Honganasu: ಕೊನೆಗೂ ವಸುಧರಾಳನ್ನು ಎಕ್ಸಾಮ್‌ಗೆ ಕರ್ಕೊಂಡು ಹೋದ ರಿಷಿ; ಸಾಕ್ಷಿ ಕಣ್ಣಿಗೆ ಬೀಳ್ತಾರಾ?

Honganasu Serial Update: ವಸುಧರಾ ಎಕ್ಸಾಮ್ ಬರೆಯುವುದನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದು ಯೋಚಿಸುತ್ತಿದ್ದಳು ದೇವಯಾನಿ. ಸಾಕ್ಷಿಯನ್ನು ಬಳಸಿಕೊಂಡು ತನ್ನ ಪ್ಲಾನ್ ವರ್ಕೌಟ್ ಮಾಡಿಕೊಳ್ಳಲು ಆಕೆ ಮುಂದಾದಳು.

Honganasu: ಕೊನೆಗೂ ವಸುಧರಾಳನ್ನು ಎಕ್ಸಾಮ್‌ಗೆ ಕರ್ಕೊಂಡು ಹೋದ ರಿಷಿ; ಸಾಕ್ಷಿ ಕಣ್ಣಿಗೆ ಬೀಳ್ತಾರಾ?
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 04, 2022 | 1:03 PM

ಧಾರಾವಾಹಿ: ಹೊಂಗನಸು

ಪ್ರಸಾರ: ಸ್ಟಾರ್ ಸುವರ್ಣ

ಸಮಯ: ಮಧ್ಯಾಹ್ನ 1.30

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ನಿರ್ದೇಶನ: ಅನಿಲ್ ಆನಂದ್, ಕುಮಾರ್

ಪಾತ್ರವರ್ಗ: ರಕ್ಷಾ ಗೌಡ, ಮುಖೇಶ್ ಗೌಡ, ಜ್ಯೋತಿ ರೈ, ಸಾಯಿ ಕಿರಣ್ ಹಾಗೂ ಇತರರು

ಹಿಂದಿನ ಸಂಚಿಕೆಯಲ್ಲಿ ಏನಾಗಿತ್ತು?

ವಸುಧರಾ ಸ್ಕಾಲರ್‌ಶಿಪ್ ಎಕ್ಸಾಮ್ ಬರೆಯಲು ಹೊರಟಿದ್ದಾಳೆ. ಆದರೆ ‘ನಾನು ನಿನ್ನ ಜೊತೆ ಬರಲ್ಲ’ ಎಂದು ಖಡಕ್ ಆಗಿ ವಸುಗೆ ಹೇಳಿದ ರಿಷಿ. ರಿಷಿ ಸರ್ ಬರಲ್ಲ ಎಂದು ಕಣ್ಣೀರಿಡುತ್ತಿದ್ದ ವಸುಧರಾಳಿಗೆ ಧೈರ್ಯ ತುಂಬಿದಳು ಜಗತಿ. ‘ರಿಷಿ ಬಂದಿಲ್ಲ ಅಂದ್ರೆ ಏನಂತೆ ನೀನು ಎಕ್ಸಾಮ್ ಬರೆದು ರ‍್ಯಾಂಕ್ ಪಡೆಯಬೇಕು’ ಎಂದು ಹೇಳಿದಳು.

