
ಈ ಬಾರಿಯ ಬಿಗ್ಬಾಸ್ನಲ್ಲಿ (Bigg Boss Kannada) ಚಿಕ್ಕಪ್ಪನ ಕತೆಗಳು ಗಮನ ಸೆಳೆಯುತ್ತಿವೆ. ಬಿಗ್‌ಬಾಸ್ ಸದಸ್ಯರಿಗೆ ಬುದ್ಧಿವಾದ ಹೇಳಲು ಸುದೀಪ್ ಅವರು ‘ಚಿಕ್ಕಪ್ಪನ ಕತೆ’ಗಳನ್ನು ಹೇಳುತ್ತಾರೆ. ಬಿಗ್‌ಬಾಸ್ ಸ್ಪರ್ಧಿಗಳ ನಡುವೆ ನಡೆದ ಘಟನೆಯನ್ನೇ ಇರಿಸಿಕೊಂಡು ತಮ್ಮ ಹಾಗೂ ತಮ್ಮ ಚಿಕ್ಕಪ್ಪನ ನಡುವೆ ಇಂಥಹದ್ದೊಂದು ಘಟನೆ ನಡೆದಿತ್ತು ಎಂದು ಕಾಲ್ಪನಿಕ ಕತೆಯೊಂದನ್ನು ಹೇಳುತ್ತಾರೆ. ಕತೆಗಳನ್ನು ಕೇಳಿ ಸ್ಪರ್ಧಿಗಳು ನಗುತ್ತಾರೆ ಆದರೆ ಸುದೀಪ್ ಹೇಳುವ ಕತೆಗಳ ಹಿಂದೆ ಗೂಡಾರ್ಥವೂ ಇರುತ್ತದೆ. ಆದರೆ ಇದೀಗ ಗಿಲ್ಲಿ, ತಮ್ಮ ಚಿಕ್ಕಪ್ಪನ ಕತೆಯೊಂದನ್ನು ಸ್ಪರ್ಧಿಗಳಿಗೆ ಹೇಳಿದ್ದಾರೆ.
ಗಿಲ್ಲಿ, ಬಿಗ್‌ಬಾಸ್ ಮನೆಯಲ್ಲಿ ತಮಾಷೆ ಮಾಡುತ್ತಾ, ಪರಸ್ಪರ ಕಾಲೆಳೆಯುತ್ತಾ ಕಾಲ ಕಳೆಯುತ್ತಾರೆ. ನಿನ್ನೆಯ (ಅಕ್ಟೋಬರ್ 30) ಎಪಿಸೋಡ್ನಲ್ಲಿ ಕ್ಯಾಪ್ಟನ್ ರೇಸ್ಗೆ ಸ್ಪರ್ಧಿಯೊಬ್ಬರನ್ನು ಬಹುಮತದಿಂದ ಆಯ್ಕೆ ಮಾಡುವಂತೆ ಬಿಗ್‌ಬಾಸ್ ಸೂಚಿಸಿದ್ದರು. ಅದರಂತೆ ಒಬ್ಬೊಬ್ಬರು ಒಬ್ಬೊಬ್ಬರ ಹೆಸರುಗಳನ್ನು ಹೇಳಿದರು. ಗಿಲ್ಲಿಯ ಅವಕಾಶ ಬಂದಾಗ ಅವರು ಕಾವ್ಯಾ ಅವರಿಗೆ ಓಟು ಹಾಕಿದರು. ಅಶ್ವಿನಿಗೆ ಅವಕಾಶ ಬಂದಾಗ ಅವರು ಜಾನ್ವಿ ಅವರಿಗೆ ಮತ ಚಲಾವಣೆ ಮಾಡಿದರು.
ಅಶ್ವಿನಿ ಅವರು ಜಾನ್ವಿಗೆ ಓಟು ಹಾಕಿದ್ದು ಗಿಲ್ಲಿಯ ಆಶ್ಚರ್ಯಕ್ಕೆ ಕಾರಣವಾಯ್ತು. ಆರಂಭದಿಂದಲೂ ಒಟ್ಟಿಗೆ ಇದ್ದ ಅಶ್ವಿನಿ ಮತ್ತು ಜಾನ್ವಿ ಇತ್ತೀಚೆಗೆ ದೂರಾಗಿದ್ದಾರೆ. ಜಾನ್ವಿ, ಅಶ್ವಿನಿಯ ಎದುರಾಳಿ ತಂಡ ಸೇರಿಕೊಂಡಿದ್ದಾರೆ. ಅಶ್ವಿನಿ ಜೊತೆಗೆ ಹೆಚ್ಚಾಗಿ ಬೆರೆಯುತ್ತಿಲ್ಲ. ಜಾನ್ವಿ ಸಹ ಒಮ್ಮೆ ಅಶ್ವಿನಿ ಜೊತೆ ಜಗಳ ಆಡಿದ್ದಾರೆ. ಆದರೆ ಈಗ ಏಕಾ-ಏಕಿ ಅಶ್ವಿನಿ ಅವರು ಜಾನ್ವಿಗೆ ಮತ ಹಾಕಿದ್ದು ಗಿಲ್ಲಿಗೆ ಶಾಕ್ ತಂದಿದೆ.
ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್ ಮನೆ ಹೇಗಿದೆ ನೋಡಿ
ಇದೇ ಕಾರಣಕ್ಕೆ ಮನೆಯ ಸ್ಪರ್ಧಿಗಳೆಲ್ಲ ಕೂತಿದ್ದಾಗ ಗಿಲ್ಲಿ ತಮ್ಮ ಚಿಕ್ಕಪ್ಪನ ಕತೆ ಹೇಳಿದರು. ‘ನಾನು ಹಾಗೂ ನನ್ನ ಚಿಕ್ಕಪ್ಪನೂ ಬಹಳ ಕ್ಲೋಸು ಆದರೆ ಒಂದು ದಿನ ಎಲ್ಲರ ಎದುರು ನಾವಿಬ್ಬರೂ ಜಗಳ ಮಾಡಿದೆವು ಆದರೆ ಗುಟ್ಟಾಗಿ ಇಬ್ಬರೂ ಸಂಧಾನ ಮಾಡಿಕೊಂಡೆವು. ಜನರ ಎದುರು ಜಗಳ ಮಾಡುವುದು ಆ ನಂತರ ಗುಟ್ಟಾಗಿ ಮುದ್ದಾಡುವುದು ಇದೇ ನಮ್ಮ ಕೆಲಸವಾಗಿತ್ತು, ನಮ್ಮಿಬ್ಬರ ಈ ನಾಟಕದಲ್ಲಿ ಮೂರ್ಖರಾಗಿದ್ದು ಜನ’ ಎಂದರು ಗಿಲ್ಲಿ.
ಆ ಮೂಲಕ ಜಾನ್ವಿ ಹಾಗೂ ಅಶ್ವಿನಿ ಈಗಲೂ ಗೆಳತಿಯರಾಗಿಯೇ ಇದ್ದಾರೆ. ಆದರೆ ತಾವುಗಳು ಜಗಳ ಮಾಡಿರುವುದಾಗಿ, ದೂರಾಗಿರುವುದಾಗಿ ನಮ್ಮನ್ನು ನಂಬಿಸಿ, ನಮ್ಮನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು. ಗಿಲ್ಲಿಯ ಕತೆ ಕೇಳಿ ಜಾನ್ವಿ ನಕ್ಕರಷ್ಟೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