ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ (Chaya Singh) ನಟನೆಯ ‘ಅಮೃತಧಾರೆ’ ಧಾರಾವಾಹಿ ಮೇ 29ರಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆರಂಭಿಸಲಿದೆ. ಈ ಧಾರಾವಾಹಿ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಧಾರಾವಾಹಿ ಪ್ರಸಾರದ ಸಮಯದ ಬಗ್ಗೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಈಗ ಈ ವಿಚಾರ ರಿವೀಲ್ ಆಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ‘ಅಮೃತಧಾರೆ’ ಧಾರಾವಾಹಿ (Amruthadhare Serial ) ರಾತ್ರಿ 7 ಗಂಟೆಗೆ ಪ್ರಸಾರ ಕಾಣಲಿದೆ. ಈ ಸಂದರ್ಭದಲ್ಲಿ ಪ್ರಸಾರ ಕಾಣುತ್ತಿದ್ದ ‘ಹಿಟ್ಲರ್ ಕಲ್ಯಾಣ’ದ ಕಥೆ ಏನು ಎಂಬ ಪ್ರಶ್ನೆ ಮೂಡಿದೆ.
ಸಿನಿಮಾ ರಂಗದಲ್ಲಿ ಛಾಯಾ ಸಿಂಗ್ ಹಾಗೂ ರಾಜೇಶ್ ನಟರಂಗ ಗುರುತಿಸಿಕೊಂಡಿದ್ದಾರೆ. ಅವರು ‘ಅಮೃತಧಾರೆ’ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಹಲವು ಪ್ರೋಮೋಗಳು ರಿಲೀಸ್ ಆಗಿದ್ದು ಎಲ್ಲರ ಗಮನ ಸೆಳೆದಿದೆ. ಈಗ ‘ಅಮೃತಧಾರೆ’ ಧಾರಾವಾಹಿಯ ಪ್ರಸಾರ ಸಮಯ ಕೂಡ ಘೋಷಣೆ ಆಗಿದೆ.
‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಸದ್ಯ ರಾತ್ರಿ 7 ಗಂಟೆಗೆ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ಒಳ್ಳೆಯ ಟಿಆರ್ಪಿ ಹೊಂದಿದೆ. ಆದರೆ, ಈಗ ಹೊಸ ಧಾರಾವಾಹಿಯ ಆಗಮನದಿಂದ ‘ಹಿಟ್ಲರ್ ಕಲ್ಯಾಣ’ವನ್ನು ರಾತ್ರಿ 10 ಗಂಟೆಗೆ ಪ್ರಸಾರ ಮಾಡಲಾಗುತ್ತದೆ ಎನ್ನಲಾಗಿದೆ. ಸದ್ಯ ಜೀ ಕನ್ನಡದಲ್ಲಿ ರಾತ್ರಿ 10 ಗಂಟೆಗೆ ‘ಸೌಭಾಗ್ಯವತಿ ಭವ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಇದಕ್ಕೆ ಯಾವ ಸ್ಲಾಟ್ ಕೊಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
‘ಒಂಟಿ ಜೀವಗಳೆರೆಡು ಒಂದಾದ್ರೆ ಒಲವ ‘ಅಮೃತಧಾರೆ’. ಬರ್ತಿದೆ ಒಂದು ಹೊಸ ಕಥೆ ಅಮೃತಧಾರೆ. ಮೇ 29 ಸೋಮವಾರದಿಂದ ಸಂಜೆ 7ಕ್ಕೆ’ ಎಂದು ಹೊಸ ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ಧಾರಾವಾಹಿಯಲ್ಲಿ ಸಿಹಿಕಹಿ ಚಂದ್ರು ಮೊದಲಾದವರು ನಟಿಸುತ್ತಿದ್ದಾರೆ.
ಇದನ್ನೂ ಓದಿ: ಜೀ ಕನ್ನಡದಲ್ಲಿ ಮೇ 29ರಿಂದ ‘ಅಮೃತಧಾರೆ’ ಧಾರಾವಾಹಿ ಆರಂಭ; ಯಾವ ಸೀರಿಯಲ್ ಅಂತ್ಯ?
ರಾಜೇಶ್ ನಟರಂಗ ಅವರು ಉದ್ಯಮಿ ಆಗಿ ಕಾಣಿಸಿಕೊಂಡರೆ, ಛಾಯಾ ಸಿಂಗ್ ಮಧ್ಯಮ ವರ್ಗದ ಹುಡುಗಿ ಆಗಿ ಕಾಣಿಸಿಕೊಂಡಿದ್ದಾರೆ. ‘ಬಡೇ ಅಚ್ಚೆ ಲಗ್ತೇ ಹೈ’ ಹೆಸರಿನ ಹಿಂದಿ ಧಾರಾವಾಹಿಯ ರಿಮೇಕ್ ಇದಾಗಿದೆ. ‘ಅಮೃತಧಾರೆ’ ಪ್ರೋಮೋ ನೋಡಿದವರಿಗೆ ‘ಜೊತೆ ಜೊತೆಯಲಿ’ ಧಾರಾವಾಹಿ ನೆನಪಾಗಿದೆ. ವಯಸ್ಸಿನ ಅಂತರ ಹೆಚ್ಚಿರುವ ಹುಡುಗ-ಹುಡುಗಿಯ ಪ್ರೇಮ್ ಕಹಾನಿ ಈ ಧಾರಾವಾಹಿಯಲ್ಲಿತ್ತು. ‘ಅಮೃತಧಾರೆ’ ಕೂಡ ಇದೇ ರೀತಿ ಇರಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:08 am, Tue, 23 May 23