ಅಮಿತ್​ ಶಾ ಭೇಟಿ ಮಾಡಿದ ‘ಹನುಮಾನ್​’ ತಂಡ; ಸಿಕ್ತು ಗೃಹ ಸಚಿವರ ಮೆಚ್ಚುಗೆ

ಇಂಡಿಯನ್​ ಸೂಪರ್​ ಹೀರೋ ಕಥೆ ಹೊಂದಿರುವ ‘ಹನುಮಾನ್​’ ಸಿನಿಮಾ 50ಕ್ಕೂ ಹೆಚ್ಚು ದಿನಗಳ ಕಾಲ ಪ್ರದರ್ಶನ ಕಂಡು ಬ್ಲಾಕ್​ ಬಸ್ಟರ್​ ಆಗಿದೆ. ಈ ಚಿತ್ರತಂಡದವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ನಟ ತೇಜ ಸಜ್ಜಾ, ನಿರ್ದೇಶಕ ಪ್ರಶಾಂತ್​ ವರ್ಮಾ ಸೇರಿದಂತೆ ಇಡೀ ತಂಡದ ಮುಂದಿನ ಪ್ರಾಜೆಕ್ಟ್​ಗೆ ಅಮಿತ್​ ಶಾ ಶುಭ ಹಾರೈಸಿದ್ದಾರೆ.

ಅಮಿತ್​ ಶಾ ಭೇಟಿ ಮಾಡಿದ ‘ಹನುಮಾನ್​’ ತಂಡ; ಸಿಕ್ತು ಗೃಹ ಸಚಿವರ ಮೆಚ್ಚುಗೆ
ಅಮಿತ್​ ಶಾ ಭೇಟಿ ಮಾಡಿದ ಹನುಮಾನ್​ ಚಿತ್ರತಂಡ

Updated on: Mar 13, 2024 | 3:18 PM

ಬಾಕ್ಸ್​ ಆಫೀಸ್​ನಲ್ಲಿ ‘ಹನುಮಾನ್​’ ಸಿನಿಮಾ (HanuMan Movie) ದಾಖಲೆ ಬರೆದಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆದ ಈ ಸಿನಿಮಾವನ್ನು ಜನರು ಗೆಲ್ಲಿಸಿದ್ದಾರೆ. ವಿಶ್ವಾದ್ಯಂತ 300 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ‘ಹನುಮಾನ್​’ (HanuMan) ಸಿನಿಮಾ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈಗ ಕೇಂದ್ರ ಗೃಹ ಸಚಿವ ಅಮಿತ್​ ಶಾ (Amit Shah) ಕೂಡ ಈ ಸಿನಿಮಾವನ್ನು ಹೊಗಳಿದ್ದಾರೆ. ಹೈದರಾಬಾದ್​​ನಲ್ಲಿ ಅಮಿತ್​ ಶಾ ಅವರನ್ನು ‘ಹನುಮಾನ್​’ ತಂಡದವರು ಭೇಟಿ ಮಾಡಿದ್ದಾರೆ. ಆ ಸಂದರ್ಭದ ಫೋಟೋ ವೈರಲ್​ ಆಗಿದೆ.

ಪಕ್ಷದ ಮೀಟಿಂಗ್​ ಸಲುವಾಗಿ ಅಮಿತ್​ ಶಾ ಅವರು ಹೈದರಾಬಾದ್​ಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಭೇಟಿ ಆಗುವ ಅವಕಾಶ ‘ಹನುಮಾನ್​’ ತಂಡಕ್ಕೆ ಸಿಕ್ಕಿದೆ. ಗೃಹ ಸಚಿವರಿಗೆ ಆಂಜನೇಯನ ಮೂರ್ತಿ ಇರುವ ಸ್ಮರಣಿಕೆಯನ್ನು ನೀಡಲಾಗಿದೆ. ಚಿತ್ರಮಂದಿರದಲ್ಲಿ ಈ ಸಿನಿಮಾ 50 ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಂಡಿದೆ. ಈಗ ಗೃಹ ಸಚಿವ ಅಮಿತ್​ ಶಾ ಅವರಿಂದ ಮೆಚ್ಚುಗೆ ಸಿಕ್ಕಿರುವುದಕ್ಕೆ ಚಿತ್ರತಂಡ ಖುಷಿಯಲ್ಲಿದೆ.

