Assembly Session: ಅನುಭವಿ ಶಾಸಕ ಕೆಎಂ ಶಿವಲಿಂಗೇಗೌಡ ಇಂದು ಉಪ ಸಭಾಪತಿ ಜೊತೆ ಮಾತಾಡಿದ ರೀತಿ ಖಂಡನೀಯ
ಹಿರಿಯ ನಾಯಕ ಮತ್ತು ಉತ್ತಮ ಸಂಸದೀಯ ಪಟುವಾಗಿರುವ ಶಿವಲಿಂಗೇಗೌಡರಿಗೆ ಸಭಾಧ್ಯಕ್ಷರ ಜೊತೆ ಹೇಗೆ ಮಾತಾಡಬೇಕು ಅಂತ ಗೊತ್ತಿಲ್ಲದಿಲ್ಲ.
ಬೆಂಗಳೂರು: ನಿನ್ನೆ ಸದನದಲ್ಲಿ ಸಭಾಧ್ಯಕ್ಷರ ಪೀಠದಲ್ಲಿ ಉಪ ಸಭಾಪತಿ ರುದ್ರಪ್ಪ ಲಮಾಣಿ (Rudrappa lamani) ಕೂತಾಗ ನಡೆದ ಘಟನೆ ಕನ್ನಡಿಗರಿಗೆಲ್ಲ ಗೊತ್ತು. ಬಿಜೆಪಿ ಸದಸ್ಯರು ಪೀಠದ ಬಳಿ ಬಂದು ಘೋಣೆಗಳನ್ನ ಕೂಗುತ್ತಾ ಪೇಪರ್ ಗಳನ್ನು ಹರಿದು ಅವರ ಮೇಲೆ ಎಸೆದರು. ಇಂದು ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalingegowda) ಉಪ ಸಭಾಪತಿಗಳ (Deputy Speaker) ಮೇಲೆ ರೇಗಿದರಲ್ಲದೆ ಅಗೌರವವಾಗಿ ಮಾತಾಡಿದರು. ಗೌಡರ ಅಸಹನೆ ಯಾಕೆ ಅಂತ ಅರ್ಥವಾಗಲ್ಲ. ಅವರು ಸದನದಲ್ಲಿ ಭಾಷಣ ಮಾಡುವಾಗ ಸಭಾಪತಿಗಳು ಇನ್ನೂ ಎಷ್ಟು ಮಾತಾಡುತ್ತೀರಿ ಗೌಡ್ರೇ ಅಂತ ಸೌಮ್ಯವಾಗೇ ಕೇಳುತ್ತಾರೆ. ಅಷ್ಟಕ್ಕೆ ದುರ್ದಾನ ತೆಗದುಕೊಂಡವರಂತೆ ಆಡುವ ಶಾಸಕರು ರೇಗಾಡಲು ಶುರುಮಾಡುತ್ತಾರೆ. ‘ಹೋಗ್ರೀ ರೀ’ ಅಂತೆಲ್ಲ ಮಾತಾಡುತ್ತಾರೆ. ಬೇರೆಯರು ನಿಷ್ಪ್ರಯೋಜಕ ಭಾಷಣ ಮಾಡುತ್ತಿದ್ರೂ ಅವರಿಗೆ ಗಂಟೆಗಟ್ಟಲೆ ಮಾತಾಡಲು ಅವಕಾಶ ಕೊಡ್ತೀರಿ ಆದರೆ ಇತಿಹಾಸದ ಬಗ್ಗೆ ಹೇಳುತ್ತಿರುವ ನನ್ನ ಭಾಷಣವನ್ನು ಮೊಟಕುಗೊಳಿಸುತ್ತೀರಿ, ಪೇಪರ್ ಎಸೆದುಬಿಟ್ಟು ಹೋಗ್ತೀನಿ ಆಚೆ ಅನ್ನುತ್ತಾರೆ. ಹಿರಿಯ ನಾಯಕ ಮತ್ತು ಉತ್ತಮ ಸಂಸದೀಯ ಪಟುವಾಗಿರುವ ಶಿವಲಿಂಗೇಗೌಡರಿಗೆ ಸಭಾಧ್ಯಕ್ಷರ ಜೊತೆ ಹೇಗೆ ಮಾತಾಡಬೇಕು ಅಂತ ಗೊತ್ತಿಲ್ಲದಿಲ್ಲ. ಆದರೆ ಇವತ್ತಿನ ಅವರ ವರ್ತನೆ ಖಂಡನೀಯ ಮತ್ತು ಯಾವ ಕಾರಣಕ್ಕೂ ಸ್ವೀಕೃತವಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