SSR Case: ಸಾಯುವುದಕ್ಕೂ ಮುನ್ನ ನಟನೆ ತೊರೆಯುವ ನಿರ್ಧಾರಕ್ಕೆ ಬಂದಿದ್ದ ಸುಶಾಂತ್; ಅವರು ಯೋಚಿಸಿದ್ದೇನು?

Sushant Singh Rajput Death Anniversary: ಸುಶಾಂತ್ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟವರು. ಅವರಿಗೆ ಸಿನಿಮಾ ರಂಗದಲ್ಲಿ ಯಶಸ್ಸು ಕೂಡ ಸಿಕ್ಕಿತ್ತು. ಅದ್ಭುತ ನಟನೆ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು.

SSR Case: ಸಾಯುವುದಕ್ಕೂ ಮುನ್ನ ನಟನೆ ತೊರೆಯುವ ನಿರ್ಧಾರಕ್ಕೆ ಬಂದಿದ್ದ ಸುಶಾಂತ್; ಅವರು ಯೋಚಿಸಿದ್ದೇನು?
ಸುಶಾಂತ್​ ಸಿಂಗ್​ ರಜಪೂತ್​
Edited By:

Updated on: Jun 13, 2021 | 7:28 AM

ಸುಶಾಂತ್ ಸಿಂಗ್ ರಜಪೂತ್ ನಿಧನರಾಗಿ ಮೇ 14ಕ್ಕೆ ಒಂದು ವರ್ಷ ಆಗಲಿದೆ. ಅವರದು ಆತ್ಮಹತ್ಯೆಯೋ ಅಥವಾ ಸಾವಿಗೆ ಬೇರೆ ಏನಾದರೂ ಕಾರಣ ಇದೆಯೋ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಅಚ್ಚರಿ ಎಂದರೆ, ಸಾಯುವುದಕ್ಕೂ ಮೊದಲೇ ಸುಶಾಂತ್ ನಟನೆ ತೊರೆಯುವ ನಿರ್ಧಾರಕ್ಕೆ ಬಂದಿದ್ದರಂತೆ. ಈ ವಿಚಾರ ಈಗ ಹೊರಬಿದ್ದಿದೆ.

ಸುಶಾಂತ್ ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟವರು. ಅವರಿಗೆ ಸಿನಿಮಾ ರಂಗದಲ್ಲಿ ಯಶಸ್ಸು ಕೂಡ ಸಿಕ್ಕಿತ್ತು. ಅದ್ಭುತ ನಟನೆ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದರು. ಒಂದು ಹಂತದಲ್ಲಿ ಅವರು ನಟನೆ ತೊರೆಯಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದರಂತೆ. ಇದಕ್ಕೆ ಕಾರಣವೂ ಇದೆ.

ಸುಶಾಂತ್ ವಿಜ್ಞಾನಿ ಆಗಬೇಕೆಂದು ಕನಸು ಕಂಡಿದ್ದರಂತೆ. ನಿರ್ದೇಶಕ ರುಮಿ ಜಫ್ರಾ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ‘ಸುಶಾಂತ್ ವಿಜ್ಞಾನಿ ಆಗಬೇಕು ಎಂದುಕೊಂಡಿದ್ದರು. ಒಂದಷ್ಟು ಹಣವನ್ನು ಅದಕ್ಕೆ ಹೂಡಿಕೆ ಮಾಡಿ ಲೋನಾವಾಲಾದಲ್ಲಿರುವ ಅವರ ಮನೆಗೆ ತೆರಳಿ ಒಬ್ಬಂಟಿಯಾಗಿರುವ ಉದ್ದೇಶ ಅವರದ್ದಾಗಿತ್ತು’ ಎಂದಿದ್ದಾರೆ ಅವರು.

‘ಸುಶಾಂತ್ ನನ್ನ ಬಳಿ ಖಿನ್ನತೆ ಬಗ್ಗೆ ಹೇಳಿಕೊಂಡಿದ್ದರು. ಆದರೆ, ನಾನು ಎಂದಿಗೂ ಅದರ ಹಿಂದಿನ ಕಾರಣ ಕೇಳಿಲ್ಲ. ಅವರನ್ನು ಚಿಯರಪ್ ಮಾಡೋಕೆ ಪ್ರಯತ್ನಿಸುತ್ತಿದ್ದೆ. ಆದರೆ, ಅವರು ನಿಧನರಾದರು. ನನ್ನ ಮುಂದಿನ ಸಿನಿಮಾದಲ್ಲಿ ಸುಶಾಂತ್ ಹಾಗೂ ರಿಯಾ ಒಟ್ಟಾಗಿ ನಟಿಸಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ’ ಎಂದಿದ್ದಾರೆ.

ಸುಶಾಂತ್ ಸಿಂಗ್ ‘ಕೈ ಪೊ ಚೆ’ ಸಿನಿಮಾ ಮೂಲಕ ಬಾಲಿವುಡ್​ಗೆ ಕಾಲಿಟ್ಟರು. ‘ಪಿಕೆ’, ‘ಎಂ.ಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ’ ಅಂತಹ ಹಿಟ್ ಚಿತ್ರಗಳಲ್ಲಿ ಸುಶಾಂತ್ ನಟಿಸಿದ್ದರು. ‘ದಿಲ್ ಬೇಚಾರಾ’ ಅವರ ನಟನೆಯ ಕೊನೆಯ ಸಿನಿಮಾ. ಸುಶಾಂತ್ ಸಾವಿನ ನಂತರದಲ್ಲಿ ಒಟಿಟಿಯಲ್ಲಿ ರಿಲೀಸ್ ಆದ ಈ ಚಿತ್ರ ಮೆಚ್ಚುಗೆ ಪಡೆದುಕೊಂಡಿತ್ತು. ಸುಶಾಂತ್ ಕಳೆದ ಜೂನ್ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಫ್ಲ್ಯಾಟ್​ನಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಸುಶಾಂತ್ ಶವ ಸಿಕ್ಕಿತ್ತು. ಸದ್ಯ, ಸಿಬಿಐ ಈ ಪ್ರಕರಣದ ತನಿಖೆ ನಡೆಸುತ್ತಿದೆ.

ಇದನ್ನೂ ಓದಿ:

ಸುಶಾಂತ್​ ಸಾವಿನ ಘಟನೆ ಆಧಾರಿತ ಸಿನಿಮಾ ಟ್ರೇಲರ್ ರಿಲೀಸ್​​; ಅಭಿಮಾನಿಗಳಿಗೆ ಶಾಕ್​ ನೀಡಿದ ಡೈಲಾಗ್​​ಗಳು 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us