Kavyashree Gowda: ಹತ್ತನೇ ವಾರಕ್ಕೆ ಆಟ ಮುಗಿಸಿ ಬಿಗ್ ಬಾಸ್ ಮನೆಯಿಂದ ಹೊರ ನಡೆದ ಕಿರುತೆರೆ ನಟಿ ಕಾವ್ಯಶ್ರೀ ಗೌಡ
17ನೇ ಸ್ಪರ್ಧಿಯಾಗಿ 'ಬಿಗ್ ಬಾಸ್ ಸೀಸನ್ 9ಗೆ ಪ್ರವೇಶಿಸಿದ್ದ ಕಿರುತೆರೆ ನಟಿ ಕಾವ್ಯಶ್ರೀ ಗೌಡ 10ನೇ ವಾರಕ್ಕೆ ದೊಡ್ಮನೆ ಜರ್ನಿ ಮುಗಿಸಿ ಹೊರನಡೆದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಅತೀ ದೊಡ್ಡ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 9’ (Bigg Boss Kannada Season 9) ಸದ್ಯ ಒಂಭತ್ತು ವಾರಗಳನ್ನು ಪೂರೈಸಿ ಹತ್ತನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿಯ ‘ಬಿಗ್ ಬಾಸ್ ಸೀಸನ್ 9’ ಹಲವು ವಿಶೇಷತೆಗಳಿಂದ ಕೂಡಿದೆ. ನಮಗೆ ತಿಳಿದಿರುವ ಹಾಗೆ ದೊಡ್ಮನೆಗೆ ಪ್ರತಿ ಸೀಸನ್ನಲ್ಲಿ ಹೊಸ ಸ್ಪರ್ಧಿಗಳು ಕಾಣಸಿಗುತ್ತಾರೆ. ಆದರೆ ಈ ಬಾರಿಯ ಸೀಸನ್ನಲ್ಲಿ ಅದು ಉಲ್ಟಾ ಆಗಿದೆ. ಪ್ರವೀಣರು ಮತ್ತು ನವೀನರು ಎಂಬ ಕಾನ್ಸೆಪ್ಟ್ ಮೂಲಕ ಜನರೆದುರು ಬಂದಿದೆ. ಅಷ್ಟೇ ಅಲ್ಲದೇ ಓಟಿಟಿಗೂ ಬಿಗ್ ಬಾಸ್ ಶೋ ಕಾಲಿಟ್ಟು ಎಲ್ಲರ ಗಮನ ಸೆಳೆದಿತ್ತು. ಸದ್ಯ ಹತ್ತನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಮನೆಯಿಂದ ಯಾರು ಹೊರ ನಡೆಯಲಿದ್ದಾರೆ ಎಂಬ ಕುತೂಹಲ ಉಂಟಾಗಿದೆ. ಕಳೆದ ವಾರ ದೊಡ್ಮನೆಯಿಂದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ವಿನೋದ್ ಗೊಬ್ಬರಗಾಲ ಮನೆಯಿಂದ ಔಟ್ ಆಗಿದ್ದರು. ಈ ವಾರ ಬಿಗ್ ಬಾಸ್ ಮನೆಯಿಂದ ಕಿರುತೆರೆ ನಟಿ ಕಾವ್ಯಶ್ರೀ ಗೌಡ ಎಲಿಮಿನೇಟ್ ಆಗಿದ್ದಾರೆ.
