AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಬಿಸಿ16 ಗೆದ್ದು ಕೋಟ್ಯಧಿಪತಿಯಾದ ಚಂದರ್, ಕೊನೆ ಪ್ರಶ್ನೆ ಏನಾಗಿತ್ತು?

ಕೌನ್ ಬನೇಗಾ ಕರೋಡ್​ಪತಿಯ 16ನೇ ಸೀಸನ್ ಚಾಲ್ತಿಯಲ್ಲಿದ್ದು, ಈ ಸೀಸನ್​ನ ಮೊದಲ ಕೋಟ್ಯಧಿಪತಿ ಆಗಿದ್ದಾರೆ ಜಮ್ಮು-ಕಾಶ್ಮೀರದ ಚಂದೇರ್ ಪ್ರಕಾಶ್. ಅಂದಹಾಗೆ 1 ಕೋಟಿ ಗೆಲ್ಲಲು ಕೇಳಲಾದ ಪ್ರಶ್ನೆ ಯಾವುದು? ಉತ್ತರ ನಿಮಗೆ ಗೊತ್ತಿದೆಯೇ?

ಕೆಬಿಸಿ16 ಗೆದ್ದು ಕೋಟ್ಯಧಿಪತಿಯಾದ ಚಂದರ್, ಕೊನೆ ಪ್ರಶ್ನೆ ಏನಾಗಿತ್ತು?
ಕೌನ್ ಬನೇಗಾ ಕರೋಡ್​ಪತಿ
ಮಂಜುನಾಥ ಸಿ.
|

Updated on: Sep 26, 2024 | 12:59 PM

Share

ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್​ಪತಿ ಭಾರತದ ಅತ್ಯಂತ ಜನಪ್ರಿಯ ಕಿರುತೆರೆ ಶೋಗಳಲ್ಲಿ ಒಂದು. 2000 ರ ಜುಲೈ ನಲ್ಲಿ ಪ್ರಾರಂಭವಾದ ಈ ಶೋ ಈವರೆಗೆ ನಡೆದುಕೊಂಡು ಬರುತ್ತಿದೆ. ಒಂದು ಸೀಸನ್​ನಲ್ಲಿ ಶಾರುಖ್ ಖಾನ್ ಈ ಶೋ ನ ನಿರೂಪಣೆ ಮಾಡಿದ್ದರು. ಅದರ ಹೊರತಾಗಿ ಆಗಿನಿಂದ ಈಗಿನವರೆಗೂ ಅಮಿತಾಬ್ ಬಚ್ಚನ್ ಅವರೇ ನಿರೂಪಕರಾಗಿದ್ದಾರೆ. ಕೆಲವು ಬಾರಿ ಮಾತ್ರವೇ ಅತಿಥಿ ನಿರೂಪಕರು ಬಂದು ಹೋಗಿದ್ದಾರೆ. ಇದೀಗ ಕೆಬಿಸಿ 16ನೇ ಸೀಸನ್ ನಡೆಯುತ್ತಿದ್ದು, ಆಗಸ್ಟ್ 12 ರಂದು ಆರಂಭವಾದ ಈ ಶೋನಲ್ಲಿ ಇದೀಗ ಮೊದಲ ಕೋಟ್ಯಧಿಪತಿ ಆಗಿದ್ದಾರೆ ಜಮ್ಮು ಕಾಶ್ಮೀರದ ಚಂದೇರ್ ಪ್ರಕಾಶ್.

ಅದ್ಭುತವಾಗಿ ಆಡಿದ್ದ ಚಂದೇರ್ ಪರ್ಕಾಶ್ ಕೋಟಿ ಪ್ರಶ್ನೆಗೆ ತಲುಪಿದ್ದರು, ಇದೀಗ ಅವರು ಒಂದು ಕೋಟಿ ಹಣವನ್ನೂ ಗೆದ್ದಿದ್ದು, ಅದರ ಪ್ರೋಮೋವನ್ನು ಸೋನಿ ವಾಹಿನಿ ಹಂಚಿಕೊಂಡಿದೆ. ಆದರೆ ಶೋ ಇನ್ನೂ ಪ್ರಸಾರವಾಗಿಲ್ಲ. ಆದರೆ ಚಂದೇರ್, ಗೆ ಕೇಳಲಾಗಿದ್ದ ಒಂದು ಕೋಟಿಯ ಪ್ರಶ್ನೆ ಯಾವುದು ಎಂಬುದು ಈಗ ಬಿಡುಗಡೆ ಆಗಿರುವ ಪ್ರೋಮೊನಲ್ಲಿ ಕಾಣುತ್ತಿದೆ. ಅಂದಹಾಗೆ ಚಂದೇರ್​ಗೆ ಕೋಟಿ ಗೆಲ್ಲಿಸಿಕೊಟ್ಟ ಪ್ರಶ್ನೆ ಯಾವುದು? ನಿಮಗೆ ಇದರ ಸರಿ ಉತ್ತರ ಗೊತ್ತೆ?

