AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಶುರುವಾಗುವ ಮುಂಚೆಯೇ ಸೆಟ್​ನಲ್ಲಿ ನಡೆಯಿತು ಅವಘಡ

ಎಲ್ಲೆಡೆ ಬಿಗ್​ಬಾಸ್ ಸೀಸನ್ ಪ್ರಾರಂಭವಾಗಿದೆ. ತೆಲುಗು ಹಾಗೂ ಮರಾಠಿ ಬಿಗ್​ಬಾಸ್ ಈಗಾಗಲೇ ಪ್ರಾರಂಭವಾಗಿದೆ. ಕನ್ನಡ, ತಮಿಳು ಹಾಗೂ ಹಿಂದಿಯ ಬಿಗ್​ಬಾಸ್​ ಹೊಸ ಸೀಸನ್​ಗಳು ಇನ್ನಷ್ಟೆ ಪ್ರಾರಂಭವಾಗಬೇಕಿದೆ. ಆದರೆ ಈ ನಡುವೆ ಒಂದು ಬಿಗ್​ಬಾಸ್​ ಸೆಟ್​ನಲ್ಲಿ ಭಾರಿ ಅವಘಡ ನಡೆದಿದೆ.

ಬಿಗ್​ಬಾಸ್ ಶುರುವಾಗುವ ಮುಂಚೆಯೇ ಸೆಟ್​ನಲ್ಲಿ ನಡೆಯಿತು ಅವಘಡ
ಮಂಜುನಾಥ ಸಿ.
|

Updated on: Sep 25, 2024 | 11:03 AM

Share

ಬಿಗ್​ಬಾಸ್ ಸೀಸನ್ ಪ್ರಾರಂಭವಾಗಿದೆ. ತೆಲುಗಿನಲ್ಲಿ ಈಗಾಗಲೇ ಬಿಗ್​ಬಾಸ್ ಪ್ರಾರಂಭವಾಗಿ ತಿಂಗಳು ಕಳೆಯುತ್ತಾ ಬಂದಿದೆ. ಕನ್ನಡ ಬಿಗ್​ಬಾಸ್ ಇನ್ನು ನಾಲ್ಕು ದಿನದಲ್ಲಿ ಪ್ರಾರಂಭವಾಗಲಿದೆ. ಹಿಂದಿ ಮತ್ತು ತಮಿಳು ಬಿಗ್​ಬಾಸ್ ಸಹ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಮರಾಠಿ ಬಿಗ್​ಬಾಸ್ ಸೆಟ್​ ಅದ್ಧೂರಿಯಾಗಿ ರೆಡಿ ಮಾಡಲಾಗಿದೆ. ಈ ಬಾರಿ ಬಾಲಿವುಡ್ ನಟ ರಿತೇಶ್ ದೇಶ್​ಮುಖ್ ನಿರೂಪಣೆ ಮಾಡುತ್ತಿದ್ದಾರೆ. ಮರಾಠಿ ಬಿಗ್​ಬಾಸ್ ಈಗಾಗಲೇ ಪ್ರಾರಂಭವಾಗಿ ಒಂದು ತಿಂಗಳಾಗಿದೆ. ಇದರ ನಡುವೆ ಕೆಲವೇ ದಿನಗಳಲ್ಲಿ ಪ್ರಾರಂಭವಾಗಬೇಕಿದ್ದ ಬಿಗ್​ಬಾಸ್ ಶೋ ಒಂದರ ಸೆಟ್​ನಲ್ಲಿ ಭಾರಿ ಅವಘಡ ಸಂಭವಿಸಿದೆ.

ತಮಿಳು ಬಿಗ್​ಬಾಸ್​ ಸೀಸನ್ 8 ಹೊಸ ನಿರೂಪಕರ ಸಾರಥ್ಯದಲ್ಲಿ ಪ್ರಾರಂಭವಾಗಲು ಸಜ್ಜಾಗಿದೆ. ಶೋಗೆ ಸೆಟ್​ ತಯಾರಿ ನಡೆಯುತ್ತಿದೆ. ಆದರೆ ಈ ಹಂತದಲ್ಲಿ ಸೆಟ್​ನಲ್ಲಿ ಅವಘಡ ಸಂಭವಿಸಿದ್ದು, ಒಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಸೆಟ್​ ನಿರ್ಮಾಣ ಕಾರ್ಯಕ್ಕೆ ಉತ್ತರ ಪ್ರದೇಶದಿಂದ ಬಂದಿದ್ದ ಮೊಹಮ್ಮದ್ ಶಹೀನ್ ಖಾನ್ ಎಂಬಾತ ಸೆಟ್​ ನಿರ್ಮಾಣದ ವೇಳೆ 20 ಅಡಿ ಮೇಲಿನಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ.

ಕೆಲ ತಮಿಳು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿರುವಂತೆ ಕೆಳಗೆ ಬಿದ್ದ ವ್ಯಕ್ತಿಗೆ ಕೆಲ ಗಂಭೀರ ಗಾಯಗಳಾಗಿದ್ದು ವ್ಯಕ್ತಿಯ ಭುಜ ಹಾಗೂ ಪುಷ್ಠದ ಭಾಗದ ಮೂಳೆಗಳು ಪೂರ್ಣವಾಗಿ ಮುರಿದಿವೆ ಎನ್ನಲಾಗುತ್ತಿದೆ. ವ್ಯಕ್ತಿಯನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದ್ದು, ಐಸಿಯು ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಈ ಬಗ್ಗೆ ಬಿಗ್​ಬಾಸ್ ಆಯೋಜಕರು ಅಧಿಕೃತ ಹೇಳಿಕೆಯನ್ನು ಇನ್ನಷ್ಟೆ ನೀಡಬೇಕಿದೆ.

