ಕನ್ನಡದ ಬಿಗ್ ಬಾಸ್​ನಲ್ಲಿ ಸ್ವರ್ಗ-ನರಕ; ಹಿಂದಿಯಲ್ಲಿ ಏನು ಥೀಮ್? ಸುಳಿವು ಕೊಟ್ಟ ಸಲ್ಲು

‘ಬಿಗ್​ ಬಾಸ್ 18’ ಕಾರ್ಯಕ್ರಮ ಅಕ್ಟೋಬರ್ 6ರಂದು ಶುರುವಾಗಲಿದೆ. ಅದರ ಥೀಮ್​ ಬಗ್ಗೆ ಸುಳಿವು ನೀಡಲು ಹೊಸ ಪ್ರೋಮೋ ರಿಲೀಸ್ ಮಾಡಲಾಗಿದೆ. ಸಲ್ಮಾನ್​ ಖಾನ್​ ಅವರು ಸಮಯದ ಬಗ್ಗೆ ಮಾತನಾಡಿದ್ದಾರೆ. ಇತ್ತ, ಕನ್ನಡದಲ್ಲಿ ಕಿಚ್ಚ ಸುದೀಪ್​ ಅವರು ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್​ ಬಗ್ಗೆ ಕಿರು ಪರಿಚಯ ಮಾಡಿಕೊಟ್ಟಿದ್ದಾರೆ. ವೀಕ್ಷಕರಲ್ಲಿ ಕ್ರೇಜ್​ ಹೆಚ್ಚಿದೆ.

ಕನ್ನಡದ ಬಿಗ್ ಬಾಸ್​ನಲ್ಲಿ ಸ್ವರ್ಗ-ನರಕ; ಹಿಂದಿಯಲ್ಲಿ ಏನು ಥೀಮ್? ಸುಳಿವು ಕೊಟ್ಟ ಸಲ್ಲು
ಸಲ್ಮಾನ್​ ಖಾನ್​
Follow us
ಮದನ್​ ಕುಮಾರ್​
|

Updated on: Sep 25, 2024 | 10:26 PM

ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಆರಂಭ ಆಗಲಿದೆ. ಅದಕ್ಕಾಗಿ ಸಕಲ ತಯಾರಿ ನಡೆದಿದೆ. ಕಿಚ್ಚ ಸುದೀಪ್​ ಅವರು ಎಂದಿನ ಉತ್ಸಾಹದಲ್ಲಿ ನಿರೂಪಣೆ ಮಾಡಲು ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಹೊಸ ಪ್ರೋಮೋ ಬಿಡುಗಡೆ ಮಾಡಲಾಯಿತು. ಅದರಲ್ಲಿ ಈ ಬಾರಿಯ ಥೀಮ್​ ಏನು ಎಂಬುದನ್ನು ತಿಳಿಸಲಾಯಿತು. ಸ್ವರ್ಗ ಮತ್ತು ನರಕ ಎಂಬ ಥೀಮ್​ನೊಂದಿಗೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋ ಶುರುವಾಗಲಿದೆ. ಹಾಗಾಗಿ ಆರಂಭದಿಂದಲೇ ಫೈಟ್​ ಇರಲಿದೆ ಎಂಬುದು ಖಚಿತ. ಅದೇ ರೀತಿ ಹಿಂದಿ ಬಿಗ್​ ಬಾಸ್​ನಲ್ಲಿ ಈ ವರ್ಷದ ಥೀಮ್​ ಏನು ಎಂಬ ಬಗ್ಗೆ ಸಲ್ಮಾನ್​ ಖಾನ್​ ಸುಳಿವು ನೀಡಿದ್ದಾರೆ.

