ತಮನ್ನಾ ಭಾಟಿಯಾ-ವಿಜಯ್​ ವರ್ಮಾ ಮನೆಯಲ್ಲಿ ನಡೆಯುತ್ತಿದೆ ಮದುವೆ ಮಾತುಕತೆ?

Tamannaah Bhatia | Vijay Varma: ವಿಜಯ್​ ವರ್ಮಾ ಮತ್ತು ತಮನ್ನಾ ಭಾಟಿಯಾ ಪದೇ ಪದೇ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ವರ್ಷವೇ ಅವರಿಬ್ಬರು ಹಸೆಮಣೆ ಏರಿದರೂ ಅಚ್ಚರಿ ಏನಿಲ್ಲ.

ತಮನ್ನಾ ಭಾಟಿಯಾ-ವಿಜಯ್​ ವರ್ಮಾ ಮನೆಯಲ್ಲಿ ನಡೆಯುತ್ತಿದೆ ಮದುವೆ ಮಾತುಕತೆ?
ವಿಜಯ್ ವರ್ಮಾ, ತಮನ್ನಾ ಭಾಟಿಯಾ

Updated on: Apr 26, 2023 | 12:42 PM

ನಟಿ ತಮನ್ನಾ ಭಾಟಿಯಾ (Tamannaah Bhatia) ಅವರು ಚಿತ್ರರಂಗದಲ್ಲಿ ಈಗಲೂ ಆ್ಯಕ್ಟೀವ್​ ಆಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಈ ನಡುವೆ ಅವರು ವೈವಾಹಿಕ ಜೀವನಕ್ಕೆ ಕಾಲಿಡುವ ಆಲೋಚನೆಯಲ್ಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಬಾಲಿವುಡ್​ ನಟ ವಿಜಯ್​ ವರ್ಮಾ (Vijay Varma) ಜೊತೆ ಅವರು ಹೆಚ್ಚಾಗಿ ಸುತ್ತಾಡುತ್ತಿದ್ದಾರೆ. ಇಬ್ಬರ ನಡುವೆ ಹೆಚ್ಚು ಆಪ್ತತೆ ಬೆಳೆದಿದೆ. ಅನೇಕ ಸಂದರ್ಭಗಳಲ್ಲಿ ಅವರಿಬ್ಬರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಈಗ ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಅವರ ಮನೆಯಲ್ಲಿ ಮದುವೆ (Marriage) ಮಾತುಕತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದೆ ಎಂಬ ಗಾಸಿಪ್​ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ತಮನ್ನಾ ಅವರಿಂದಾಗಲೀ ಅಥವಾ ವಿಜಯ್​ ಅವರಿಂದಾಗಲೇ ಯಾವುದೇ ರೀತಿ ಸ್ಪಷ್ಟನೆ ಸಿಕ್ಕಿಲ್ಲ.

ಅನೇಕ ಹೀರೋಯಿನ್​ಗಳು ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಿಯಾರಾ ಅಡ್ವಾಣಿ, ಆಲಿಯಾ ಭಟ್​ ಮುಂತಾದವರೇ ಇದಕ್ಕೆ ಉದಾಹರಣೆ. ಅವರ ಸಾಲಿನಲ್ಲೇ ತಮನ್ನಾ ಭಾಟಿಯಾ ಕೂಡ ಸಾಗಲಿದ್ದಾರೆ ಎಂಬ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಬೋಲ್ಡ್​ ಫೋಟೋ ಮೂಲಕ ಪಡ್ಡೆಗಳ ನಿದ್ದೆ ಕದ್ದ ತಮನ್ನಾ

ಸೋಮವಾರ (ಏಪ್ರಿಲ್​ 24) ಮುಂಬೈನಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಅವರು ಜೊತೆಯಾಗಿ ಡಿನ್ನರ್​ಗೆ ತೆರಳಿದ್ದರು. ಒಂದೇ ಕಾರಿನಲ್ಲಿ ಬಂದ ಅವರು ಪಾಪರಾಜಿಗಳ ಕ್ಯಾಮೆರಾಗಳತ್ತ ಕೈ ಬೀಸಿದ್ದಾರೆ. ವಿಜಯ್​ ವರ್ಮಾ ಅವರಿಗೆ ಈಗ 37 ವರ್ಷ ವಯಸ್ಸು. ತಮನ್ನಾ ಅವರಿಗೆ 33ರ ಪ್ರಾಯ. ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಶೀಘ್ರದಲ್ಲೇ ಅವರು ಮದುವೆ ಆಗಲಿದ್ದಾರೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

ಇದನ್ನೂ ಓದಿ: Vijay Varma: ನಟಿ ತಮನ್ನಾಗೆ ಹೊಸ ಹೆಸರು ಟೊಮೆಟೊ; ಪ್ರಿಯಕರ ವಿಜಯ್​ ವರ್ಮಾ ಮುದ್ದಾಗಿ ಕರೆಯೋದು ಹೀಗೆ

ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಅವರು ತಮ್ಮಿಬ್ಬರ ರಿಲೇಷನ್​ಶಿಪ್​ ವಿಚಾರದಲ್ಲಿ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಪದೇಪದೇ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹಿಂಟ್​ ನೀಡಿದ್ದಾರೆ. ಅವರಿಬ್ಬರ ಲವ್​ ಸ್ಟೋರಿ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ಈ ವರ್ಷವೇ ತಮನ್ನಾ-ವಿಜಯ್​ ವರ್ಮಾ ಹಸೆಮಣೆ ಏರಿದರೂ ಅಚ್ಚರಿ ಏನಿಲ್ಲ.

ಇದನ್ನೂ ಓದಿ: Tamanna Bhatia: ಅಧ್ಯಾತ್ಮದ ಕಡೆಗೆ ವಾಲಿದ ತಮನ್ನಾ ಭಾಟಿಯಾ; ನಟಿಯ ಜೀವನದಲ್ಲಿ ಆಗಿದೆ ಬದಲಾವಣೆ

ಬಾಲಿವುಡ್​ನಲ್ಲಿ ವಿಜಯ್​ ವರ್ಮಾ ಅವರು ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ‘ಗಲ್ಲಿ ಬಾಯ್​’, ‘ಪಿಂಕ್​’, ‘ಸೂಪರ್ 30’, ‘ಡಾರ್ಲಿಂಗ್ಸ್​’, ‘ಘೋಸ್ಟ್​ ಸ್ಟೋರಿಸ್​’, ‘ಬಾಘಿ 3’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ವೆಬ್​ ಸರಣಿ ಲೋಕದಲ್ಲೂ ಅವರು ಗುರುತಿಸಿಕೊಂಡಿದ್ದಾರೆ. ‘ಎ ಸೂಟೆಬಲ್​ ಬಾಯ್​’, ‘ಶಿ’, ‘ಮಿರ್ಜಾಪುರ್​’ ಮುಂತಾದ ವೆಬ್​ ಸಿರೀಸ್​ನಲ್ಲಿ ಅವರು ನಟಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us