ಮುಂಬೈನಲ್ಲಿ ಲಕ್ಷುರಿ ಫ್ಲ್ಯಾಟ್, ದುಬಾರಿ ಕಾರು; ನಟ ಸೂರ್ಯ ಐಷಾರಾಮಿ ಜೀವನ

| Updated By: ರಾಜೇಶ್ ದುಗ್ಗುಮನೆ

Updated on: Jul 23, 2024 | 6:30 AM

ನಟ ಸೂರ್ಯ ಅವರಿಗೆ ತಮಿಳು ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕಾಲಿವುಡ್​ನ ಬೇಡಿಕೆಯ ಹೀರೋಗಳ ಪೈಕಿ ಸೂರ್ಯ ಅವರಿಗೂ ಸ್ಥಾನ ಇದೆ. ಇವರು ನೂರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ಮುಂಬೈನಲ್ಲಿ ಲಕ್ಷುರಿ ಫ್ಲ್ಯಾಟ್, ದುಬಾರಿ ಕಾರು; ನಟ ಸೂರ್ಯ ಐಷಾರಾಮಿ ಜೀವನ
ಸೂರ್ಯ
Follow us on

ನಟ ಸೂರ್ಯ ಅವರಿಗೆ ಕಾಲಿವುಡ್​ನಲ್ಲಿ ಸಖತ್ ಬೇಡಿಕೆ ಇದೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರಿಗೆ ಇಂದು (ಜುಲೈ 23) ಜನ್ಮದಿನ. ನಟನಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು ನಟನಾಗಿ ತಮ್ಮನ್ನು ತಾವು ಸಾಬೀತು ಮಾಡಿಕೊಂಡಿದ್ದಾರೆ. ಅವರ ಖ್ಯಾತಿ ಎಷ್ಟಿದೆ ಎಂಬುದನ್ನು ಮತ್ತೆ ಹೇಳಬೇಕಿಲ್ಲ. ಅವರು ಶ್ರೀಮಂತ ನಟರಲ್ಲಿ ಒಬ್ಬರು. ಅವರ ಆಸ್ತಿ ಬಗ್ಗೆ ಇಲ್ಲಿದೆ ವಿವರ.

ಸೂರ್ಯ ಅವರು ನಟ ಶಿವಕುಮಾರ್ ಅವರ ಮಗ. ಈ ಕಾರಣಕ್ಕೆ ಅವರಿಗೆ ಚಿತ್ರರಂಗದ ಜೊತೆ ನಂಟು ಬೆಳೆಯಿತು. 1997ರಲ್ಲಿ ರಿಲೀಸ್ ಆದ ‘ನೆರುಕ್ಕು ನೇರ್’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಗೌತಮ್ ಮೆನನ್ ನಿರ್ದೇಶನದ ‘ಖಾಕಾ ಖಾಕಾ’ ಅವರಿಗೆ ದೊಡ್ಡ ಬ್ರೇಕ್ ನೀಡಿತು. ಇದು ಅವರು ನಟಿಸಿ ಗೆಲುವು ಕಂಡ ಮೊದಲ ಸಿನಿಮಾ.

ಸೂರ್ಯ ಅವರು ಸಿನಿಮಾ ಆಯ್ಕೆಯಲ್ಲಿ ತಮ್ಮದೇ ನಿಯಮ ಇಟ್ಟುಕೊಂಡಿದ್ದಾರೆ. ಸಿನಿಮಾದಲ್ಲಿ ಪಾತ್ರಕ್ಕೆ ತೂಕ ಇದೆ ಎಂದರೆ ಅವರು ನಟಿಸೋಕೆ ಓಕೆ ಎನ್ನುತ್ತಾರೆ. ಈ ಮೊದಲು ರಿಲೀಸ್ ಆದ ‘ವಿಕ್ರಮ್’ ಸಿನಿಮಾದ ಕ್ಲೈಮ್ಯಾಕ್ಸ್​ನಲ್ಲಿ ಹೀಗೆ ಬಂದು ಹಾಗೆ ಹೋಗುತ್ತಾರೆ ಸೂರ್ಯ. ಆದರೆ, ಆ ಪಾತ್ರ ಮಾಡಿದ ಎಫೆಕ್ಟ್ ತುಂಬಾನೇ ದೊಡ್ಡದು. ಈ ರೀತಿಯ ಪಾತ್ರಗಳ ಆಯ್ಕೆ ಕಾರಣದಿಂದ ಸೂರ್ಯ ಅವರು ಎಲ್ಲರ ಗಮನ ಸೆಳೆಯುತ್ತಾರೆ.

