Bigg Boss Kannada: ಈ ಬಾರಿ ಬಿಗ್ ಬಾಸ್ನಲ್ಲಿ ಎರಡು ಮನೆ; ಅಪ್ಡೇಟ್ ಕೊಟ್ಟ ಸುದೀಪ್
ಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಲಿದೆ. ಅದಕ್ಕಾಗಿ ಸಕಲ ತಯಾರಿ ನಡೆದಿದೆ. ಕಿಚ್ಚ ಸುದೀಪ್ ಅವರು ಎಂದಿನ ಉತ್ಸಾಹದಲ್ಲಿ ನಿರೂಪಣೆ ಮಾಡಲು ಬರುತ್ತಿದ್ದಾರೆ. ಈಗ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿದ್ದು, ಬಿಗ್ ಬಾಸ್ನಲ್ಲಿ ಎರಡು ಮನೆ ಇರಲಿದೆ ಎಂಬ ವಿಚಾರ ರಿವೀಲ್ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಆಗಮನಕ್ಕೆ ದಿನಗಣನೆ ಶುರುವಾಗಿದೆ. ಸೆಪ್ಟೆಂಬರ್ 29ರಂದು ಬಿಗ್ ಬಾಸ್ಗೆ ಅದ್ದೂರಿ ಓಪನಿಂಗ್ ಸಿಗಲಿದೆ. ಈ ಬಾರಿಯೂ 17 ಸ್ಪರ್ಧಿಗಳು ಮನೆ ಸೇರುವ ನಿರೀಕ್ಷೆ ಇದೆ. ಆದರೆ, ಬೇರೆ ಬೇರೆ ಹಂತಗಳಲ್ಲಿ ಸ್ಪರ್ಧಿಗಳಿಗೆ ಎಂಟ್ರಿ ಸಿಗಲಿದೆ. ಸಂಪೂರ್ಣವಾಗಿ ಭಿನ್ನ ಕಾನ್ಸೆಪ್ಟ್ನಲ್ಲಿ ಬಿಗ್ ಬಾಸ್ ಸಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗಿದೆ. ಈ ಬಾರಿ ಬಿಗ್ ಬಾಸ್ನಲ್ಲಿ ಎರಡು ಮನೆ ಇರಲಿದೆಯಂತೆ.
ಹಾಗಾದರೆ, ಎರಡು ಪ್ರತ್ಯೇಕ ಮನೆ ನಿರ್ಮಾಣ ಆಗುತ್ತಿದೆಯೇ? ಇಲ್ಲ. ಸದ್ಯ ಬಿಗ್ ಬಾಸ್ನಲ್ಲಿ ಸ್ವರ್ಗ-ನರಕದ ಕಾನ್ಸೆಪ್ಟ್ ತರಲಾಗಿದೆ. ಸ್ವರ್ಗದಲ್ಲಿದ್ದವರಿಗೆ ಮನೆಯ ಎಲ್ಲಾ ಸೌಲಭ್ಯ ಬಳಕೆ ಮಾಡಿಕೊಳ್ಳಬಹುದು. ನರಕದಲ್ಲಿ ಇದ್ದವರಿಗೆ ಮೂಲ ಸೌಲಭ್ಯಗಳು ಮಾತ್ರ ಸಿಗುತ್ತವೆ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ.
ಈಗ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ಗೆ ಸಂಬಂಧಿಸಿ ಹೊಸ ಪ್ರೋಮೋ ರಿಲೀಸ್ ಮಾಡಿದೆ. ‘11ರ ಬಿಗ್ ಬಾಸ್ನಲ್ಲಿ ಒಂದಲ್ಲ, ಎರಡು ಮನೆ. ಸ್ವರ್ಗ-ನರಕ. ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಸಲಿ ಆಟ ನಿಮ್ಮಿಂದ ಶುರುವಾಗುತ್ತಿದೆ. ಸ್ಪರ್ಧಿಗಳ ಹೆಸರನ್ನು ನಾವು ಹೇಳುತ್ತೇವೆ. ಅವರು ಸ್ವರ್ಗಕ್ಕೆ ಹೋಗಬೇಕಾ ಅಥವಾ ನರಕಕ್ಕೆ ಹೋಗಬೇಕಾ ಎಂಬುದನ್ನು ನೀವು ನಿರ್ಧರಿಸಿ. ರಾಜಾ ರಾಣಿ ಶೋನಲ್ಲಿ ಸಂಪೂರ್ಣ ಮಾಹಿತಿ ಸಿಗಲಿದೆ’ ಎಂದು ಸುದೀಪ್ ಹೇಳಿದ್ದಾರೆ.
View this post on Instagram
ಶನಿವಾರ (ಸೆಪ್ಟೆಂಬರ್ 28) ‘ರಾಜಾ-ರಾಣಿ’ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಇದರಲ್ಲಿ ಕೆಲವು ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡೋದಾಗಿ ವಾಹಿನಿಯವರು ಹೇಳಿದ್ದಾರೆ. ಸದ್ಯ ಎಲ್ಲಾ ಕಡೆಗಳಲ್ಲಿ ಸಂಭಾವ್ಯ ಪಟ್ಟಿ ಓಡಾಡುತ್ತಿದೆ. ಈ ಪೈಕಿ ನಿಜಕ್ಕೂ ದೊಡ್ಮನೆಗೆ ಹೋಗುವವರು ಯಾರ್ಯಾರು ಎಂಬುದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.
ಇದನ್ನೂ ಓದಿ: ಕನ್ನಡದ ಬಿಗ್ ಬಾಸ್ನಲ್ಲಿ ಸ್ವರ್ಗ-ನರಕ; ಹಿಂದಿಯಲ್ಲಿ ಏನು ಥೀಮ್? ಸುಳಿವು ಕೊಟ್ಟ ಸಲ್ಲು
ಕಳೆದ ಬಿಗ್ ಬಾಸ್ನಲ್ಲಿ ಸಾಕಷ್ಟು ಕಿತ್ತಾಟಗಳು ನಡೆದಿದ್ದವು. ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ಪರಿಸ್ಥಿತಿಗಳು ಹೋಗಿದ್ದವು. ಹೆಚ್ಚು ಹಾಸ್ಯ ಇರಲಿಲ್ಲ. ಈ ಬಾರಿ ಹಾಗಾಗದಿರಲಿ ಎಂದು ಎಲ್ಲರೂ ಕೇಳಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.