
ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ. ಸ್ಪರ್ಧಿಗಳ ಮಧ್ಯೆ ಟಫ್ ಫೈಟ್ ನಡೆಯುತ್ತಿದೆ. ಗೆಲ್ಲೋದು ಯಾರು ಎಂಬ ಬಗ್ಗೆ ಚರ್ಚೆಗಳು ಕೂಡ ನಡೆಯುತ್ತಿವೆ. ಬಿಗ್ ಬಾಸ್ನಿಂದ ಹೊರ ಬಂದ ಸ್ಪರ್ಧಿಗಳು ಗಿಲ್ಲಿ ನಟ ಗೆಲ್ಲುತ್ತಾರೆ ಎಂದು ಹೇಳುತ್ತಿದ್ದಾರೆ. ಗಿಲ್ಲಿ ನಟನ ಅಭಿಮಾನಿಗಳು ತುಂಬಾನೇ ಖುಷಿಯಲ್ಲಿ ಇದ್ದಾರೆ. ಗಿಲ್ಲಿಯೇ (Gilli Nata) ಗೆಲ್ಲೋದು ಎಂಬ ಭರವಸೆ ಅವರದ್ದು. ಆದರೆ, ಜ್ಯೋತಿಷಿ ಒಬ್ಬರು ನುಡಿದ ಭವಿಷ್ಯ ಗಿಲ್ಲಿ ಅಭಿಮಾನಿಗಳ ನಿದ್ದೆ ಕೆಡಿಸಿದೆ.
ಪ್ರಶಾಂತ್ ಕಿಣಿ ಎಂಬುವವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಗಿಲ್ಲಿ ಫಿನಾಲೆ ತಲುಪುತ್ತಾರೆ’ ಎಂದು ಅವರು ಅಕ್ಟೋಬರ್ನಲ್ಲಿ ಭವಿಷ್ಯ ನುಡಿದಿದ್ದರು. ಈಗ ಅದೇ ಟ್ವೀಟ್ನ ರೀ ಟ್ವೀಟ್ ಮಾಡಿಕೊಂಡು, ‘ಗಿಲ್ಲಿ ಅವರು ಬಿಗ್ ಬಾಸ್ ವಿನ್ ಆಗಲ್ಲ’ ಎಂದು ಹೇಳಿದ್ದಾರೆ. ಇದು ಗಿಲ್ಲಿ ಅಭಿಮಾನಿಗಳ ಕೋಪಕ್ಕೆ ಕಾರಣ ಆಗಿದೆ.
ಇನ್ನು ಅವರು ಒಂದು ಅಚ್ಚರಿಯ ಭವಿಷ್ಯ ನುಡಿದಿದ್ದಾರೆ. ‘ಈ ಬಾರಿಯ ಬಿಗ್ ಬಾಸ್ ಗೆಲ್ಲೋದು ಮಹಿಳಾ ಸ್ಪರ್ಧಿ’ ಎಂದಿದ್ದಾರೆ. ಸದ್ಯ ಗಿಲ್ಲಿ ಅಭಿಮಾನಿಗಳು ‘ನಿಮ್ಮ ಭವಿಷ್ಯವನ್ನು ಸುಳ್ಳು ಮಾಡಿ ತೋರಿಸುತ್ತೇವೆ’ ಎಂದು ಹೇಳಿದ್ದಾರೆ.
GILLI Nata won’t win Big Boss kannada season 12….!! https://t.co/7nczp8vEa0
— Prashanth Kini (@AstroPrashanth9) December 15, 2025
BIG BOSS 12 Kannada winner will be a lady…!! https://t.co/7nczp8vEa0
— Prashanth Kini (@AstroPrashanth9) October 26, 2025
ಪ್ರಶಾಂತ್ ಕಿಣಿ ಟ್ವೀಟ್ಗೆ ಫ್ಯಾನ್ಸ್ ನಾನಾ ರೀತಿಯ ಕಮೆಂಟ್ ಮಾಡಿದ್ದಾರೆ. ಕೆಲವರು ಅಶ್ವಿನಿ ಗೌಡ ಗೆಲ್ಲೋದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಕಾವ್ಯಾ ಎಂದಿದ್ದಾರೆ. ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ಮಹಿಳಾ ಸ್ಪರ್ಧಿ ಗೆದ್ದಿದ್ದು ಒಮ್ಮೆ ಮಾತ್ರ. ಶ್ರುತಿ ಅವರು ವಿನ್ ಆಗಿದ್ದರು.
ಇದನ್ನೂ ಓದಿ: ಅಶ್ವಿನಿ ಗೌಡಗೆ ಇರೋ ಎರಡೆರಡು ಮುಖವನ್ನು ಬಿಚ್ಚಿಟ್ಟ ಗಿಲ್ಲಿ ನಟ
ಗಿಲ್ಲಿ ನಟ ಅವರು ಮೊದಲಿನಿಂದಲೂ ಎಲ್ಲರ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಹಲವು ಫ್ಯಾನ್ ಪೇಜ್ಗಳು ಸೃಷ್ಟಿ ಆಗಿವೆ. ಅವರೆಲ್ಲರಿಗೂ ಪ್ರಶಾಂತ್ ಕಿಣಿ ಅವರು ಮಾಡಿದ ಟ್ವೀಟ್ ಕೋಪ ತರಿಸಿದೆ. ಇನ್ನೊಂದು ತಿಂಗಳಲ್ಲಿ ಫಿನಾಲೆ ನಡೆಯಲಿದ್ದು, ಗೆಲ್ಲೋ ಸ್ಪರ್ಧಿಯ ಹೆಸರು ಅಲ್ಲಿ ರಿವೀಲ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:16 am, Tue, 16 December 25