ಹಿಂದಿಯಲ್ಲಿ ಈವರೆಗೂ 17 ಸೀಸನ್​ಗಳು ಯಶಸ್ವಿಯಾಗಿ ನಡೆದಿವೆ. 18ನೇ ಸೀಸನ್​ ರಂಗೇರಲಿದೆ. ಬೇರೆ ಭಾಷೆಯ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಹೋಲಿಸಿದರೆ ಹಿಂದಿ ಬಿಗ್​ ಬಾಸ್​ ಯಾವಾಗಲೂ ಕೊಂಚ ಜಾಸ್ತಿ ಖಡಕ್​ ಆಗಿರುತ್ತದೆ. ಅಲ್ಲಿ ಕಾಂಟ್ರವರ್ಸಿಗಳು ಹೆಚ್ಚಾಗಿ ಇರುತ್ತದೆ. ಅದರ ಬಜೆಟ್​ ಕೂಡ ಭರ್ಜರಿಯಾಗಿರುತ್ತದೆ. ಈ ಬಾರಿ ಟೈಮ್​ ಎಂಬ ಕಾನ್ಸೆಪ್ಟ್​ನೊಂದಿಗೆ ಶೋ ಆರಂಭ ಆಗಲಿದೆ.

ಇದನ್ನೂ ಓದಿ: ‘ಬಿಗ್​ ಬಾಸ್​ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್​ ಉತ್ತರ ಏನು?

ಹೊಸ ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ಅವರು ಸಮಯದ ತಾಂಡವದ ಬಗ್ಗೆ ಮಾತನಾಡಿದ್ದಾರೆ. ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಬಿಗ್​ ಬಾಸ್​ ಕಣ್ಣಿನಲ್ಲಿ ಕಾಣುತ್ತದೆ ಎನ್ನಲಾಗಿದೆ. ಈ ವರ್ಷ ಸ್ಪರ್ಧಿಗಳ ಭವಿಷ್ಯವನ್ನು ಬಿಗ್​ ಬಾಸ್​ ಬಹಿರಂಗಪಡಿಸುತ್ತದೆ. ಯಾರ ಭವಿಷ್ಯವನ್ನು ಯಾರು ಬದಲಿಸಲಿದ್ದಾರೆ ಎಂಬ ಪ್ರಶ್ನೆಯನ್ನು ಕೂಡ ಹೊಸ ಪ್ರೋಮೋದಲ್ಲಿ ಕೇಳಲಾಗಿದೆ. ಈ ಎಲ್ಲ ಕಾರಣದಿಂದ ‘ಬಿಗ್​ ಬಾಸ್​ 18’ ಶೋ ಬಗ್ಗೆ ಕೌತುಕ ಹೆಚ್ಚಾಗಿದೆ.

View this post on Instagram

A post shared by ColorsTV (@colorstv)

ಹಲವು ವರ್ಷಗಳಿಂದ ಸಲ್ಮಾನ್​ ಖಾನ್​ ಅವರು ಬಿಗ್​ ಬಾಸ್​ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸ್ಪರ್ಧಿಗಳು ತಪ್ಪು ಮಾಡಿದರೆ ಅವರು ಖಡಕ್​ ಆಗಿ ಎಚ್ಚರಿಕೆ ನೀಡುತ್ತಾರೆ. ಯಾರಾದರೂ ಮಿತಿ ಮೀರಿ ನಡೆದುಕೊಂಡರೆ ಅವರನ್ನು ಮನೆಯಿಂದ ಹೊರಗೆ ಕಳಿಸುತ್ತಾರೆ. ಈ ಬಾರಿ ಅವರು ಇನ್ನಷ್ಟು ಖಡಕ್​ ಆಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಲ್ಮಾನ್​ ಖಾನ್​ ಅವರು ಈ ಶೋ ನಿರೂಪಣೆಗೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈ ಬಾರಿ ಕನ್ನಡ, ತೆಲುಗು ಮುಂತಾದ ಭಾಷೆಗಳಲ್ಲಿ ಕೂಡ ಬಿಗ್​ ಬಾಸ್​ ಏಕಕಾಲಕ್ಕೆ ಪ್ರಸಾರ ಆಗಲಿದೆ. ಹಾಗಾಗಿ ಕ್ರೇಜ್​ ಜಾಸ್ತಿ ಇರುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