ರಿಷಿ ಬರದಿದ್ದರೆ ಎಕ್ಸಾಮ್ ಬರೆಯಲ್ಲ ಎಂದು ಹಠ ಹಿಡಿದಳು ವಸುಧರಾ. ಜಗತಿ ಮತ್ತು ಮಹೇಂದ್ರ ಇಬ್ಬರೂ ವಸುಧರಾಳನ್ನು ಸಮಾಧಾನ ಮಾಡಿ ಎಕ್ಸಾಮ್ ಬರೆಯುವಂತೆ ಒತ್ತಾಯ ಮಾಡಿದರು. ಎಕ್ಸಾಮ್‌ಗೆ ಹೊರಟ ವಸುಧರಾಳಿಗೆ ಆಲ್ ದಿ ಬೆಸ್ಟ್ ಕೂಡ ಹೇಳದೆ ಕಾಲೇಜಿನಿಂದ ಹೊರಟ ರಿಷಿ. ವಸು ಫೋನ್ ಮಾಡಿದರೂ ಫೋನ್ ರಿಸೀವ್ ಮಾಡುವುದಿಲ್ಲ ರಿಷಿ. ಬೇಸರದಲ್ಲೇ ಎಕ್ಸಾಮ್‌ಗೆ ಹೊರಟಳು ವಸು. ಜಗತಿ ಮತ್ತು ಮಹೇಂದ್ರ ಇಬ್ಬರೂ ವಸುಧರಾಳಿಗೆ ಧೈರ್ಯ ತುಂಬಿ ಬಸ್ ಹತ್ತಿಸಿದರು. ದೂರದಲ್ಲೇ ನಿಂತು ವಸುಧರಾ ಹೊರಡುವುದನ್ನು ಕದ್ದು ನೋಡುತ್ತಿದ್ದ ರಿಷಿ. ಅಲ್ಲಿಂದಲೇ ವಸುಗೆ ಆಲ್ ದಿ ಬೆಸ್ಟ್ ಹೇಳಿದ. ವಸುಧರಾ ಹೊರಟ ಬಳಿಕ ಜಗತಿ ಮತ್ತು ಮಹೇಂದ್ರ ಇಬ್ಬರೂ ಅಲ್ಲಿಂದ ಹೊರಡಲು ಸಿದ್ಧರಾದರು. ಅಷ್ಟೊತ್ತಿಗೆ ರಿಷಿ ಕಾರ್ ಪಾಸ್ ಆಗಿದ್ದು ನೋಡಿ ಮಹೇಂದ್ರ ಶಾಕ್ ಆದ.

ಫೋನ್ ಮಾಡಿ ಎಲ್ಲಿದ್ದಿಯಾ ಎಂದು ರಿಷಿನಾ ವಿಚಾರಿಸಿದ ಮಹೇಂದ್ರ. ಮನೆಗೆ ಹೋಗುತ್ತಿದ್ದೀನಿ ಎಂದು ತಂದೆಗೆ ಹೇಳಿ ಫೋನ್ ಕಟ್ ಮಾಡಿದ ರಿಷಿ. ಮಹೇಂದ್ರ ಮತ್ತು ಜಗತಿ ಇಬ್ಬರೂ ಮನೆಗೆ ಹೋದರೂ ರಿಷಿ ಇನ್ನೂ ಬಂದಿರುವುದಿಲ್ಲ. ರಿಷಿ ಮನೆಗೆ ಬರುವ ಬದಲು ಸೀದಾ ವಸುಧರಾ ಬಸ್ ಹಿಂದೆಯೇ ಹೊರಟಿದ್ದ. ಬಸ್ ಸ್ವಲ್ಪ ದೂರ ಹೋಗುವುದರೊಳಗೆ ತನ್ನ ಕಾರನ್ನು ಬಸ್‌ಗೆ ಅಡ್ಡ ಹಾಕಿ ನಿಲ್ಲಿಸಿದ ರಿಷಿ. ಒಳಗೆ ಕುಳಿತಿದ್ದ ವಸುಧರಾಳನ್ನು ಕರ್ಕೊಂಡು ಹೊರ ಬಂದ. ಎಲ್ಲಿಗೆ ಎಂದು ವಸು ಕೇಳಿದರೂ ಹೇಳದೆ ಕಾರಿನಲ್ಲಿ ಕೂರಿಸಿಕೊಂಡ. ರಿಷಿಯ ವರ್ತನೆ ವಸುಗೆ ಅಚ್ಚರಿ ಮೂಡಿಸಿತು. ಎಲ್ಲಿಗೆ ಎಂದು ವಸು ಮತ್ತೆ ಕೇಳಿದಳು. ‘ಹೊಸ ಪಯಣ ಪ್ರಾರಂಭವಾಗಿದೆ’ ಎಂದ ರಿಷಿ. ಅರ್ಥವಾಗದೆ ಸೈಲೆಂಟ್ ಆದಳು ವಸುಧರಾ.

