‘ಟಾಕ್ಸಿಕ್’ ಎಫೆಕ್ಟ್: ಶಾಲಾ-ಕಾಲೇಜುಗಳಲ್ಲಿ ಸಿನಿಮಾ ಪ್ರಚಾರಕ್ಕೆ ಅವಕಾಶವಿಲ್ಲ

ವಿದ್ಯಾರ್ಥಿಗಳನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಚಿತ್ರತಂಡಗಳ ಪ್ರಮುಖ ಟಾರ್ಗೆಟ್. ಹೀಗಾಗಿ ಹಲವು ಸಿನಿಮಾ ತಂಡಗಳು ತಮ್ಮ ಸಿನಿಮಾಗಳನ್ನು ಶಾಲೆ-ಕಾಲೇಜುಗಳಲ್ಲಿ ಪ್ರಚಾರ ಮಾಡುತ್ತವೆ. ಕರ್ನಾಟಕದಲ್ಲಂತೂ ಹಲವಾರು ಚಿತ್ರತಂಡಗಳು ತಮ್ಮ ಸಿನಿಮಾಗಳನ್ನು ಕಾಲೇಜುಗಳಲ್ಲಿ, ಶಾಲೆಗಳಲ್ಲಿ ಪ್ರಚಾರ ಮಾಡುತ್ತವೆ. ನೆರೆ ರಾಜ್ಯಗಳಲ್ಲಿಯೂ ಈ ಪದ್ಧತಿ ಇದೆ. ಆದರೆ ಇದೀಗ ನೆರೆಯ ತೆಲಂಗಾಣದಲ್ಲಿ ಈ ಕುರಿತಾಗಿ ಪ್ರಮುಖ ನಿರ್ಧಾರವನ್ನು ತಳೆದಿದೆ.

‘ಟಾಕ್ಸಿಕ್’ ಎಫೆಕ್ಟ್: ಶಾಲಾ-ಕಾಲೇಜುಗಳಲ್ಲಿ ಸಿನಿಮಾ ಪ್ರಚಾರಕ್ಕೆ ಅವಕಾಶವಿಲ್ಲ
Movie Promotion

Updated on: Nov 12, 2026 | 3:53 PM

ಮುಖ್ಯಾಂಶಗಳು

  • ಸಿನಿಮಾ ಪ್ರಚಾರಕ್ಕೆ ನಿರ್ಬಂಧ
  • ಶಾಲಾ-ಕಾಲೇಜಿನಲ್ಲಿ ಪ್ರಚಾರ ಮಾಡುವಂತಿಲ್ಲ
  • ‘ಟಾಕ್ಸಿಕ್’ ಸಿನಿಮಾ ಬಳಿಕ ಈ ಪರಿಣಾಮ

ಚಿತ್ರತಂಡಗಳು ತಮ್ಮ ಸಿನಿಮಾಗಳನ್ನು ಶಾಲೆ, ಕಾಲೇಜುಗಳಲ್ಲಿ ಪ್ರಚಾರ ಮಾಡುವುದು ಸರ್ವೇ ಸಾಮಾನ್ಯ. ಯುವವರ್ಗ ಅದರಲ್ಲೂ ವಿದ್ಯಾರ್ಥಿಗಳನ್ನು ಚಿತ್ರಮಂದಿರಗಳಿಗೆ ಸೆಳೆಯುವುದು ಚಿತ್ರತಂಡಗಳ ಪ್ರಮುಖ ಟಾರ್ಗೆಟ್. ಹೀಗಾಗಿ ಹಲವು ಸಿನಿಮಾ ತಂಡಗಳು ತಮ್ಮ ಸಿನಿಮಾಗಳನ್ನು ಶಾಲೆ-ಕಾಲೇಜುಗಳಲ್ಲಿ ಪ್ರಚಾರ ಮಾಡುತ್ತವೆ. ಕರ್ನಾಟಕದಲ್ಲಂತೂ ಹಲವಾರು ಚಿತ್ರತಂಡಗಳು ತಮ್ಮ ಸಿನಿಮಾಗಳನ್ನು ಕಾಲೇಜುಗಳಲ್ಲಿ, ಶಾಲೆಗಳಲ್ಲಿ ಪ್ರಚಾರ ಮಾಡುತ್ತವೆ. ನೆರೆ ರಾಜ್ಯಗಳಲ್ಲಿಯೂ ಈ ಪದ್ಧತಿ ಇದೆ. ಆದರೆ ಇದೀಗ ನೆರೆಯ ತೆಲಂಗಾಣದಲ್ಲಿ ಈ ಕುರಿತಾಗಿ ಪ್ರಮುಖ ನಿರ್ಧಾರವನ್ನು ತಳೆದಿದೆ.

