12 ವರ್ಷಗಳ ಬಳಿಕ ಮತ್ತೆ ಬಿಗ್​​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಸಂಜನಾ ಗಲ್ರಾನಿ

Sanjana Galrani: 2013 ರಲ್ಲಿ ಪ್ರಸಾರವಾಗಿದ್ದ ಕನ್ನಡದ ಮೊದಲ ಬಿಗ್​​ಬಾಸ್​​ನ ಸ್ಪರ್ಧಿಯಾಗಿದ್ದ ನಟಿ ಸಂಜನಾ ಗಲ್ರಾನಿ ಇದೀಗ ಬರೋಬ್ಬರಿ 12 ವರ್ಷಗಳ ಬಳಿಕ ಮತ್ತೆ ಬಿಗ್​​ಬಾಸ್ ಮನೆಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಈ ಬಾರಿ ಕನ್ನಡ ಬಿಗ್​​ಬಾಸ್​​ಗೆ ಬಂದಿಲ್ಲ ಬದಲಿಗೆ ತೆಲುಗು ಬಿಗ್​​ಬಾಸ್​​ನ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ ಸಂಜನಾ ಗಲ್ರಾನಿ.

12 ವರ್ಷಗಳ ಬಳಿಕ ಮತ್ತೆ ಬಿಗ್​​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಸಂಜನಾ ಗಲ್ರಾನಿ
Sanjana Galrani

Updated on: Sep 07, 2025 | 10:49 PM

ನಟಿ ಸಂಜನಾ ಗಲ್ರಾನಿ ಸಿನಿಮಾಗಳಿಗಿಂತಲೂ ವಿವಾದಗಳಿಂದ ಹೆಚ್ಚು ಸುದ್ದಿ ಆಗಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ಸಂಜನಾ ಗಲ್ರಾನಿ ಸಿನಿಮಾಗಳಲ್ಲಿ ನಟಿಸುವುದು ಬಹುತೇಕ ನಿಲ್ಲಿಸಿದ್ದಾರೆ ಅಥವಾ ಅವರಿಗೆ ಅವಕಾಶಗಳು ಬರುವುದೇ ನಿಂತು ಹೋಗಿದೆ. ಆದರೆ ಇದೀಗ ಹಠಾತ್ತನೆ ಸಂಜನಾ, ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಬರೋಬ್ಬರಿ 12 ವರ್ಷಗಳ ಬಳಿಕ ಸಂಜನಾ ಗಲ್ರಾನಿ ಬಿಗ್​​ಬಾಸ್ ಮನೆಗೆ ಬಂದಿದ್ದಾರೆ. ಆದರೆ ಕನ್ನಡ ಬಿಗ್​​ಬಾಸ್ ಅಲ್ಲ ಬದಲಿಗೆ ತೆಲುಗು ಬಿಗ್​​ಬಾಸ್.

ಸಂಜನಾ ಗಲ್ರಾನಿ, ಬಿಗ್​​ಬಾಸ್ ತೆಲುಗು ಸೀನಸ್ 09ರ ಸ್ಪರ್ಧಿಯಾಗಿ ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಕನ್ನಡದಲ್ಲಿ ಬಿಗ್​​ಬಾಸ್ ಮೊದಲ ಸೀಸನ್ ಶುರುವಾದಾಗ ಆ ಮೊದಲ ಸೀಸನ್​​ನಲ್ಲಿ ಸಂಜನಾ ಗಲ್ರಾನಿ ಸ್ಪರ್ಧಿಯಾಗಿ ಭಾಗಿ ಆಗಿದ್ದರು. ಕನ್ನಡ ಬಿಗ್​​ಬಾಸ್ ಮೊದಲ ಸೀಸನ್ 2013 ರಲ್ಲಿ ಪ್ರಸಾರ ಆಗಿತ್ತು. ಈಗ ಬರೋಬ್ಬರಿ 12 ವರ್ಷಗಳ ಬಳಿಕ ಸಂಜನಾ ಬಿಗ್​​ಬಾಸ್ ಮನೆ ಪ್ರವೇಶಿಸಿದ್ದಾರೆ.

