‘ನೀನು ಅಳುಮುಂಜಿ’; ಆಸಿಯಾಗೆ ಮುಖಕ್ಕೆ ಹೊಡೆದಂತೆ ಹೇಳಿದ ಗಗನ್ ಚಿನ್ನಪ್ಪ

‘ಬಿಗ್ ಬಾಸ್ ಕನ್ನಡ 13’ರಲ್ಲಿ ಆಸಿಯಾ ಫಿರ್ದೋಸ್ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕಳೆದ ವಾರ ಕಿಚ್ಚನಿಂದ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಅವರಿಗೆ ಈಗ ಸಹಸ್ಪರ್ಧಿ ಗಗನ್ ಚಿನ್ನಪ್ಪ ಅವರಿಂದ 'ಅಳುಮುಂಜಿ' ಎಂಬ ಪಟ್ಟ ಸಿಕ್ಕಿದೆ. ಸಣ್ಣ ವಿಷಯಕ್ಕೂ ಕಣ್ಣೀರು ಹಾಕುವ ಆಸಿಯಾ ನಡವಳಿಕೆ ಮನೆಮಂದಿ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

‘ನೀನು ಅಳುಮುಂಜಿ’; ಆಸಿಯಾಗೆ ಮುಖಕ್ಕೆ ಹೊಡೆದಂತೆ ಹೇಳಿದ ಗಗನ್ ಚಿನ್ನಪ್ಪ
ಆಸಿಯಾ-ಗಗನ್

Updated on: Oct 01, 2026 | 7:39 AM

ಮುಖ್ಯಾಂಶಗಳು

  • ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಆಸಿಯಾಗೆ ಈಗ 'ಅಳುಮುಂಜಿ' ಪಟ್ಟ ಕೊಟ್ಟ ಗಗನ್
  • ‘ನಾನು ಅಳುಮುಂಜಿ ಅಲ್ಲ’ ಎಂದು ಆಸಿಯಾ ಗರಂ
  • ಸೋಶಿಯಲ್ ಮೀಡಿಯಾದಲ್ಲಿ ಜೋರು ಚರ್ಚೆ

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಆಸಿಯಾ ಫಿರ್ದೋಸ್ ಅವರು ಆಟದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಳೆದ ವಾರ ಅವರು ಕಿಚ್ಚನಿಂದ ಚಪ್ಪಾಳೆ ಪಡೆದು ಭೇಷ್ ಎನಿಸಿಕೊಂಡಿದ್ದರು. ಈಗ ಅವರಿಗೆ ಅಳುಮುಂಜಿ ಎನ್ನುವ ಪಟ್ಟ ಸಿಕ್ಕಿದೆ. ಗಗನ್ ಚಿನ್ನಪ್ಪ ಅವರು ಈ ರೀತಿಯ ಆರೋಪ ಮಾಡಿದ್ದಾರೆ. ಇದಕ್ಕೆ ಆಸಿಯಾ ಅವರು ಸ್ಪಷ್ಟನೆ ನೀಡಿದ್ದಾರೆ. ‘ನಾನು ಅಳುಮುಂಜಿ ಅಲ್ಲ’ ಎಂದಿದ್ದಾರೆ.

ಆಸಿಯಾ ಅವರು ಯಾವುದೇ ವಿಷಯ ಬಂದಾಗ ಗಟ್ಟಿಯಾಗಿ ನಿಂತು ಹೋರಾಡುತ್ತಾರೆ. ಏನಾದರೂ ಆರೋಪ ಕೇಳಿ ಬಂದಾಗ ಜೋರು ಧ್ವನಿಯಲ್ಲೇ ಸ್ಪಷ್ಟನೆ ನೀಡುತ್ತಾರೆ. ಆದರೆ, ಒಂದು ಹಂತದವರೆಗೆ ಮಾತ್ರ ಇದು ಇರುತ್ತದೆ. ಆ ಬಳಿಕ ಅವರು ಕಣ್ಣೀರು ಹಾಕಲು ಆರಂಭಿಸಿಬಿಡುತ್ತಾರೆ. ಸೋಶಿಯಲ್ ಮೀಡಿಯಾದಲ್ಲೂ ಈ ಮಾತು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈಗ ಗಗನ್ ಚಿನ್ನಪ್ಪ ಅವರು ಕೂಡ ಇದೇ ರೀತಿಯ ಆರೋಪ ಮಾಡಿದ್ದಾರೆ.

ಆಸಿಯಾ ಹಾಗೂ ಗಗನ್ ಚಿನ್ನಪ್ಪ ವಿರುದ್ಧ ತಂಡದಲ್ಲಿ ಇದ್ದರು. ಇಬ್ಬರ ಮಧ್ಯೆ ಕೆಲವು ವಿಷಯಗಳಿಗೆ ಭಿನ್ನಾಭಿಪ್ರಾಯಗಳು ಮೂಡಿದ್ದವು. ಈ ವಿಷಯದ ಬಗ್ಗೆ ಇಬ್ಬರ ಮಧ್ಯೆ ಚರ್ಚೆ ನಡೆದಿದೆ. ‘ಮೆತ್ತಗೆ ಹೇಳಿ’ ಎಂದು ಆಸಿಯಾ ಸೂಚನೆ ಕೊಟ್ಟರು. ಇದಕ್ಕೆ ಉತ್ತರಿಸಿದ ಗಗನ್ ಚಿನ್ನಪ್ಪ, ‘ಒಂದು ವಿಷಯ ಚರ್ಚೆಗೆ ಬಂದಾಗ ನೀನು ಚರ್ಚೆ ಮಾಡಬೇಕು. ಕೇವಲ ಅಳುತ್ತಾ ಕೂರೋದು ಅಲ್ಲ’ ಎಂದರು.

‘ನಾನು ಅಳುತ್ತಿಲ್ಲ’ ಎಂದು ಆಸಿಯಾ ಹೇಳಿದರು. ಆಗ ಗಗನ್ ಅವರು, ‘ನೀನು ಅಳುಮುಂಜಿ. ಸಣ್ಣ ವಿಷಯಕ್ಕೂ ಅಳುತ್ತೀಯಾ. ಬಂದ ಮೊದಲ ದಿನ ಎಷ್ಟು ಹೊತ್ತು ಮೇಕಪ್ ಮಾಡ್ಕೋತೀಯಾ ಎಂದು ಕೇಳಿದ್ದಕ್ಕೆ ಅಳುತ್ತಿದ್ದೆ. ನೀನು ಅಳುಮುಂಜಿ ಅಷ್ಟೇ’ ಎಂದರು.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ

ಗಗನ್ ಹೇಳಿದ್ದನ್ನು ಅನೇಕರು ಒಪ್ಪಿದ್ದಾರೆ. ‘ಆಸಿಯಾ ಈ ವಿಷಯದಲ್ಲಿ ಇನ್ನಷ್ಟು ಗಟ್ಟಿ ಆಗಬೇಕು. ಕಷ್ಟ ಬಂದಾಗ ಅಳೋದು ಬಿಟ್ಟು, ಧೈರ್ಯದಿಂದ ಎದುರಿಸಬೇಕಿದೆ’ ಎಂದು ಹೇಳಿದ್ದಾರೆ. ಇನ್ನೂ ಕೆಲವರು ಆಸಿಯಾ ಪರ ಬ್ಯಾಟ್ ಬೀಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:37 am, Thu, 1 October 26

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us