ಇಂದು ಆ್ಯಂಕರ್ ಅನುಶ್ರೀ ಮದುವೆ; ಮುಹೂರ್ತ, ವಿವಾಹ ವಿಶೇಷತೆಗಳ ಬಗ್ಗೆ ಇಲ್ಲಿದೆ ವಿವರ

ಪ್ರಸಿದ್ಧ ಕನ್ನಡ ಕಿರುತೆರೆ ಆ್ಯಂಕರ್ ಅನುಶ್ರೀ ಅವರು ಆಗಸ್ಟ್ 28 ರಂದು ರೋಷನ್ ಎಂಬ ಉದ್ಯಮಿಯನ್ನು ವಿವಾಹ ಆಗಲಿದ್ದಾರೆ. ಬೆಂಗಳೂರಿನ ಹೊರವಲಯದಲ್ಲಿ ಈ ಅದ್ದೂರಿ ವಿವಾಹ ನೆರವೇರಲಿದೆ. ಕಿರುತೆರೆ ಮತ್ತು ಚಿತ್ರರಂಗದ ಗಣ್ಯರು ಹಾಜರಿ ಹಾಕಲಿದ್ದಾರೆ. ಅನುಶ್ರೀ ಅವರ ಮದುವೆಯ ಸುದ್ದಿ ಹಲವು ಬಾರಿ ಹರಡಿತ್ತು, ಆದರೆ ಇದು ಈಗ ನಿಜವಾಗಿದೆ.

ಇಂದು ಆ್ಯಂಕರ್ ಅನುಶ್ರೀ ಮದುವೆ; ಮುಹೂರ್ತ, ವಿವಾಹ ವಿಶೇಷತೆಗಳ ಬಗ್ಗೆ ಇಲ್ಲಿದೆ ವಿವರ
ಅನುಶ್ರೀ-ರೋಷನ್

Updated on: Aug 28, 2025 | 10:25 AM

ಆ್ಯಂಕರ್ ಅನುಶ್ರೀ ಅವರಿಗೆ ಇಂದು (ಆಗಸ್ಟ್ 28) ವಿವಾಹ ನೆರವೇರುತ್ತಿದೆ. ಅನೇಕ ಬಾರಿ ಅನುಶ್ರೀ (Anushree) ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಳು ಹರಿದಾಡಿದ್ದವು. ಆದರೆ, ಬಹುತೇಕ ಬಾರಿ ಇದು ಫೇಕ್ ಸುದ್ದಿಗಳೇ ಆಗಿದ್ದವು. ಆದರೆ, ಈಗ ಅವರು ನಿಜವಾಗಲೂ ಮದುವೆ ಆಗುತ್ತಿದ್ದಾರೆ. ಬೆಂಗಳೂರಿನ ಹೊರ ವಲಯ ಅನುಶ್ರೀ ವಿವಾಹಕ್ಕೆ ಸಜ್ಜಾಗಿದೆ. ರೋಷನ್ ಜೊತೆ ಅನುಶ್ರೀ ಹಸೆಮಣೆ ಏರಲಿದ್ದಾರೆ.

ಈವರೆಗೆ ಅನುಶ್ರೀ ಅವರು ತಮ್ಮ ಮದುವೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಅವರ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಇದರಲ್ಲಿ ರೋಷನ್ ಹೆಸರು ಇದೆ. ರೋಷನ್ ಕೊಡಗು ಮೂಲದ ಉದ್ಯಮಿ ಎನ್ನಲಾಗಿದೆ. ಅನುಶ್ರೀ ಹಾಗೂ ರೋಷನ್ ಅವರದ್ದು ಲವ್ ಮ್ಯಾರೇಜ್. ಈಗ ಅವರು ಪ್ರೀತಿಗೆ ಹೊಸ ಅರ್ಥ ನೀಡುತ್ತಿದ್ದಾರೆ.