ಇದನ್ನೂ ಓದಿ:ಕಚೇರಿ ಬಾಡಿಗೆಗೆ ನೀಡಿದ ಅಮಿತಾಬ್ ಬಚ್ಚನ್, ತಿಂಗಳ ಬಾಡಿಗೆ ಎಷ್ಟು ಗೊತ್ತೆ?

ಒಂದು ಕೋಟಿಗೆ ಅಮಿತಾಬ್ ಬಚ್ಚನ್ ಕಠಿಣವಾದ ಪ್ರಶ್ನೆಯನ್ನೇ ಚಂದೇರ್​ಗೆ ಕೇಳಿದ್ದರು. ‘ಒಂದು ದೇಶದ ದೊಡ್ಡ ನಗರ ಇದು, ಆದರೆ ಈ ನಗರ ಆ ದೇಶದ ರಾಜಧಾನಿ ಅಲ್ಲ, ಆದರೆ ಇದರ ಬಂದರಿಗೆ ಉರ್ದು ಹೆಸರಿದೆ, ಆ ಹೆಸರಿನ ಅರ್ಥ ಶಾಂತಿಯ ನಿರ್ಮಾಣ ಎಂದಾಗಿದೆ. ಯಾವುದು ಆ ನಗರ’ ಎಂಬುದು ಅಮಿತಾಬ್ ಬಚ್ಚನ್ ಕೇಳಿದ ಪ್ರಶ್ನೆಯಾಗಿತ್ತು. ಪ್ರಶ್ನೆಗೆ ನಾಲ್ಕು ಆಯ್ಕೆಗಳನ್ನು ಸಹ ಬಚ್ಚನ್ ನೀಡಿದ್ದರು. ಓಮನ್, ಸೊಮಾಲಿಯಾ, ತಂಜಾನಿಯಾ ಮತ್ತು ಬ್ರೂನೈ. ಈ ಪ್ರಶ್ನೆಗೆ ಡಬಲ್ ಫ್ಲಿಪ್ಪರ್ ಲೈಫ್​ ಲೈನ್ ಆಯ್ಕೆ ಆರಿಸಿದ ಚಂದೇರ್ ಮೊದಲು ನೀಡಿದ ಉತ್ತರವೇ ಸರಿಯಾಗಿತ್ತು. ಚಂದೇರ್ ‘ತಂಜಾನಿಯಾ’ ಅನ್ನು ಆರಿಸಿದರು ಅದೇ ಸರಿ ಉತ್ತರ ಆಗಿತ್ತು.

ಅಮಿತಾಬ್ ಬಚ್ಚನ್, ‘ಒಂದು ಕೋಟಿ’ ಎಂದು ಜೋರಾಗಿ ಕೂಗುತ್ತಾ ಸಂಭ್ರಮಿಸಿದರು. ಆದರೆ ಚಂದೇರ್ ಶಾಂತ ಚಿತ್ತವಾಗಿಯೇ ಇದ್ದರು. ಕೋಟಿ ಗೆದ್ದೊಡನೆ ಅಮಿತಾಬ್ ಬಚ್ಚನ್​ ಕಾಲಿಗೆ ನಮಸ್ಕರಿಸಿದರು. ಬಚ್ಚನ್ ಚಂದೇರ್ ಅವರನ್ನು ಆಲಂಗಿಸಿಕೊಟ್ಟರು. ಬಳಿಕ ಅವರಿಗೆ ಒಂದು ಕೋಟಿ ರೂಪಾಯಿಯ ಚೆಕ್ ಕೊಟ್ಟರು. ನಂತರ ಹುಂಡೈನ ವೆನ್ಯು ಕಾರನ್ನು ಸಹ ನೀಡಿದರು. ಬಳಿಕ ಏಳು ಕೋಟಿ ಪ್ರಶ್ನೆಯನ್ನು ಕೇಳಲಾಗಿದೆ. ವಿಶೇಷವೆಂದರೆ ಅದಕ್ಕೂ ಚಂದೇರ್​ಗೆ ಉತ್ತರ ಗೊತ್ತಿತ್ತು, ಆದರೆ ಅವರು ಆಟದಿಂದ ನಿವೃತ್ತಿ ಹೊಂದಿ 1 ಕೋಟಿಯನ್ನಷ್ಟೆ ಸ್ವೀಕರಿಸಿದರು. ಒಟ್ಟಾರೆ ಚಂದೇರ್ ಅದ್ಭುತವಾಗಿ ಆಡಿ ಈ ಸೀಸನ್​ನ ಮೊಟ್ಟ ಮೊದಲ ಕೋಟ್ಯಧಿಪತಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