ಇತ್ತ ಹೇಗಾದರೂ ಮಾಡಿ ವಸುಧರಾ ಎಕ್ಸಾಮ್ ಬರೆಯುವುದನ್ನು ತಪ್ಪಿಸಬೇಕೆಂದು ಯೋಚಿಸುತ್ತಿದ್ದಳು ದೇವಯಾನಿ. ಸಾಕ್ಷಿಯನ್ನು ಬಳಸಿಕೊಂಡು ತನ್ನ ಪ್ಲಾನ್ ವರ್ಕೌಟ್ ಮಾಡಿಕೊಳ್ಳಲು ಮುಂದಾದಳು. ಹೇಗಾದರೂ ಮಾಡಿ ವಸುಧರಾಳ ಎಕ್ಸಾಮ್ ಹಾಲ್ ಟಿಕೆಟ್ ಕದಿಯಬೇಕೆಂದು ಸ್ಕೆಚ್ ಹಾಕಿ ವಸು ಎಕ್ಸಾಮ್ ಬರೆಯುತ್ತಿದ್ದ ಜಾಗಕ್ಕೆ ಹೊರಟಳು ಸಾಕ್ಷಿ.

ಮನೆಯಲ್ಲಿ ಯಾರಿಗೂ ಹೇಳದೆ ಬಂದಿದ್ದ ರಿಷಿ ದೊಡ್ಡಮ್ಮನಿಗೆ ಫೋನ್ ಮಾಡಿ ಕಾಲೇಜು ಕೆಲಸದ ಮೇಲೆ ಹೊರ ಹೋಗುತ್ತಿರುವುದಾಗಿ ತಿಳಿಸಿದ. ರಿಷಿ ಎಲ್ಲಿಗೆ ಹೋದ ಎಂದು ಮಹೇಂದ್ರ ಮತ್ತು ಜಗತಿ ಇಬ್ಬರೂ ಯೋಚಿಸುತ್ತಿದ್ದರು. ಆಗ ರಿಷಿ ಎಲ್ಲಿದ್ದಾನೆ ಗೊತ್ತಾ ಎಂದು ವ್ಯಂಗ್ಯವಾಡುತ್ತಾ ಬಂದಳು ದೇವಯಾನಿ. ಗೊತ್ತಿಲ್ಲದ್ದಿದ್ದರೂ ಗೊತ್ತಿದೆ ಎಂದ ಮಹೇಂದ್ರ. ಕಾಲೇಜು ಕೆಲಸದ ಮೇಲೆ ಹೊರಗೆ ಹೋಗಿದ್ದಾನಂತೆ ಎಲ್ಲಿಗೆ ಎಂದು ದೇವಯಾನಿ ಪ್ರಶ್ನೆ ಮಾಡಿದಳು. ಯಾವುದೋ ಸನ್ಮಾನ ಇರಬೇಕು ಅಂತ ಮಹೇಂದ್ರ ಮತ್ತೆ ಸುಳ್ಳು ಹೇಳಿದ. ರಿಷಿ ಎಲ್ಲಿ ಹೋದ, ವಸುಧರಾ ಜೊತೆ ಹೋಗಿರಬಹುದಾ ಎಂದು ಟೆನ್ಶನ್ ಮಾಡಿಕೊಂಡ ಮಹೇಂದ್ರನಿಗೆ ಸಮಾಧಾನ ಮಾಡಿದಳು ಜಗತಿ. ವಸು ಎಕ್ಸಾಮ್ ಬರೆಯದ ಹಾಗೆ ಮಾಡ್ತಾಳಾ ಸಾಕ್ಷಿ? ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?