Ramya: ‘ಪ್ರೋಮೋ ಮತ್ತು ಸಿನಿಮಾಗೆ ಸೇರಿ ರಮ್ಯಾ ನಟಿಸಿದ್ದರು, ಆದರೆ..’: ಅಸಲಿ ವಿಷಯ ತಿಳಿಸಿದ ಹಾಸ್ಟೆಲ್ ಹುಡುಗರು
‘ರಮ್ಯಾ ಬಗ್ಗೆ ನಮಗೆ ಗೌರವ ಇದೆ. ಅವರು ಲೇಡಿ ಸೂಪರ್ ಸ್ಟಾರ್. ಆದರೆ ಸ್ಟೇ ತಂದಿದ್ದು ತಂಬಾ ಬೇಜಾರು ಆಯ್ತು’ ಎಂದು ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಹೇಳಿದ್ದಾರೆ.
ಹೊಸಬರ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ (Hostel Hudugaru Bekagiddare) ಸಿನಿಮಾ ವಿರುದ್ಧ ರಮ್ಯಾ ಲೀಗಲ್ ನೋಟೀಸ್ ಕಳಿಸಿದ್ದು ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿತ್ತು. ಈಗ ಸಿನಿಮಾದ ಬಿಡುಗಡೆಗೆ ಕೋರ್ಟ್ ಅನುಮತಿ ನೀಡಿದೆ. ತಾವು ಕೇವಲ ಪ್ರೋಮೋಗೆ ಮಾತ್ರ ನಟಿಸಿದ್ದು ಎಂದು ರಮ್ಯಾ (Ramya) ಹೇಳಿದ್ದರು. ಆದರೆ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ (Nithin Krishnamurthy) ಬೇರೆ ವಿಷಯ ತಿಳಿಸಿದ್ದಾರೆ. ‘ರಮ್ಯಾ ಅವರು ಪ್ರೋಮೋ ಮತ್ತು ಸಿನಿಮಾಗೆ ಖುಷಿಯಿಂದಲೇ ನಟಿಸಿದ್ದರು. ಅವರ ಬಗ್ಗೆ ನಮಗೆ ತುಂಬ ಗೌರವ ಇದೆ. ಅವರು ಲೇಡಿ ಸೂಪರ್ ಸ್ಟಾರ್. ಆದರೆ ಸ್ಟೇ ತಂದಿದ್ದು ತಂಬಾ ಬೇಜಾರು ಆಯ್ತು. ಎರಡೂವರೆ ವರ್ಷ ಪ್ರಮೋಷನ್ ಮಾಡಿ ಕೊನೇ ಹಂತದಲ್ಲಿ ತೊಂದರೆ ಆಗುತ್ತಾ ಅಂತ ಭಯ ಆಗಿತ್ತು. ಆದರೆ ಕೋರ್ಟ್ನಲ್ಲಿ ನ್ಯಾಯ ಸಿಕ್ಕಿದೆ’ ಎಂದು ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.