ಅರ್ಹತೆ ಪಡೆಯದಿದ್ದರೂ ಅನುಭವಿಸೋ ಹಂಬಲ; ಗಿಲ್ಲಿ ನಟ ತಿದ್ದಿಕೊಳ್ಳೋದು ಯಾವಾಗ?

ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟ, ಕ್ಯಾಪ್ಟನ್ ಅರ್ಹತೆ ಇಲ್ಲದಿದ್ದರೂ ಕ್ಯಾಪ್ಟನ್ ರೂಂ ಬಳಸಿದ್ದಾರೆ. ಇದು ಬಿಗ್ ಬಾಸ್ ನಿಯಮಗಳ ಉಲ್ಲಂಘನೆಯಾಗಿದ್ದು, ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರಿಂದ ಪಾಠ ಕಲಿಯುವ ಸಾಧ್ಯತೆಯಿದೆ. ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾದ ಗಿಲ್ಲಿ ನಟ, ಸುದೀಪ್ ಹೊರತುಪಡಿಸಿ ಬೇರೆ ಯಾರ ಮಾತನ್ನೂ ಕೇಳುವುದಿಲ್ಲ.

ಅರ್ಹತೆ ಪಡೆಯದಿದ್ದರೂ ಅನುಭವಿಸೋ ಹಂಬಲ; ಗಿಲ್ಲಿ ನಟ ತಿದ್ದಿಕೊಳ್ಳೋದು ಯಾವಾಗ?
ಗಿಲ್ಲಿ

Updated on: Dec 05, 2025 | 7:03 AM

ಗಿಲ್ಲಿ ನಟ ಅವರು ಕಳೆದ ಎರಡು ತಿಂಗಳಿಂದ ಬಿಗ್ ಬಾಸ್ (Bigg Boss) ಮನೆಯಲ್ಲಿ ಸಾಕಷ್ಟು ಉತ್ತಮವಾಗಿ ಆಡುತ್ತಿದ್ದಾರೆ. ಅನೇಕ ಬಾರಿ ಅವರ ಆಟ ಹಳಿ ತಪ್ಪಿದ್ದು ಇದೆ. ಸುದೀಪ್ ಅವರು ಬುದ್ಧಿ ಹೇಳಿದಾಗ ಅದನ್ನು ತಿದ್ದಿಕೊಂಡು ಮುಂದುವರಿಯುತ್ತಿದ್ದಾರೆ. ಈಗ ಅವರು ಕ್ಯಾಪ್ಟನ್ಸಿ ಅರ್ಹತೆ ಪಡೆಯದಿದ್ದರೂ ಕ್ಯಾಪ್ಟನ್ ರೂಂ ಬಳಸುವ ಹಂಬಲದಲ್ಲಿ ಇದ್ದಾರೆ. ವೀಕೆಂಡ್​ನಲ್ಲಿ ಈ ವಿಷಯ ಚರ್ಚೆಗೆ ಬರುವ ಸಾಧ್ಯತೆ ಇದೆ.

ಗಿಲ್ಲಿ ನಟ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಅವರು ಏನೇ ಮಾಡಿದರೂ ಸರಿ ಎನ್ನುವ ಗುಂಪು ಸಿದ್ಧವಾಗಿದೆ. ಬಿಗ್ ಬಾಸ್ ಮನೆಯೊಳಗಿನ ವಿಷಯ ಮಾತನಾಡಲು ಹೋದರೆ ಅವರು ಯಾರೇ ಹೇಳಿದರೂ ತಪ್ಪು ತಿದ್ದಿಕೊಳ್ಳುವುದಿಲ್ಲ. ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಬಂದರೆ ಮಾತ್ರ ಅವರು ಸೈಲೆಂಟ್ ಆಗೋದು. ಈಗ ಅವರು ಮಾಡಿದ ತಪ್ಪನ್ನು ತಿದ್ದಲು ಕಿಚ್ಚನೇ ಬರಬೇಕಾ ಎನ್ನುವ ಪ್ರಶ್ನೆ ಮೂಡಿದೆ.

ಗಿಲ್ಲಿ ನಟ ಅವರಿಗೆ ಈ ವಾರ ಕ್ಯಾಪ್ಟನ್ ಆಗುವ ಅವಕಾಶ ತಪ್ಪಿದೆ. ಈ ವಾರ ಡಬಲ್ ಕ್ಯಾಪ್ಟನ್ ಆಗಿದ್ದು, ಸ್ಪಂದನಾ ಹಾಗೂ ಅಭಿಷೇಕ್ ಕ್ಯಾಪ್ಟನ್ ಪಟ್ಟ ಪಡೆದರು. ಈ ಬಗ್ಗೆ ಘೋಷಣೆ ಆಗುತ್ತಿದ್ದಂತೆ ಸ್ಪಂದನಾ ಅವರು ಸಾಕಷ್ಟು ಖುಷಿಪಟ್ಟರು. ಅವರನ್ನು ಸ್ವಾಗತಿಸಲು ಗಿಲ್ಲಿ ರೆಡಿ ಆಗೇ ಬಿಟ್ಟರು. ನಾನು ಉಪ ನಾಯಕ ಎಂದು ಕ್ಯಾಪ್ಟನ್ ರೂಂ ಒಳಗೆ ಹೋದರು. ಅಲ್ಲಿರೋ ಬೆಡ್ ಮೇಲೆ ಮಲಗಿ ಕೆಲ ಹೊತ್ತು ವಿಶ್ರಾಂತಿ ಪಡೆದರು.

ಇದನ್ನೂ ಓದಿ: ಏಕವಚನದಲ್ಲೇ ಮಾತನಾಡಿ ಅಶ್ವಿನಿ ಗೌಡಗೆ ಪಾಠ ಕಲಿಸಿದ ಗಿಲ್ಲಿ ನಟ

ಕ್ಯಾಪ್ಟನ್ ರೂಂಗೆ ಕ್ಯಾಪ್ಟನ್ ಬಿಟ್ಟು ಇನ್ಯಾರಿಗೂ ಹೋಗಲು ಹಾಗೂ ಅದನ್ನು ಬಳಸಲು ಅವಕಾಶ ಇಲ್ಲ. ಅದರಲ್ಲೂ ಬೆಡ್ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತೇನೆ ಎಂಬುದು ನಿಯಮಗಳಿಗೆ ವಿರುದ್ಧವಾದುದು. ಈ ಮೊದಲು ಮಲ್ಲಮ್ಮ ಅವರನ್ನು ಬಿಗ್ ಬಾಸ್ ಕ್ಯಾಪ್ಟನ್ ರೂಂನಲ್ಲಿ ಕೂರಿಸಿದ್ದಕ್ಕೆ ರಘು ಅವರಿಗೆ ಕಿಚ್ಚ ಅವರು ಕಿವಿಮಾತು ಹೇಳಿದ್ದರು. ‘ಅದನ್ನು ಅರ್ಹತೆ ಪಡೆದು ಬಳಸಬೇಕು’ ಎಂಬರ್ಥದಲ್ಲಿ ಮಾತನಾಡಿದ್ದರು. ಈಗ ಗಿಲ್ಲಿ ಅವರಿಗೂ ಕಿಚ್ಚ ಸುದೀಪ್ ಅವರು ಪಾಠ ಹೇಳಬೇಕಾದ ಅನಿವಾರ್ಯತೆ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