View this post on Instagram
ಇದನ್ನೂ ಓದಿ: ‘ನೀವು ಶಿವನ ಕತ್ತಿನಲ್ಲಿರುವ ನಾಗರಹಾವು’; ಆರ್ಯವರ್ಧನ್ ಸ್ಪಷ್ಟನೆ ಕೇಳಿ ದಂಗಾದ ರೂಪೇಶ್ ರಾಜಣ್ಣ
ನಟ ಕಿಚ್ಚ ಸುದೀಪ್ ಅವರು ಪ್ರತಿ ವೀಕೆಂಡ್ನಲ್ಲಿ ಬಂದು ರಾಜಿ ಪಂಚಾಯಿತಿ ಮಾಡುತ್ತಾರೆ. ಈ ವೇಳೆ ಅವರು ಅನೇಕರ ಕಾಲೆಳೆಯುತ್ತಾರೆ. ಜೊತೆಗೆ ಕೆಲವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಅದು ಈ ವಾರವೂ ಮುಂದುವರೆದಿದೆ. ‘ಬಿಗ್ ಬಾಸ್ ಮನೆಯಲ್ಲಿ ಏನಾದರೂ ಒಂದು ನಡೆಯಬೇಕು ಎಂದರೆ ಅದು ಏನು?’ ಎಂದು ಪ್ರಶ್ನೆ ಮಾಡಿದ್ದಾರೆ ಸುದೀಪ್. ಇದಕ್ಕೆ ಉತ್ತರಿಸಿದ ಕವ್ಯಾಶ್ರೀ ಗೌಡ ಅವರು ‘ಇಲ್ಲಿ ಲವ್ ಸ್ಟೋರಿ ಕೇಳಿ ಬೇಸರವಾಗಿದೆ. ವೈಲ್ಡ್ ಕಾರ್ಡ್ನಲ್ಲಿ ಒಂದು ಹ್ಯಾಂಡ್ಸಮ್ ಹುಡುಗನ ಕಳುಹಿಸಿ’ ಎಂದಿದ್ದರು. ‘ನನ್ನನ್ನ ಯಾವ ವ್ಯಾಪಾರಕ್ಕೆ ಇಳಿಸ್ತಾ ಇದೀರಾ’ ಎಂದು ಸುದೀಪ್ ನಕ್ಕರು. ಕಾವ್ಯಶ್ರೀ ಗೌಡ ಅವರು ಬಿಗ್ ಬಾಸ್ನಲ್ಲಿ ಅಷ್ಟಾಗಿ ಗಮನ ಸೆಳೆಯುತ್ತಿಲ್ಲ. ಆದರೂ ಅವರು ಪ್ರತಿ ವಾರ ಸೇವ್ ಆಗುತ್ತ ಬಂದಿದ್ದರು.
ಇದನ್ನೂ ಓದಿ: ಮನೆ ಮಂದಿಯನ್ನೆಲ್ಲ ಸೋಂಬೇರಿ ಎಂದು ಜರಿಯುವ ಆರ್ಯವರ್ಧನ್ಗೆ ಸುದೀಪ್ ಸಖತ್ ಕ್ಲಾಸ್
‘ಮಂಗಳಗೌರಿ’ ಧಾರಾವಾಹಿಯ ಮೂಲಕ ಕಾವ್ಯಶ್ರೀ ಗೌಡ ಕಿರುತೆರೆಗೆ ಎಂಟ್ರಿ ನೀಡಿದ್ದರು. ಕೆಲವೆ ದಿನಗಳಲ್ಲಿ ತಮ್ಮ ನಟನೆಯಿಂದ ಮನೆಮಾತಾದರು. ಬಳಿಕ ‘ಬಿಗ್ ಬಾಸ್ ಸೀಸನ್ 9’ಗೆ ನವೀನರ ಪೈಕಿ ಹೋದವರಲ್ಲಿ ಇವರು ಒಬ್ಬರು. ಮೊದಮೊದಲು ಸ್ಟ್ರಾಂಗ್ ಕಂಟೆಸ್ಟಂಟ್ ಎಂದೆನಿಸಿಕೊಂಡ ಕಾವ್ಯಶ್ರೀ ಬಳಿಕ ಡಲ್ ಹೊಡೆದರು. ಟಾಸ್ಕ್ಗಳಲ್ಲಿಯೂ ಅವರ ಪಾತ್ರ ಅಷ್ಟೇನು ಕಾಣಿಸಲಿಲ್ಲ. ಹೀಗಾಗಿ ಜನರ ವೋಟ್ ಕೂಡ ಕಡಿಮೆ ಬಂದಿದೆ ಎನ್ನಲಾಗುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ಕಾವ್ಯಶ್ರೀ ಗೌಡ ‘ಬಿಗ್ ಬಾಸ್ ಸೀಸನ್ 9’ನಿಂದ ಹೊರ ನಡೆದಿದ್ದಾರೆ.
ಮತ್ತಷ್ಟು ಬಿಗ್ ಬಾಸ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:57 pm, Sun, 4 December 22