ಒಂದೇ ದಿನ ಒಟಿಟಿಗೆ ಕಾಲಿಟ್ಟ ಕನ್ನಡದ ಎರಡು ಹಿಟ್ ಚಿತ್ರಗಳು; ಮಿಸ್ ಮಾಡಲೇಬೇಡಿ

ಅಕ್ಟೋಬರ್ 17ಕ್ಕೆ ‘ಏಳುಮಲೆ’ ಸಿನಿಮಾ ಒಟಿಟಿಗೆ ಬಂದಿದೆ. ಚಿತ್ರ ಜೀ5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದಲ್ಲಿ ರಾಣಾಗೆ ಜೊತೆಯಾಗಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯೋ ಕಥೆ ಇದಾಗಿದ್ದು, ನೈಜ ಘಟನೆಗಳನ್ನು ಆಧರಿಸಿದೆ. ಜಗಪತಿ ಬಾಬು, ಕಿಶೋರ್ ಮೊದಲಾದವರು ಸಿನಿಮಾದ ಭಾಗ ಆಗಿದ್ದಾರೆ.

ಒಂದೇ ದಿನ ಒಟಿಟಿಗೆ ಕಾಲಿಟ್ಟ ಕನ್ನಡದ ಎರಡು ಹಿಟ್ ಚಿತ್ರಗಳು; ಮಿಸ್ ಮಾಡಲೇಬೇಡಿ
ಒಟಿಟಿ

Updated on: Oct 17, 2025 | 11:36 AM

ಒಟಿಟಿಯಲ್ಲಿ ಪ್ರತಿ ವಾರ ಸಾಕಷ್ಟು ಸಿನಿಮಾಗಳು ರಿಲೀಸ್ ಆಗುತ್ತಲೇ ಇರುತ್ತವೆ. ಕನ್ನಡಕ್ಕಿಂತ ಪರಭಾಷಾ ಸಿನಿಮಾಗಳು ಒಟಿಟಿಗೆ ಕಾಲಿಡೋದು ಹೆಚ್ಚು. ಈಗ ಒಂದೇ ದಿನ ಕನ್ನಡದ ಎರಡು ಸೂಪರ್ ಹಿಟ್ ಚಿತ್ರಗಳು ಒಟಿಟಿಗೆ ಕಾಲಿಟ್ಟಿವೆ.  ಇದು ಪ್ರೇಕ್ಷಕರ ಪಾಲಿಗೆ ನಿಜಕ್ಕೂ ವಿಶೇಷ. ಥಿಯೇಟರ್​​ನಲ್ಲಿ ಮಿಸ್ ಮಾಡಿಕೊಂಡವರು ಅಥವಾ ಥಿಯೇಟರ್​ನಲ್ಲಿ ಸಿನಿಮಾ ವೀಕ್ಷಿಸಿ ಮತ್ತೊಮ್ಮೆ ನೋಡಬೇಕು ಎಂದುಕೊಂಡವರು ಸಿನಿಮಾನ ಮನೆಯಲ್ಲೇ ಕುಳಿತು ವೀಕ್ಷಿಸಬಹುದು.

ಏಳುಮಲೆ

ಕನ್ನಡದಲ್ಲಿ ಇತ್ತೀಚೆಗೆ ರಿಲೀಸ್ ಆಗಿ ಸೂಪರ್ ಹಿಟ್ ಆದ ಚಿತ್ರಗಳಲ್ಲಿ ‘ಏಳುಮಲೆ’ ಸಿನಿಮಾ ಕೂಡ ಒಂದು. ರಾಣಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಪುನೀತ್ ರಂಗಸ್ವಾಮಿ ನಿರ್ದೇಶನ ಇದೆ. ಎಲ್ಲಕ್ಕಿಂತ ಮುಖ್ಯವಾಗಿ ತರುಣ್ ಸುಧೀರ್ ಅವರು ತಮ್ಮ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಒಳ್ಳೆಯ ವಿಮರ್ಶೆ ಸಿಕ್ಕ ಹೊರತಾಗಿಯೂ ಹೆಚ್ಚಿನ ಜನರನ್ನು ಸಿನಿಮಾ ತಲುಪಿಲ್ಲ ಎಂಬ ಬೇಸರ ಅವರಿಗೆ ಇದೆ. ಸೆಪ್ಟೆಂಬರ್ 5ರಂದು ಈ ಚಿತ್ರ ಥಿಯೇಟರ್​ನಲ್ಲಿ ಬಿಡುಗಡೆ ಕಂಡಿತ್ತು.

ಇದನ್ನೂ ಓದಿ: ಅಕ್ಟೋಬರ್ 10ರಿಂದ ‘ಮಿರಾಯ್’ ಸಿನಿಮಾ: ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ

ಇದನ್ನೂ ಓದಿ
ಅಶ್ವಿನಿಯ ಚಮಚ ಆದ ಜಾನ್ವಿ; ಹೇಳಿದಂತೆ ಕುಣೀತಾರೆ ತಕತೈ, ತಕತೈ
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಅಕ್ಟೋಬರ್ 17ಕ್ಕೆ ಸಿನಿಮಾ ಒಟಿಟಿಗೆ ಬಂದಿದೆ. ಚಿತ್ರ ಜೀ5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರದಲ್ಲಿ ರಾಣಾಗೆ ಜೊತೆಯಾಗಿ ಪ್ರಿಯಾಂಕಾ ಕಾಣಿಸಿಕೊಂಡಿದ್ದಾರೆ. ಒಂದು ರಾತ್ರಿಯಲ್ಲಿ ನಡೆಯೋ ಕಥೆ ಇದಾಗಿದ್ದು, ನೈಜ ಘಟನೆಗಳನ್ನು ಆಧರಿಸಿದೆ. ಜಗಪತಿ ಬಾಬು, ಕಿಶೋರ್ ಮೊದಲಾದವರು ಸಿನಿಮಾದ ಭಾಗ ಆಗಿದ್ದಾರೆ.

ಅಂದೊಂದಿತ್ತು ಕಾಲ

ವಿನಯ್ ರಾಜ್​ಕುಮಾರ್ ಹಾಗೂ ಅಧಿತಿ ಪ್ರಭುದೇವ ನಟನೆಯ ‘ಅಂದೊಂದಿತ್ತು ಕಾಲ’ ಆಗಸ್ಟ್ 19ರಂದು ಥಿಯೇಟರ್​ನಲ್ಲಿ ರಿಲೀಸ್ ಆಯಿತು. ಈ ಚಿತ್ರ ಕೂಡ ವಿಮರ್ಶೆಯಲ್ಲಿ ಮೆಚ್ಚುಗೆ ಪಡೆಯಿತು. ಈಗ ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋ ಮೂಲಕ ಪ್ರಸಾರ ಆರಂಭಿಸಿದೆ. ಈ ಚಿತ್ರ ಇಂದು (ಅಕ್ಟೋಬರ್ 17) ಒಟಿಟಿಗೆ ಬಂದಿದೆ. ಕೀರ್ತಿ ಕೃಷ್ಣಪ್ಪ ಈ ಚಿತ್ರ ನಿರ್ದೇಶನ ಮಾಡಿದ್ದರು. ಈ ಚಿತ್ರವನ್ನು ಈಗ ಒಟಿಟಿಯಲ್ಲಿ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:34 am, Fri, 17 October 25

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us