Hassan; ಸ್ಪೀಕರ್ ಹುದ್ದೆ ಸದನದಲ್ಲಿ ಅತ್ಯುನ್ನತವಾದದ್ದು, ಪೀಠದ ಘನತೆಯನ್ನು ಕಾಪಾಡಬೇಕು: ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ
ಸದನದಲ್ಲಿ ಮನಬಂದಂತೆ ವರ್ತಿಸಲು ಸರ್ಕಾರ ಇವರಿಗೆ ಸಂಬಳ ನೀಡೋದಿಲ್ಲ, ಬಿಜೆಪಿ ಸದಸ್ಯರ ವರ್ತನೆ ವಿಷಾದಕರ ಎಂದು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.
ಹಾಸನ: ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ (retired justice Santosh Hegde) ಅವರ ಮಾತು ಕತ್ತಿಯ ಅಲಗು ಇದ್ದಹಾಗೆ-ಹರಿತ ಮತ್ತು ತೀಕ್ಷ್ಣ. ಇಂದು ಹಾಸನದಲ್ಲಿ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತಾಡಿದ ಅವರು ವಿಧಾನ ಸಭಾ ಅಧಿವೇಶನದಲ್ಲಿ (Assembly session) ನಿನ್ನೆ ನಡೆದ ಘಟನೆ ವಿಷಾದಕರ ಅಂತ ಹೇಳಿದರು. ನಮ್ಮ ರಾಜಕಾರಣಿಗಳು ಕೆಲವು ಮೌಲ್ಯಗಳನ್ನು ಪಾಲಿಸಬೇಕು ಮತ್ತು ಸದನದ ಗೌರವ ಮತ್ತು ಶಿಸ್ತನ್ನು ಕಾಯ್ದುಕೊಳ್ಳಬೇಕು ಎಂದು ಅವರು ಹೇಳಿದರು. ವಿಧಾನ ಸಭೆಯಲ್ಲಿ ಸ್ಪೀಕರ್ (Speaker) ಹುದ್ದೆ ಅತ್ಯುನ್ನತವಾದದ್ದು, ಅವರು ಹೇಳಿದ್ದನ್ನು ಸದನದಲ್ಲಿ ಒಪ್ಪಿಕೊಳ್ಳಲೇ ಬೇಕು. ಯಾಕೆಂದರೆ ಸದನದೊಳಗೆ ಸರಿ ತಪ್ಪು ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟಿದ್ದು, ಭಿನಾಭಿಪ್ರಾಯವಿದ್ದರೆ, ಹೊರಗಡೆ ಮಾಧ್ಯಮದವರ ಮುಂದೆ ಹೇಳಿಕೊಳ್ಳಬಹುದು ಎಂದು ನ್ಯಾಯಮೂರ್ತಿ ಹೆಗ್ಡೆ ಹೇಳಿದರು. ಸದನದಲ್ಲಿ ಮನಬಂದಂತೆ ವರ್ತಿಸಲು ಸರ್ಕಾರ ಇವರಿಗೆ ಸಂಬಳ ನೀಡೋದಿಲ್ಲ, ಬಿಜೆಪಿ ಸದಸ್ಯರ ವರ್ತನೆ ವಿಷಾದಕರ ಎಂದು ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