‘ಹನುಮಾನ್​’ ತಂಡದ ಭೇಟಿಯ ಬಳಿಕ ಅಮಿತ್​ ಶಾ ಅವರು ‘ಎಕ್ಸ್​’ (ಟ್ವಿಟರ್​) ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಇತ್ತೀಚೆಗೆ ಸೂಪರ್​ ಹಿಟ್​ ಆದ ಹನುಮಾನ್​ ಸಿನಿಮಾದ ನಿರ್ದೇಶಕ ಪ್ರಶಾಂತ್​ ವರ್ಮಾ, ಪ್ರತಿಭಾವಂತ ನಟ ತೇಜ ಸಜ್ಜಾ ಅವರನ್ನು ಭೇಟಿ ಮಾಡಿದೆ. ಭಾರತದ ಧಾರ್ಮಿಕ ಪರಂಪರೆಯನ್ನು ತೋರಿಸುವಲ್ಲಿ ಈ ಚಿತ್ರತಂಡದವರು ಉತ್ತಮವಾದ ಕೆಲಸ ಮಾಡಿದ್ದಾರೆ. ಅವರ ಮುಂದಿನ ಸಿನಿಮಾಗಳಿಗೆ ಶುಭವಾಗಲಿ’ ಎಂದು ಅಮಿತ್ ಶಾ ಪೋಸ್ಟ್​ ಮಾಡಿದ್ದಾರೆ. ತಂಡದ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಹಿಂದಿಯಲ್ಲಿ ‘ಕೆಜಿಎಫ್​’ ಮಾಡಿದ್ದ ದಾಖಲೆ ಮುರಿದ ‘ಹನುಮಾನ್​’ ಸಿನಿಮಾ

ಈ ಭೇಟಿಯ ಸಂದರ್ಭದಲ್ಲಿ ನಿರ್ಮಾಪಕ ಕೆ. ನಿರಂಜನ್​ ರೆಡ್ಡಿ, ಕೇಂದ್ರ ಸಚಿವ ಜಿ. ಕೃಷ್ಣ ರೆಡ್ಡಿ ಕೂಡ ಜೊತೆಯಲ್ಲಿ ಇದ್ದರು. ‘ಅಮಿತ್​ ಶಾ ಅವರನ್ನು ಭೇಟಿಯಾಗಿದ್ದು ಒಂದು ಹೆಮ್ಮೆ. ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಧನ್ಯವಾದಗಳು’ ಎಂದು ನಟ ತೇಜ ಸಜ್ಜಾ ಪೋಸ್ಟ್​ ಮಾಡಿದ್ದಾರೆ. ಚಿತ್ರಮಂದಿರದಲ್ಲಿ ಬ್ಲಾಕ್​ ಬಸ್ಟರ್​ ಹಿಟ್​ ಆಗಿರುವ ಈ ಸಿನಿಮಾ ಶೀಘ್ರದಲ್ಲೇ ಒಟಿಟಿಗೆ ಬರಲಿದೆ. ಅಲ್ಲದೇ, ಈ ಚಿತ್ರಕ್ಕೆ ಸೀಕ್ವೆಲ್​ ಸಿದ್ಧವಾಗುತ್ತಿದೆ. ಎರಡನೇ ಪಾರ್ಟ್​ಗೆ ‘ಜೈ ಹನುಮಾನ್​’ ಎಂದು ಶೀರ್ಷಿಕೆ ಇಡಲಾಗಿದೆ. ಆ ಸಿನಿಮಾಗಾಗಿ ಅಭಿಮಾನಿಗಳು ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us