ತೆಲಂಗಾಣ ಸರ್ಕಾರವು ವಿದ್ಯಾರ್ಥಿಗಳ ಸುರಕ್ಷತೆಯಿಂದ ಕಾಲೇಜು ಕ್ಯಾಂಪಸ್‌ಗಳಲ್ಲಿ ಸಿನಿಮಾ ಪ್ರಮೋಷನ್‌ಗಳು ಮತ್ತು ಖಾಸಗಿ ಕಾರ್ಯಕ್ರಮಗಳ ಮೇಲೆ ನಿಷೇಧ ಹೇರಲು ಮುಂದಾಗಿದೆ. ಇತ್ತೀಚೆಗೆ ಕೆಲವು ಕಾಲೇಜುಗಳ ಆಡಳಿತ ಮಂಡಳಿಗಳು ಸಿನಿಮಾ ಪ್ರಮೋಷನ್‌ಗಳು ಮತ್ತು ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ವಿದ್ಯಾರ್ಥಿಗಳನ್ನು ಅನ್ಯ ಕಾರಣಗಳಿಗಾಗಿ ಬಳಸಿಕೊಳ್ಳುತ್ತಿವೆ ಎಂಬ ಕಾರಣಕ್ಕೆ ಈ ಹಿನ್ನೆಲೆಯಲ್ಲಿ, ವಿವಿಧ ವಿದ್ಯಾ ಸಂಸ್ಥೆಗಳಲ್ಲಿ ಯಾವೆಲ್ಲಾ ಕಾರ್ಯಕ್ರಮಗಳಿಗೆ ಅನುಮತಿ ನೀಡಬಹುದು ಮತ್ತು ಯಾವ ಇವೆಂಟ್‌ಗಳನ್ನು ನಿಷೇಧಿಸಬೇಕು ಎಂಬ ಬಗ್ಗೆ ಸಮಗ್ರ ಅಧ್ಯಯನ ನಡೆಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.

Loading...

ತೆಲಂಗಾಣ ರಾಜ್ಯದ ಪ್ರೈವೆಟ್ ಕಾಲೇಜುಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಎಂ ರೇವಂತ್ ರೆಡ್ಡಿ ಸರ್ಕಾರವು ಕಸರತ್ತು ಆರಂಭಿಸಿದೆ. ವಿದ್ಯಾ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ಸಿನಿಮಾ ಪ್ರಮೋಷನ್‌ಗಳು ಮತ್ತು ಖಾಸಗಿ ಇವೆಂಟ್‌ಗಳ ನಿರ್ವಹಣೆಯ ಮೇಲೆ ಪೂರ್ಣ ಪ್ರಮಾಣದ ನಿಷೇಧ ಹೇರಲು ಯೋಚಿಸುತ್ತಿದೆ. ಕ್ಯಾಂಪಸ್‌ಗಳನ್ನು ಕೇವಲ ವಿದ್ಯಾ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಮಾತ್ರವೇ ಸೀಮಿತಗೊಳಿಸಬೇಕು ಎಂಬುದು ಸರ್ಕಾರದ ಆಲೋಚನೆಯಾಗಿದೆ. ವಿದ್ಯಾರ್ಥಿಗಳನ್ನು ವಾಣಿಜ್ಯ ಹಾಗೂ ರಾಜಕೀಯ ಪ್ರಚಾರಗಳಿಗೆ ಬಳಿಸಿಕೊಳ್ಳುವುದರ ವಿರುದ್ಧ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ:ಒಂದು ವಾರಕ್ಕೆ ‘ರಾಮಾಯಣ’ ಗಳಿಸಿದ್ದೆಷ್ಟು? ಹೊಸ ಇತಿಹಾಸ ಬರೆದ ಯಶ್ ಸಿನಿಮಾ

ಈ ನಿರ್ಧಾರಕ್ಕೆ ‘ಟಾಕ್ಸಿಕ್’ ಸಿನಿಮಾ ಕಾರಣ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾದ ಪ್ರಚಾರ ಮಲ್ಲಾರೆಡ್ಡಿ ಯೂನಿವರ್ಸಿಟಿ ಮೈದಾನದಲ್ಲಿ ನಡೆದಿತ್ತು. ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗಿ ಆಗಿದ್ದರು. ಈ ವೇಳೆ ಸೌಂಡ್ ಬಾಕ್ಸ್‌ಗಳು ಕುಸಿದು ಬಿದ್ದು ಕೆಲವರಿಗೆ ಗಾಯಗಳಾದವು. ಹಾಗೆಯೇ ಮತ್ತೊಂದು ಪ್ರೈವೆಟ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ದಾಂಡಿಯಾ ನೈಟ್ ನಡೆದಿತ್ತು. ಆ ಕಾರ್ಯಕ್ರಮದಲ್ಲಿ 80 ಅಡಿಯ ತಾತ್ಕಾಲಿಕ ಲೈಟಿಂಗ್ ಕಂಬ ಕುಸಿದುಬಿತ್ತು. ಈ ಅಪಘಾತದಲ್ಲಿ ವಿದ್ಯಾರ್ಥಿಯೊಬ್ಬರು ನಿಧನರಾಗಿ ಕನಿಷ್ಠ 14 ಮಂದಿ ಗಾಯಗೊಂಡರು. ಇವುಗಳ ಬಳಿಕ ಇದೀಗ ತೆಲಂಗಾಣ ಸರ್ಕಾರ ಇಂಥಹಾ ಕಠಿಣ ಕ್ರಮಕ್ಕೆ ಮುಂದಾಗಿದೆ.

ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ರಜೆಗಳನ್ನು ಘೋಷಿಸುವ ಕುರಿತು ಈಗಾಗಲೇ ತೆಲಂಗಾಣ ಉನ್ನತ ಶಿಕ್ಷಣ ಮಂಡಳಿಯು ಕಾಲೇಜುಗಳ ಆಡಳಿತ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಪ್ರಮೋಷನ್‌ಗಳ ಹೆಸರಿನಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಹಾಗೂ ಶಿಸ್ತನ್ನು ಹಾಳುಮಾಡುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನುಮುಂದೆ ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಬೇಕೆಂದರೆ ಶಿಕ್ಷಣ ಇಲಾಖೆಯ ಜೊತೆಗೆ ಪೊಲೀಸರ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಸಾಧ್ಯತೆಯಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Thu, 12 November 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us