ಬಿಗ್​​ಬಾಸ್ ಕಾರ್ಯಕ್ರಮದ ಆರಂಭದ ವರ್ಷಗಳಲ್ಲಿ ಬಿಗ್​​ಬಾಸ್ ಕಾರ್ಯಕ್ರಮದ ಭಾಗಿ ಆಗಿದ್ದರು ಸಂಜನಾ. ಈ ಹನ್ನೆರಡು ವರ್ಷಗಳಲ್ಲಿ ಬಿಗ್​​ಬಾಸ್​ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಈ 12 ವರ್ಷಗಳಲ್ಲಿ ಸ್ವತಃ ಸಂಝನಾ ಗಲ್ರಾನಿ ಸಹ ತಮ್ಮ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನು ಕಂಡಿದ್ದಾರೆ. ಡ್ರಗ್ಸ್ ಪ್ರಕರಣ, ಶ್ರೀಲಂಕಾದ ಜೂಜು ಪ್ರಕರಣ ಇನ್ನೂ ಕೆಲವು ವಿವಾದಗಳಲ್ಲಿ ಸಂಜನಾರ ಹೆಸರು ಕೇಳಿ ಬಂದಿದೆ.

ಇದನ್ನೂ ಓದಿ:ತೆಲುಗು ಬಿಗ್​​ಬಾಸ್ ಸೇರಿದ ಕನ್ನಡದ ನಟಿ, ಯಾರು ಈ ತನುಜಾ ಗೌಡ?

ತೆಲುಗು ಬಿಗ್​​ಬಾಸ್ ಸೀಸನ್ 09ರ ವೇದಿಕೆಗೆ ಸಂಜಾನರನ್ನು ನಟ ಅಕ್ಕಿನೇನಿ ನಾಗಾರ್ಜುನ ಆಹ್ವಾನ ಮಾಡಿದರು. ಸಂಜನಾರ ಇಂಟ್ರೊಡಕ್ಷನ್ ವಿಡಿಯೋನಲ್ಲಿ ತಮ್ಮ ಪುಟ್ಟ ಮಗುವನ್ನು ಮನೆಯಲ್ಲಿ ಬಿಟ್ಟು ಬಿಗ್​​ಬಾಸ್ ಮನೆಗೆ ಬರುತ್ತಿರುವ ಬಗ್ಗೆ ಭಾವಕರಾಗಿ ಮಾತನಾಡಿದರು. ಜೊತೆಗೆ 2020ರ ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಹೆಸರನ್ನು ಉದ್ದೇಶಪೂರ್ವಕವಾಗಿ ಎಳೆದು ತರಲಾಯಿತು ಎಂದು ಸಹ ಸಂಜನಾ ಹೇಳಿಕೊಂಡಿದ್ದಾರೆ.

ಸಂಜನಾ ಹಲವಾರು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದು, ಕನ್ನಡದಷ್ಟೆ ತೆಲುಗಿನಲ್ಲಿಯೂ ಜನಪ್ರಿಯರು. ಪ್ರಭಾಸ್ ಜೊತೆಗೆ ‘ಬುಜ್ಜಿಗಾಡು’, ಪವನ್ ಕಲ್ಯಾಣ್ ನಟನೆಯ ‘ಗಬ್ಬರ್ ಸಿಂಗ್’, ‘ದುಶ್ಯಾಸನ’, ‘ಯಮಹೋ ಯಮ’, ‘ಪೊಲೀಸ್ ಪೊಲೀಸ್’, ‘2 ಕಂಟ್ರೀಸ್’ ಇನ್ನೂ ಕೆಲ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ತೆಲುಗು ಪ್ರೇಕ್ಷಕರಿಗೆ ಸಂಜನಾ ಪರಿಪರಿಚಿತರು.

ಸಂಜನಾ ಗಲ್ರಾನಿಗೆ ಬಿಗ್​​ಬಾಸ್ ಹೊಸತೇನಲ್ಲ. ಈಗಾಗಲೇ ಈ ಫಾರ್ಮ್ಯಾಟ್ ಅನ್ನು ಅವರು ನೋಡಿದ್ದಾರೆ. ಸ್ಪರ್ಧಿಯಾಗಿ ಹಾಗೂ ವೀಕ್ಷಕಿ ಆಗಿಯೂ ಅವರು ಬಿಗ್​​ಬಾಸ್ ನೋಡಿದ್ದಾರೆ. ಅದರ ಜೊತೆಗೆ ಅವರಿಗೆ ವಯೋಸಹಜ ಅನುಭವವೂ ಸಹ ಇದೆ. ಇದೆಲ್ಲವನ್ನೂ ಬಳಸಿಕೊಂಡು ಹೇಗೆ ಸಂಜನಾ ಆಡುತ್ತಾರೆ ಎಂಬುದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