ಬಿಗ್ಬಾಸ್ ಸೀಸನ್ ಪ್ರಾರಂಭವಾಗಿದೆ. ತೆಲುಗಿನಲ್ಲಿ ಈಗಾಗಲೇ ಬಿಗ್ಬಾಸ್ ಪ್ರಾರಂಭವಾಗಿ ತಿಂಗಳು ಕಳೆಯುತ್ತಾ ಬಂದಿದೆ. ಕನ್ನಡ ಬಿಗ್ಬಾಸ್ ಇನ್ನು ನಾಲ್ಕು ದಿನದಲ್ಲಿ ಪ್ರಾರಂಭವಾಗಲಿದೆ. ಹಿಂದಿ ಮತ್ತು ತಮಿಳು ಬಿಗ್ಬಾಸ್ ಸಹ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಮರಾಠಿ ಬಿಗ್ಬಾಸ್ ಸೆಟ್ ಅದ್ಧೂರಿಯಾಗಿ ರೆಡಿ ಮಾಡಲಾಗಿದೆ. ಈ ಬಾರಿ ಬಾಲಿವುಡ್ ನಟ ರಿತೇಶ್ ದೇಶ್ಮುಖ್ ನಿರೂಪಣೆ ಮಾಡುತ್ತಿದ್ದಾರೆ. ಮರಾಠಿ ಬಿಗ್ಬಾಸ್ ಈಗಾಗಲೇ ಪ್ರಾರಂಭವಾಗಿ ಒಂದು ತಿಂಗಳಾಗಿದೆ. ಇದರ ನಡುವೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗಬೇಕಿದ್ದ ಬಿಗ್ಬಾಸ್ ಶೋ ಒಂದರ ಸೆಟ್ನಲ್ಲಿ ಭಾರಿ ಅವಘಡ ಸಂಭವಿಸಿದೆ.
ತಮಿಳು ಬಿಗ್ಬಾಸ್ ಸೀಸನ್ 8 ಹೊಸ ನಿರೂಪಕರ ಸಾರಥ್ಯದಲ್ಲಿ ಪ್ರಾರಂಭವಾಗಲು ಸಜ್ಜಾಗಿದೆ. ಶೋಗೆ ಸೆಟ್ ತಯಾರಿ ನಡೆಯುತ್ತಿದೆ. ಆದರೆ ಈ ಹಂತದಲ್ಲಿ ಸೆಟ್ನಲ್ಲಿ ಅವಘಡ ಸಂಭವಿಸಿದ್ದು, ಒಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಸೆಟ್ ನಿರ್ಮಾಣ ಕಾರ್ಯಕ್ಕೆ ಉತ್ತರ ಪ್ರದೇಶದಿಂದ ಬಂದಿದ್ದ ಮೊಹಮ್ಮದ್ ಶಹೀನ್ ಖಾನ್ ಎಂಬಾತ ಸೆಟ್ ನಿರ್ಮಾಣದ ವೇಳೆ 20 ಅಡಿ ಮೇಲಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ.
ಕೆಲ ತಮಿಳು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿರುವಂತೆ ಕೆಳಗೆ ಬಿದ್ದ ವ್ಯಕ್ತಿಗೆ ಕೆಲ ಗಂಭೀರ ಗಾಯಗಳಾಗಿದ್ದು ವ್ಯಕ್ತಿಯ ಭುಜ ಹಾಗೂ ಪುಷ್ಠದ ಭಾಗದ ಮೂಳೆಗಳು ಪೂರ್ಣವಾಗಿ ಮುರಿದಿವೆ ಎನ್ನಲಾಗುತ್ತಿದೆ. ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದ್ದು, ಐಸಿಯು ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಈ ಬಗ್ಗೆ ಬಿಗ್ಬಾಸ್ ಆಯೋಜಕರು ಅಧಿಕೃತ ಹೇಳಿಕೆಯನ್ನು ಇನ್ನಷ್ಟೆ ನೀಡಬೇಕಿದೆ.
ಇದನ್ನೂ ಓದಿ:ಈ ಬಾರಿ ಬಿಗ್ಬಾಸ್ ಮನೆಗೆ ಹೋಗುವವರು ಯಾರು? ಇಲ್ಲಿದೆ ಸಂಭಾವ್ಯ ಪಟ್ಟಿ
ತಮಿಳು ಬಿಗ್ಬಾಸ್ ಸೀಸನ್ 8 ಅಕ್ಟೋಬರ್ 6 ರಂದು ಪ್ರಾರಂಭವಾಗಲಿದೆ. ಕಳೆದ ಹಲವು ಸೀಸನ್ಗಳನ್ನು ನಟ ಕಮಲ್ ಹಾಸನ್ ನಿರೂಪಣೆ ಮಾಡಿದ್ದರು. ಆದರೆ ಈಗ ನಟ ವಿಜಯ್ ಸೇತುಪತಿ ಬಿಗ್ಬಾಸ್ ಸೀಸನ್ 8ನ್ನು ನಿರೂಪಣೆ ಮಾಡಲಿದ್ದಾರೆ. ಹಾಗಾಗಿ ಹೊಸ ರೀತಿಯಲ್ಲಿ ಭಿನ್ನವಾಗಿ ಸೆಟ್ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗ ಬಿಡುಗಡೆ ಮಾಡಿರುವ ಪ್ರೋಮೋ ಪ್ರಕಾರ, ಈ ಬಾರಿಯ ತಮಿಳು ಬಿಗ್ಬಾಸ್ನ ಥೀಮ್ ಭಿನ್ನವಾಗಿರಲಿದೆ. ‘ಆಟಂ ಪುದುಸು, ರೂಲುಂ ಪುದುಸು’ (ಆಟವೂ ಹೊಸತು, ನಿಯಮಗಳೂ ಹೊಸತು) ಎಂಬ ಥೀಮ್ ಸಾಲನ್ನು ಈ ಬಾರಿಯ ಸೀಸನ್ಗೆ ನೀಡಲಾಗಿದೆ. ಕೆಲ ಜನಪ್ರಿಯ ವ್ಯಕ್ತಿಗಳು, ಕೆಲ ವಿವಾದಾತ್ಮಕ ವ್ಯಕ್ತಿಗಳು, ಕೆಲವು ರಾಜಕಾರಣಿಗಳು ಸಹ ಈ ಬಾರಿ ಬಿಗ್ಬಾಸ್ ತಮಿಳಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