಿದ್ದಾರೆ. ಅವರ ಡಿಫರೆಂಟ್ ಸಿನಿಮಾಗಳ ಸಾಲಿಗೆ ‘ಕಂಗುವ’ (Kanguva Movie) ಕೂಡ ಸೇರ್ಪಡೆ ಆಗಲಿದೆ. ಅದರ ಮೊದಲ ಝಲಕ್ ಎಂಬಂತೆ ಫಸ್ಟ್ ಲುಕ್ (Kanguva First Look) ಪೋಸ್ಟರ್ ಬಿಡುಗಡೆ ಆಗಿದೆ. ಈ ಪೋಸ್ಟರ್ನಲ್ಲಿ ಸೂರ್ಯ ಅವರ ಗೆಟಪ್ ಗಮನ ಸೆಳೆಯುತ್ತಿವೆ. ಈ ಸಿನಿಮಾದ ಫಸ್ಟ್ ಗ್ಲಿಂಪ್ಸ್ ನೋಡಲು ಅಭಿಮಾನಿಗಳು ಕಾದಿದ್ದಾರೆ. ಜುಲೈ 23ರಂದು ‘ಕಂಗುವ’ ಫಸ್ಟ್ ಗ್ಲಿಂಪ್ಸ್ ಬಿಡುಗಡೆ ಆಗಲಿದೆ. ನಿರ್ಮಾಪಕರ ಕಡೆಯಿಂದ ಈ ಬಗ್ಗೆ ಮಾಹಿತಿ ಬಹಿರಂಗ ಆಗಿದೆ.
‘ಯುವಿ ಕ್ರಿಯೇಷನ್ಸ್’ ಸಂಸ್ಥೆಯ ಮೂಲಕ ‘ಕಂಗುವ’ ಸಿನಿಮಾ ನಿರ್ಮಾಣ ಆಗುತ್ತಿದೆ. ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಎಂಬುದಕ್ಕೆ ಈ ಪೋಸ್ಟರ್ನಲ್ಲಿ ಸುಳಿವು ಸಿಕ್ಕಿದೆ. ಈ ಪೋಸ್ಟರ್ನಲ್ಲಿ ಸೂರ್ಯ ಅವರ ಮುಖ ಕಾಣಿಸಿಲ್ಲ. ಕೈಯಲ್ಲಿ ಕತ್ತಿ ಹಿಡಿದು ಅವರು ಯುದ್ಧಕ್ಕೆ ಸಜ್ಜಾಗಿ ನಿಂತಿದ್ದಾರೆ. ಮೈ ಮೇಲೆ ಬುಡಕಟ್ಟು ಸಮುದಾಯದವರ ರೀತಿ ಗಾಯದ ಕಲೆಗಳು ಇವೆ. ತೋಳಿಗೆ ಮಣಿಯ ಮಾಲೆ ಕಟ್ಟಿಕೊಳ್ಳಲಾಗಿದೆ. ಈ ರಗಡ್ ಲುಕ್ ನೋಡಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
Each scar carries a story!
The King arrives ?#GlimpseOfKanguva on 23rd of July! @Suriya_offl @DishPatani @directorsiva @ThisIsDSP @StudioGreen2 @kegvraja @UV_Creations @saregamasouth@KanguvaTheMovie #Kanguva ? pic.twitter.com/townT6PTqr
— UV Creations (@UV_Creations) July 20, 2023
ಜುಲೈ 23ರಂದು ಸೂರ್ಯ ಅವರ ಜನ್ಮದಿನ. ಅಂದು ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಆ ಖುಷಿಯನ್ನು ಡಬಲ್ ಮಾಡುವ ರೀತಿಯಲ್ಲಿ ‘ಕಂಗುವ’ ಸಿನಿಮಾದ ಫಸ್ಲ್ ಗ್ಲಿಂಪ್ಸ್ ಬಿಡುಗಡೆ ಆಗಲಿದೆ. ಅದರಲ್ಲಿ ಚಿತ್ರದ ಕಥೆಯ ಬಗ್ಗೆ ಇನ್ನಷ್ಟು ವಿವರಗಳು ಸಿಗಲಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಫಸ್ಟ್ ಲುಕ್ ಪೋಸ್ಟರ್ ವೈರಲ್ ಆಗಿದೆ. ಅಭಿಮಾನಿಗಳು ಇದನ್ನು ತಮ್ಮ ಖಾತೆಗಳಲ್ಲಿ ಶೇರ್ ಮಾಡಿಕೊಂಡು ಖುಷಿಪಡುತ್ತಿದ್ದಾರೆ. ‘ಕಂಗುವ’ ಸಿನಿಮಾದಲ್ಲಿ ದಿಶಾ ಪಟಾಣಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: Kanguva: 80 ಕೋಟಿ ರೂಪಾಯಿಗೆ ಮಾರಾಟ ಆಯ್ತು ‘ಕಂಗುವ’ ಒಟಿಟಿ ಹಕ್ಕು; ಹೇಗಿದೆ ನೋಡಿ ಸೂರ್ಯ ಹವಾ
ಇದೇ ಮೊದಲ ಬಾರಿಗೆ ದಿಶಾ ಪಟಾಣಿ ಮತ್ತು ಸೂರ್ಯ ಅವರು ಜೋಡಿಯಾಗಿ ನಟಿಸುತ್ತಿರುವುದರಿಂದ ‘ಕಂಗುವ’ ಚಿತ್ರದ ಮೇಲೆ ಹೈಪ್ ಹೆಚ್ಚಾಗಿದೆ. ‘ಪ್ರತಿ ಗಾಯದ ಗುರುತಿನಲ್ಲೂ ಒಂದೊಂದು ಕಥೆ ಇದೆ. ರಾಜ ಬರುತ್ತಿದ್ದಾನೆ’ ಎಂಬ ಕ್ಯಾಪ್ಷನ್ನೊಂದಿಗೆ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಳ್ಳಲಾಗಿದೆ. 2022ರಲ್ಲಿ ತೆರೆಕಂಡ ‘ವಿಕ್ರಂ’ ಸಿನಿಮಾದಲ್ಲಿ ಸೂರ್ಯ ಮಾಡಿದ ರೋಲೆಕ್ಸ್ ಪಾತ್ರ ಸಖತ್ ಫೇಮಸ್ ಆಯಿತು. ಅದೇ ರೀತಿ ‘ಕಂಗುವ’ ಚಿತ್ರ ಕೂಡ ಧೂಳೆಬ್ಬಿಸುವ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.