ಫಿನಾಲೆ ಹೊಸ್ತಿಲಲ್ಲಿ ಕೈ ಕೊಟ್ಟ ಅದೃಷ್ಟ: ಹೊರಗೆ ಬಂದವರು ಯಾರು?

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12ರ ಕೊನೆಯ ವೀಕೆಂಡ್ ಎಪಿಸೋಡ್ ಇಂದು (ಜನವರಿ 11) ನಡೆಯಿತು. ನಿಯಮದಂತೆ ಭಾನುವಾರದ ಎಪಿಸೋಡ್​ನಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲೇ ಬೇಕಿತ್ತು. ಮನೆಯಲ್ಲಿ ಒಟ್ಟು ಎಂಟು ಮಂದಿ ಇದ್ದು, ಇಂದು ಒಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ. ನಾಮಿನೇಟ್ ಆಗಿದ್ದ ಗಿಲ್ಲಿ, ಕಾವ್ಯಾ, ರಾಶಿಕಾ, ಧ್ರುವಂತ್, ರಘು, ರಕ್ಷಿತಾ, ಅವರುಗಳಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದರು ರಘು ಮತ್ತು ರಾಶಿಕಾ.

ಫಿನಾಲೆ ಹೊಸ್ತಿಲಲ್ಲಿ ಕೈ ಕೊಟ್ಟ ಅದೃಷ್ಟ: ಹೊರಗೆ ಬಂದವರು ಯಾರು?
Bigg Boss Kannada 12 (1)

Updated on: Jan 11, 2026 | 10:44 PM

ಬಿಗ್​​ಬಾಸ್ ಕನ್ನಡ ಸೀಸನ್ 12ರ (Bigg Boss) ಕೊನೆಯ ವೀಕೆಂಡ್ ಎಪಿಸೋಡ್ ಇಂದು (ಜನವರಿ 11) ನಡೆಯಿತು. ನಿಯಮದಂತೆ ಭಾನುವಾರದ ಎಪಿಸೋಡ್​ನಲ್ಲಿ ಒಬ್ಬರು ಮನೆಯಿಂದ ಹೊರಗೆ ಹೋಗಲೇ ಬೇಕಿತ್ತು. ಮನೆಯಲ್ಲಿ ಒಟ್ಟು ಎಂಟು ಮಂದಿ ಇದ್ದು, ಇಂದು ಒಬ್ಬರು ಮನೆಯಿಂದ ಹೊರಗೆ ಹೋಗಿದ್ದಾರೆ. ನಾಮಿನೇಟ್ ಆಗಿದ್ದ ಗಿಲ್ಲಿ, ಕಾವ್ಯಾ, ರಾಶಿಕಾ, ಧ್ರುವಂತ್, ರಘು, ರಕ್ಷಿತಾ, ಅವರುಗಳಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದರು ರಘು ಮತ್ತು ರಾಶಿಕಾ.

ಈ ಇಬ್ಬರಲ್ಲಿ ರಾಶಿಕಾ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ. ಆ ಮೂಲಕ ಫಿನಾಲೆ ಎಂಟ್ರಿಯ ಹೊಸ್ತಿಲಲ್ಲಿ ಮನೆಯಿಂದ ಹೊರಗೆ ಹೋದಂತಾಗಿದೆ. ಪ್ರಸ್ತುತ ಮನೆಯಲ್ಲಿ ಅಶ್ವಿನಿ, ಧನುಶ್, ಗಿಲ್ಲಿ, ಕಾವ್ಯಾ, ಧ್ರುವಂತ್, ರಕ್ಷಿತಾ, ರಘು ಅವರುಗಳು ಮಾತ್ರವೇ ಉಳಿದಿದ್ದು, ಈ ಎಲ್ಲರೂ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ರಾಶಿಕಾ ಕೊನೆಯ ಹಂತದಲ್ಲಿ ಮನೆಯಿಂದ ಹೊರಗೆ ಬಂದಿದ್ದಾರೆ. ಆ ಮೂಲಕ ಫಿನಾಲೆ ಸ್ಪರ್ಧಿ ಎನಿಸಿಕೊಳ್ಳುವ ಅವಕಾಶದಿಂದ ಸ್ವಲ್ಪದರಲ್ಲಿ ವಂಚಿತರಾಗಿದ್ದಾರೆ.