ಇದನ್ನೂ ಓದಿ:ಈ ಬಾರಿ ಬಿಗ್​ಬಾಸ್ ಮನೆಗೆ ಹೋಗುವವರು ಯಾರು? ಇಲ್ಲಿದೆ ಸಂಭಾವ್ಯ ಪಟ್ಟಿ

ತಮಿಳು ಬಿಗ್​ಬಾಸ್ ಸೀಸನ್ 8 ಅಕ್ಟೋಬರ್ 6 ರಂದು ಪ್ರಾರಂಭವಾಗಲಿದೆ. ಕಳೆದ ಹಲವು ಸೀಸನ್​ಗಳನ್ನು ನಟ ಕಮಲ್ ಹಾಸನ್ ನಿರೂಪಣೆ ಮಾಡಿದ್ದರು. ಆದರೆ ಈಗ ನಟ ವಿಜಯ್ ಸೇತುಪತಿ ಬಿಗ್​ಬಾಸ್ ಸೀಸನ್ 8ನ್ನು ನಿರೂಪಣೆ ಮಾಡಲಿದ್ದಾರೆ. ಹಾಗಾಗಿ ಹೊಸ ರೀತಿಯಲ್ಲಿ ಭಿನ್ನವಾಗಿ ಸೆಟ್​ ಅನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗ ಬಿಡುಗಡೆ ಮಾಡಿರುವ ಪ್ರೋಮೋ ಪ್ರಕಾರ, ಈ ಬಾರಿಯ ತಮಿಳು ಬಿಗ್​ಬಾಸ್​ನ ಥೀಮ್ ಭಿನ್ನವಾಗಿರಲಿದೆ. ‘ಆಟಂ ಪುದುಸು, ರೂಲುಂ ಪುದುಸು’ (ಆಟವೂ ಹೊಸತು, ನಿಯಮಗಳೂ ಹೊಸತು) ಎಂಬ ಥೀಮ್ ಸಾಲನ್ನು ಈ ಬಾರಿಯ ಸೀಸನ್​ಗೆ ನೀಡಲಾಗಿದೆ. ಕೆಲ ಜನಪ್ರಿಯ ವ್ಯಕ್ತಿಗಳು, ಕೆಲ ವಿವಾದಾತ್ಮಕ ವ್ಯಕ್ತಿಗಳು, ಕೆಲವು ರಾಜಕಾರಣಿಗಳು ಸಹ ಈ ಬಾರಿ ಬಿಗ್​ಬಾಸ್​ ತಮಿಳಿನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ದೆಹಲಿಯಲ್ಲಿ ಭಾರಿ ಮಳೆಯಿಂದ ಕಟ್ಟಡ ಕುಸಿತ; ಓರ್ವ ಸಾವು
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಇಂಡೋನೇಷ್ಯಾ ಪ್ರವಾಸ ಮುಗಿಸಿ ಮೆಲ್ಬೋರ್ನ್‌ಗೆ ಬಂದಿಳಿದ ಪ್ರಧಾನಿ ಮೋದಿ
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್​ನ್ಯೂಸ್​​: ಶೀಘ್ರದಲ್ಲೇ ಇಂದಿರಾ ಕಿಟ್
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಏಷ್ಯಾಕಪ್ ಟ್ರೋಫಿ ಟೀಂ ಇಂಡಿಯಾ ಕೈ ಸೇರುವುದು ಯಾವಾಗ?
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕೆತ್ತಿಕಲ್‌ ಗುಡ್ಡ ಕುಸಿತಕ್ಕೆ ಸ್ಫೋಟಕ ಕಾರಣ ಬಿಚ್ಚಿಟ್ಟ ಪರಿಸರ ತಜ್ಞ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
ಕನ್ನಡಿಗರ ಬಗ್ಗೆ ಪ್ರೀತಿಯಿಂದ ಮಾತನಾಡಿ ‘ಟಾಕ್ಸಿಕ್’ ನಟಿ ಹುಮಾ ಖುರೇಷಿ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
2 ದಿನ ಕೆರೆಯಲ್ಲಿ ನರಳಾಡಿ ತನ್ನಷ್ಟಕ್ಕೇ ತಾನೆ ಆಚೆ ಬಂದ ಆನೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಮತ್ತೊಂದು ಕಲ್ಲು ಗಣಿಗಾರಿಕೆ ದುರಂತ: ಜೆಸಿಬಿ ಮೇಲೆ ಬಿದ್ದ ಬಂಡೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಸಿದ್ದರಾಮಯ್ಯನವರಿಂದ ದೂರ: ವಿಡಿಯೋ ವೈರಲ್ ಬಗ್ಗೆ ಜಾರಕಿಹೊಳಿ ಸ್ಪಷ್ಟನೆ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ
ಜಿಬಿಎ ನಿರ್ಲಕ್ಷ್ಯ: ಹೊಂಡದಲ್ಲಿ ಕಾರಿನ ಚಕ್ರ ಸಿಲುಕಿ ಚಾಲಕನ ಪರದಾಟ