ಸೂರ್ಯ ಅವರು 2010ರಿಂದ ಈ ಚೆ ಭರ್ಜರಿ ಸಂಭಾವನೆ ಪಡೆಯುತ್ತಿದ್ದಾರೆ. ಅದೇ ರೀತಿ ಅವರು ಹೂಡಿಕೆ ಕೂಡ ದೊಡ್ಡ ಮಟ್ಟದಲ್ಲೇ ಮಾಡುತ್ತಿದ್ದಾರೆ. ಅವರಿಗೆ ನಟನೆ ಹಾಗೂ ಸಿನಿಮಾ ನಿರ್ಮಾಣದಿಂದ ಹಣ ಬರುತ್ತಿದೆ. ಅವರು ಲಕ್ಷುರಿ ಮನೆ ಹಾಗೂ ಕಾರುಗಳನ್ನು ಹೊಂದಿದ್ದಾರೆ. ಅವರು ನಟಿ ಜ್ಯೋತಿಕಾ ಅವರನ್ನು ಮದುವೆ ಆಗಿದ್ದಾರೆ.

ಮುಂಬೈನಲ್ಲಿ ಸೂರ್ಯ ಅವರು 70 ಕೋಟಿ ರೂಪಾಯಿ ಮನೆ ಹೊಂದಿದ್ದಾರೆ. ಇದನ್ನು ಇತ್ತೀಚೆಗಷ್ಟೇ ಖರೀದಿ ಮಾಡಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರ ಮಕ್ಕಳ ಶಿಕ್ಷಣ. ಸದ್ಯ ಅವರ ಮಕ್ಕಳು ಮುಂಬೈನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಕಾರಣಕ್ಕೆ ಅವರು ಅಲ್ಲಿ ಸೆಟಲ್ ಆಗಿದ್ದಾರೆ. ಇದೇ ರೀತಿ ಜ್ಯೋತಿಕಾ ಕೂಡ ಮುಂಬೈನಲ್ಲಿ ಸೆಟಲ್ ಆಗಿದ್ದು, ಅವರಿಗಾಗಿ ಈ ಮನೆ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ‘ಸ್ಟಾರ್ ನಟರು ಸೂರ್ಯ, ಚಂದ್ರರನ್ನೇ ಕೇಳುತ್ತಾರೆ’; ಕರಣ್ ಜೋಹರ್ ಅಸಮಾಧಾನ

ಸೂರ್ಯ ಅವರ ಆಸ್ತಿ 350 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಚೆನ್ನೈನಲ್ಲಿ ಮನೆ ಹೊಂದಿದ್ದಾರೆ. ಅವರ ಬಳಿ ಹಲವು ಲಕ್ಷುರಿ ಕಾರುಗಳು ಇವೆ.  ಅವರು ತಮ್ಮ ಬ್ಯಾನರ್ ಮೂಲಕ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಸದ್ಯ ‘ಕಂಗುವ’ ಸಿನಿಮಾ ಶೂಟಿಂಗ್​ನಲ್ಲಿ ಸೂರ್ಯ ಬ್ಯುಸಿ ಇದ್ದಾರೆ. ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದೆ. ಈ ಚಿತ್ರದ ಕಡೆಯಿಂದ ವಿಶೇಷ ಗಿಫ್ಟ್ ಸಿಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.