ರಾಶಿಕಾ ಚೆನ್ನಾಗಿಯೇ ಆಡಿದ್ದರು. ರಾಶಿಕಾ ಬಂದಾಗ ಇವರು ಆಟದಿಂದಲ್ಲ ಬದಲಿಗೆ ಅಂದದಿಂದ ಶೋನಲ್ಲಿ ಉಳಿದುಕೊಳ್ಳುವ ಸ್ಪರ್ಧಿ ಎಂದುಕೊಳ್ಳಲಾಗಿತ್ತು. ಆದರೆ ರಾಶಿಕಾ ಅಂದದಿಂದ ಮಾತ್ರವಲ್ಲ ಆಟದಿಂದಲೂ ಗಮನ ಸೆಳೆದರು. ಗೆಳೆಯರನ್ನು ಮಾಡಿಕೊಂಡರು, ಜಗಳ ಆಡಿದರು. ಯಾವುದೇ ಒಂದು ಪಕ್ಷ ಸೇರದೆ ಎಲ್ಲರೊಟ್ಟಿಗೆ ಬೆರೆತರು, ಎಲ್ಲರೊಟ್ಟಿಗೆ ಜಗಳ ಸಹ ಆಡಿದರು ಒಟ್ಟಾರೆಯಾಗಿ 360 ಡಿಗ್ರಿ ಆಟವಾಡಿದ ರಾಶಿಕಾ ಇದೀಗ ಬಿಗ್​​ಬಾಸ್ ಮನೆಯಿಂದ ಹೊರಗೆ ಹೋಗಿದ್ದಾರೆ.

ಇದನ್ನೂ ಓದಿ:ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್

ವೇದಿಕೆಯಲ್ಲಿ ಸುದೀಪ್ ಜೊತೆಗೆ ಮಾತನಾಡಿದ ರಾಶಿಕಾ, ‘ಬಿಗ್​​ಬಾಸ್ ಮನೆಗೆ ಬಂದಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಬಹಳ ಒಳ್ಳೆಯ ನಿರ್ಧಾರ. ನಾನು ಇಷ್ಟು ಧೈರ್ಯವಂತೆ ಎಂಬುದು ಇಲ್ಲಿಗೆ ಬರುವವರೆಗೆ ನನಗೆ ಸಹ ಗೊತ್ತಿರಲಿಲ್ಲ. ನಾನು ಸಹ ಬಹಳ ಸ್ಟ್ರಾಂಗ್ ಎನ್ನುವುದು ಗೊತ್ತಾಯಿತು. ಒಂದು ಹಂತದಲ್ಲಂತೂ ಬಿಗ್​​ಬಾಸ್ ಮನೆಯಲ್ಲೇ ಇದ್ದುಬಿಡೋಣ ಎನಿಸಿಬಿಟ್ಟಿತು, ಅಪ್ಪನ ಧ್ವನಿಯ ಬಳಿಕ ನಾನು ಹೆದರಿರುವುದು ಬಿಗ್​​ಬಾಸ್ ಧ್ವನಿಗೆ ಮಾತ್ರ’ ಎಂದರು ರಾಶಿಕಾ.

ರಾಶಿಕಾ ಅವರಿಗೆ ಹಲವು ಉಡುಗೊರೆಗಳನ್ನು ಕೊಟ್ಟ ಸುದೀಪ್ ಅವರು ಭವಿಷ್ಯಕ್ಕೆ ಶುಭ ಹಾರೈಸಿ, ಅವರ ಆಟವನ್ನು ಕೊಂಡಾಡಿ ಬೀಳ್ಕೊಟ್ಟರು. ಮನೆಯಲ್ಲಿ ಏಳು ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದು, ಅವರಲ್ಲಿ ಒಬ್ಬರು ವಾರದ ಮಧ್ಯ ಭಾಗದಲ್ಲಿಯೇ ಹೊರಗೆ ಹೋಗಲಿದ್ದಾರೆ. ಅದಾದ ಬಳಿಕ ಉಳಿದ ಆರರಲ್ಲಿ ಒಬ್ಬರು ವಿನ್ನರ್ ಆಗಿ ಘೋಷಿತಗೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