ಇಂದು (ಆಗಸ್ಟ್ 28) ಬೆಳಿಗ್ಗೆ 10.56ಕ್ಕೆ ಅನುಶ್ರಿ ಹಾಗೂ ರೋಷನ್ ವಿವಾಹ ನೆರವೇರುತ್ತಿದೆ. ಬೆಂಗಳೂರಿನ ಕಗ್ಗಲಿಪುರ ಬಳಿಯ ರೆಸಾರ್ಟ್ ಒಂದರಲ್ಲಿ ಮದುವೆ ನಡೆಯುತ್ತಿದೆ. ಕಿರುತೆರೆ ಕಲಾವಿದರು ಮತ್ತು ಚಿತ್ರೋದ್ಯಮದ ಗಣ್ಯರಿಗೆ ಅನುಶ್ರಿ ಆಹ್ವಾನ ನೀಡಿದ್ದಾರೆ. ಅನೇಕ ಸೆಲೆಬ್ರಿಟಿಗಳು ಮದುವೆಗೆ ಹಾಜರಾಗುವ ನಿರೀಕ್ಷೆ ಇದೆ. ಹೀಗಾಗಿ, ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ.

ಇದನ್ನೂ ಓದಿ
KGF ಚಾಚಾಗೆ ಕ್ಯಾನ್ಸರ್ ಎಂದಾಗ ಯಶ್ ಪ್ರತಿಕ್ರಿಯೆ ಏನು? ಊಹೆಗೂ ಮೀರಿದ್ದು
ಹರೀಶ್ ರಾಯ್ ಪರಿಸ್ಥಿತಿ ನೋಡಿ; ಸಹಾಯಕ್ಕಾಗಿ ಅಂಗಲಾಚಿದ ‘ಕೆಜಿಎಫ್’ ಚಾಚಾ
VIDEO: ಶಿವರಾಜ್​ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು
ಹಿರಿಯ ನಟ ದಿನೇಶ್​ಗೆ ಇದ್ದ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ

ಆಗಸ್ಟ್ 27ರಂದು ಅನುಶ್ರೀ ಅವರ ಹಳದಿಶಾಸ್ತ್ರ ಕಾರ್ಯಗಳು ನೆರವೇರಿದ್ದವು. ಇಂದು ವಿವಾಹ ನೆರವೇರುತ್ತಿದೆ. ಅನುಶ್ರೀ ಅವರು ಹಲವು ವರ್ಷಗಳ ಗೆಳೆಯ ರೋಷನ್ ಕೈ ಹಿಡಿಯಲು ರೆಡಿ ಆಗಿದ್ದಾರೆ. ವಿವಿಧ ಬಗೆಯ ಖಾದ್ಯಗಳು ಊಟಕ್ಕೆ ಸಿದ್ಧವಾಗಿವೆ. ಸಾಕಷ್ಟು ಅದ್ದೂರಿಯಾಗಿ ಎಲ್ಲವನ್ನೂ ಡೆಕೋರೇಷನ್ ಮಾಡಲಾಗಿದೆ.

ಇದನ್ನೂ ಓದಿ: ನಿರೂಪಕಿ ಅನುಶ್ರೀ ಮದುವೆ: ಇಲ್ಲಿದೆ ಹಳದಿ ಶಾಸ್ತ್ರದ ಫೋಟೋಗಳು

ಅನುಶ್ರೀ ಅವರು ಕಿರುತೆರೆ ಶೋಗಳಲ್ಲಿ, ಸಿನಿಮಾ ಈವೆಂಟ್​ಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ನಟಿಯಾಗಿಯೂ ಅದೃಷ್ಟ ಪರೀಕ್ಷೆ ಮಾಡಿದ್ದರು. ಆದರೆ, ಕೈ ಹಿಡಿಯಲಿಲ್ಲ. ಹೀಗಾಗಿ, ಆ್ಯಂಕರಿಂಗ್​​ನಲ್ಲಿ ಮುಂದುವರಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 8:07 am, Thu, 28 August 25