ಬಿಗ್ ಬಾಸ್ (Bigg Boss)ಈ ಸೀಸನ್ ಆರಂಭವಾದ ಸಮಯದಲ್ಲಿ ರೂಪೇಶ್ ರಾಜಣ್ಣ ಅವರು ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಕೆಲವೇ ವಾರಗಳಲ್ಲಿ ಅವರು ಔಟ್ ಆಗಲಿದ್ದಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಈಗ ಫಿನಾಲೆ ತಲುಪಿದ್ದಾರೆ. ಟಾಪ್ ಐದರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ. ಇದು ರೂಪೇಶ್ ರಾಜಣ್ಣ (Roopesh Rajanna) ಫ್ಯಾನ್ಸ್ಗೆ ಖಷಿ ನೀಡಿದೆ. ರೂಪೇಶ್ ರಾಜಣ್ಣ ಹಾಗೂ ದಿವ್ಯಾ ಉರುಡುಗ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಬೆಳೆದಿತ್ತು. ಆದರೆ, ಒಂದು ಘಟನೆಯಿಂದ ಎಲ್ಲವೂ ಬದಲಾಗಿತ್ತು. ಈ ವಿಚಾರವನ್ನು ಅರವಿಂದ್ ಕೆಪಿ ಪರೋಕ್ಷವಾಗಿ ಮಾತನಾಡಿದ್ದಾರೆ.
ರೂಪೇಶ್ ರಾಜಣ್ಣ ಅವರು ಬಿಗ್ ಬಾಸ್ ಮನೆಯಲ್ಲಿ ಸಾಂಗ್ ಒಂದನ್ನು ಮಾಡಿದ್ದರು. ಈ ಸಾಂಗ್ಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದು ಕೂಡ ಅವರೇ ಆಗಿತ್ತು. ಈ ಹಾಡನ್ನು ಎಲ್ಲ ಕಡೆಗಳಲ್ಲಿ ದಿವ್ಯಾ ಹಾಡಿದ್ದರು. ಆದರೆ, ಅವರು ಕ್ರೆಡಿಟ್ ಕೊಟ್ಟಿಲ್ಲ ಎಂದು ರೂಪೇಶ್ ರಾಜಣ್ಣ ಕೊಂಕು ತೆಗೆದಿದ್ದರು. ಈ ವಿಚಾರವನ್ನು ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದ್ದರು ಅವರು. ಇದೇ ವಿಷಯಕ್ಕೆ ಕಣ್ಣೀರು ಹಾಕಿದ್ದರು ದಿವ್ಯಾ. ಈ ಘಟನೆ ನೆನಪಿಸಿಕೊಂಡು ಅರವಿಂದ್ ಕೆಪಿ ಟಾಂಗ್ ನೀಡಿದ್ದಾರೆ.
ಅರವಿಂದ್ ಅವರು ಡಿಸೆಂಬರ್ 28ರ ಎಪಿಸೋಡ್ನಲ್ಲಿ ಬಿಗ್ ಬಾಸ್ ಮನೆ ಒಳಗೆ ಬಂದಿದ್ದರು. ಈ ವೇಳೆ ಅರವಿಂದ್ ಕೆಪಿಗೋಸ್ಕರ ಮಾಡಿದ ಹಾಡನ್ನು ದಿವ್ಯಾ ಹೇಳಲು ಮುಂದಾದರು. ‘ದಿವ್ಯಾ ಯಾರಿಗಾದರೂ ಕ್ರೆಡಿಟ್ ಕೊಡೋದಾದರೆ ಕೊಡಿ. ಆಮೇಲೆ ಸಮಸ್ಯೆ ಆಗೋದು ಬೇಡ’ ಎಂದರು. ಅರವಿಂದ್ ಕೆಪಿ ಮಾತನ್ನು ಎಲ್ಲರೂ ಹಾಸ್ಯವಾಗಿ ತೆಗೆದುಕೊಂಡರು. ರೂಪೇಶ್ ರಾಜಣ್ಣ ಕೂಡ ಈ ಮಾತಿಗೆ ನಕ್ಕರು.
ಇದನ್ನೂ ಓದಿ: ಅಂದು ಹಾಗೆ, ಇಂದು ಹೀಗೆ; ‘ಬಿಗ್ ಬಾಸ್’ ಮೇಲಿದ್ದ ಅಭಿಪ್ರಾಯ ಬದಲಿಸಿಕೊಂಡ ರೂಪೇಶ್ ರಾಜಣ್ಣ
ಅರವಿಂದ್ ಕೆಪಿ ಸೀಸನ್ 8ರಲ್ಲಿ ಸ್ಪರ್ಧಿ ಆಗಿ ಭಾಗಿ ಆಗಿದ್ದರು. ಈ ವೇಳೆ ದಿವ್ಯಾ ಉರುಡುಗ ಜತೆ ಒಳ್ಳೆಯ ಕನೆಕ್ಷನ್ ಬೆಳೆಯಿತು. ಇಬ್ಬರ ಮಧ್ಯೆ ಲವ್ ಕೂಡ ಆಯಿತು. ಇವರು ಆದಷ್ಟು ಬೇಗ ಮದುವೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:31 am, Thu, 29 December 22