ಕನ್ನಡದ ‘ಬಿಗ್ ಬಾಸ್’ ಮನೆಯಲ್ಲಿ ಈವರೆಗೆ ಸಾಕಷ್ಟು ಪ್ರೀತಿಗಳು ಹುಟ್ಟಿಕೊಂಡಿವೆ. ಈ ಪೈಕಿ ಕೆಲವು ಯಶಸ್ಸು ಕಂಡಿವೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮಧ್ಯೆ ಲವ್ ಮೂಡಿದ್ದು ಬಿಗ್ ಬಾಸ್ ಮನೆಯಲ್ಲಿ. ಅವರು ಮದುವೆ ಆಗಿ ಈಗ ವಿಚ್ಛೇದನ ಕೂಡ ಪಡೆದಿದ್ದಾರೆ. ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಮಧ್ಯೆ ಪ್ರೀತಿ ಮೂಡಿದ್ದು, ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ. ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಮೂಡುವ ಸೂಚನೆ ಸಿಕ್ಕಿದೆ. ಈ ಬಗ್ಗೆ ಕೆಲವರು ಪ್ರಶ್ನೆ ಎತ್ತಿದ್ದಾರೆ.
‘ಬಿಗ್ ಬಾಸ್’ ಮನೆಯಲ್ಲಿ ಯಾವ ರೀತಿಯಲ್ಲಿ ಇದ್ದರೆ ವರ್ಕೌಟ್ ಆಗುತ್ತದೆ ಎನ್ನುವ ಪ್ರಶ್ನೆ ಚೈತ್ರಾ ಕುಂದಾಪುರ ಹಾಗೂ ಅನುಷಾ ರೈಗೆ ಮೂಡಿದೆ. ‘ಐಶ್ವರ್ಯಾ ಹಾಗೂ ಧರ್ಮ ಒಟ್ಟಾಗಿ ಇದ್ದಾರೆ. ಧರ್ಮ ಅವರು ಈ ವಿಚಾರದಲ್ಲಿ ಪಾಸಿಟಿವ್ ಆಗಿ ಇದ್ದಾರೆ ಅನಿಸುತ್ತದೆ. ಅವರು ಒಟ್ಟಾಗಿ ಇರುತ್ತಾರೆ. ಒಟ್ಟಿಗೆ ಅಡುಗೆ ಮಾಡೋದು ನಡೆಯುತ್ತಿದೆ. ಕಂಟೆಂಟ್ಗೋಸ್ಕರ ಲವ್ ಆಗುತ್ತಾ’ ಎಂದು ಅನುಷಾ ಅವರು ಚೈತ್ರಾ ಬಳಿ ಪ್ರಶ್ನೆ ಮಾಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ನಲ್ಲಿ ಐಶ್ವರ್ಯಾ ಅವರು ಧರ್ಮ ಅವರ ಬಗ್ಗೆ ಆಸಕ್ತಿ ತೋರಿಸಿದ್ದಾರೆ. ಇವರ ಮಧ್ಯೆ ಪ್ರೀತಿ ಮೂಡಿತೇ ಎನ್ನುವ ಪ್ರಶ್ನೆ ಮೂಡಿದೆ. ಈ ವಿಚಾರದ ಬಗ್ಗೆ ಚರ್ಚೆಗಳು ನಡೆದಿವೆ.
‘ನನಗೆ ಹೊರಗೆ ಬಾಯ್ಫ್ರೆಂಡ್ ಇಲ್ಲ. ಎಂಗೇಜ್ಮೆಂಟ್ ಕೂಡ ಆಗಿಲ್ಲ. ಯಾರಾದರೂ ಪ್ರೀತಿ ಕೊಡ್ತೀನಿ ಎಂದು ಬಂದರೆ ನಾನು ಅದಕ್ಕೆ ಸಿದ್ಧ. ಅರ್ಹ ವ್ಯಕ್ತಿ ಬಂದು ಅವನೇ ಕೇಳಿದರೆ ಯೆಸ್ ಎಂದು ಹೇಳುತ್ತೇನೆ’ ಎಂದಿದ್ದಾರೆ ಅನುಷಾ ರೈ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ದರ್ಶನ್ ವಿಚಾರ ಏಕೆ ಬರಲಿಲ್ಲ? ಸಿಕ್ಕಿತು ಉತ್ತರ
ಕೆಲವರು ಹೈಲೈಟ್ ಆಗಬೇಕು ಎಂಬ ಕಾರಣಕ್ಕೆ ಲವ್ ಮಾಡಿದ್ದೂ ಇದೆ. ಬಿಗ್ ಬಾಸ್ನಿಂದ ಹೊರ ಹೋದ ಬಳಿಕ ನಾನ್ಯಾರೋ ನೀನ್ಯಾರೋ ಎಂಬ ರೀತಿಯಲ್ಲಿ ನಡೆದುಕೊಂಡಿದ್ದೂ ಇದೆ. ಐಶ್ವರ್ಯಾ ಹಾಗೂ ಧರ್ಮ ಕಥೆ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.