‘ಬಿಗ್​ ಬಾಸ್​ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್​ ಉತ್ತರ ಏನು?

‘ಬಿಗ್​ ಬಾಸ್​ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್​ ಉತ್ತರ ಏನು?

ಮದನ್​ ಕುಮಾರ್​
|

Updated on: Sep 23, 2024 | 10:45 PM

ಕಿಚ್ಚ ಸುದೀಪ್​ ಅವರು ಸತತ 11ನೇ ಸೀಸನ್​ನಲ್ಲಿ ಬಿಗ್​ ಬಾಸ್​ ಕನ್ನಡ ಶೋ ನಿರೂಪಣೆ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಅವರಿಗೆ ಎಷ್ಟು ಸಂಭಾವನೆ ಸಿಕ್ಕಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ಈ ಬಾರಿ ಕೂಡ ಆ ಪ್ರಶ್ನೆ ಮಿಸ್​ ಆಗಿಲ್ಲ. ಅದಕ್ಕೆ ಸುದೀಪ್​ ಅವರು ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಸುದ್ದಿಗೋಷ್ಠಿಯ ವಿಡಿಯೋ ಇಲ್ಲಿದೆ..

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಸೀಸನ್​ ಬಗ್ಗೆ ಮಾಹಿತಿ ನೀಡಲು ಇಂದು (ಸೆ.23) ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ಬಾರಿ ನಿಮ್ಮ ಸಂಭಾವನೆ ಎಷ್ಟು ಎಂದು ಕೇಳಿದಕ್ಕೆ ಸುದೀಪ್​ ಈ ರೀತಿ ಉತ್ತರ ನೀಡಿದ್ದಾರೆ. ‘ನನ್ನ ತಟ್ಟೆ ಇಷ್ಟು ಅಗಲ ಇದೆಯೋ ಅಷ್ಟೇ ನಾನು ಊಟ ಮಾಡೋದು. ನನ್ನ ಯೋಗ್ಯತೆ ಎಷ್ಟು ಇದೆಯೋ ಅಷ್ಟೇ ದುಡಿಯೋದು. ಇದು ಹೊಸ ಅಧ್ಯಾಯ. ಎಲ್ಲದಕ್ಕೂ ಒಂದು ಮಾರ್ಕೆಟ್​ ಇರುತ್ತದೆ. ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು’ ಎಂದು ಸುದೀಪ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.