ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳ ನಡುವೆ ಹುಳಿ ಹಿಂಡಿದ ಮಂಜ

ಮನೆಯ ಹೊರಗೆ ಆಯಾ ಸ್ಪರ್ಧಿಗಳ ಬಗ್ಗೆ ಎಂಥಹಾ ಅಭಿಪ್ರಾಯ ಇದೆ ಎಂಬುದನ್ನು ಮಂಜ ಹೇಳಬೇಕಿತ್ತು. ಆ ಟಾಸ್ಕ್ ಅನ್ನು ಬಿಗ್​​ಬಾಸ್ ಮಂಜನಿಗೆ ನೀಡಿದ್ದರು. ಆದರೆ ಮಂಜ, ತಾನು ಇಷ್ಟು ದಿನ ಶೋ ನೋಡಿದ ಆಧಾರಾದ ಮೇಲೆ ಸ್ಪರ್ಧಿಗಳ ಆಟದ ವಿಮರ್ಶೆ, ದೂರುಗಳನ್ನು ಮಾಡಿದ. ಅದರಲ್ಲೂ ಮನೆಯಲ್ಲಿ ಸ್ನೇಹಿತರಂತೆ ಇದ್ದ ಸ್ಪರ್ಧಿಗಳ ನಡುವೆ ಬಿರುಕು ಮೂಡಿಸುವ, ಹುಳಿ ಹಿಂಡುವ ಕಾರ್ಯವನ್ನು ಮಾಡಿದ್ದಾನೆ.

ಎಂಟ್ರಿ ಕೊಡುತ್ತಿದ್ದಂತೆ ಸ್ಪರ್ಧಿಗಳ ನಡುವೆ ಹುಳಿ ಹಿಂಡಿದ ಮಂಜ
Manja

Updated on: Nov 09, 2026 | 10:59 PM

ಮುಖ್ಯಾಂಶಗಳು

  • ಬಿಗ್​​ಬಾಸ್ ಮನೆಗೆ ಮಂಜನ ರೀಎಂಟ್ರಿ
  • ಮಂಜ ಬಿಗ್ಬಾಸ್ ಮನೆಗೆ ಮರಳಿದ್ದಾನೆ
  • ಗೆಳೆಯರ ನಡುವೆ ಹುಳಿ ಹಿಂಡಿದ ಮಂಜ

ತನ್ನ ಕೆಟ್ಟ ವರ್ತನೆ, ಅಸಹ್ಯಕರ ಮಾತುಗಳು, ಸಹ ಸ್ಪರ್ಧಿಗಳ ಬಗ್ಗೆ ಅವಮಾನಕರ ಹೇಳಿಕೆಗಳು ಇನ್ನೂ ಕೆಲವು ರೌಡಿ ವರ್ತನೆಗಳಿಂದಾಗಿ ಮಂಜನನ್ನು ಬಿಗ್​​ಬಾಸ್ ಮನೆಯಿಂದ ಹೊರಗಟ್ಟಲಾಗಿತ್ತು. ಆದರೆ ಇದೀಗ ಮಂಜನನ್ನು ಬಿಗ್​​ಬಾಸ್ ಮನೆಗೆ ವಾಪಸ್ ಕರೆಸಿಕೊಳ್ಳಲಾಗಿದೆ. ಭಾನುವಾರದ ಎಪಿಸೋಡಿನಲ್ಲೇ ಸುದೀಪ್ ಅವರು ಮಂಜನ ರಿಟರ್ನ್ ಅನ್ನು ಘೋಷಣೆ ಮಾಡಿದ್ದರು. ಸೋಮವಾರದ ಎಪಿಸೋಡಿನಲ್ಲಿ ಮಂಜ ಮನೆಗೆ ಬಂದಿದ್ದಾನೆ. ಮಂಜ ಮನೆಗೆ ಬರುತ್ತಿದ್ದಂತೆ ಮನೆ ಸದಸ್ಯರ ನಡುವೆ ಹುಳಿ ಹಿಂಡುವ ಕಾರ್ಯ ಮಾಡಿದ್ದಾರೆ.

ಮನೆಯ ಹೊರಗೆ ಆಯಾ ಸ್ಪರ್ಧಿಗಳ ಬಗ್ಗೆ ಎಂಥಹಾ ಅಭಿಪ್ರಾಯ ಇದೆ ಎಂಬುದನ್ನು ಮಂಜ ಹೇಳಬೇಕಿತ್ತು. ಆ ಟಾಸ್ಕ್ ಅನ್ನು ಬಿಗ್​​ಬಾಸ್ ಮಂಜನಿಗೆ ನೀಡಿದ್ದರು. ಆದರೆ ಮಂಜ, ತಾನು ಇಷ್ಟು ದಿನ ಶೋ ನೋಡಿದ ಆಧಾರಾದ ಮೇಲೆ ಸ್ಪರ್ಧಿಗಳ ಆಟದ ವಿಮರ್ಶೆ, ದೂರುಗಳನ್ನು ಮಾಡಿದ. ಅದರಲ್ಲೂ ಮನೆಯಲ್ಲಿ ಸ್ನೇಹಿತರಂತೆ ಇದ್ದ ಸ್ಪರ್ಧಿಗಳ ನಡುವೆ ಬಿರುಕು ಮೂಡಿಸುವ, ಹುಳಿ ಹಿಂಡುವ ಕಾರ್ಯವನ್ನು ಮಾಡಿದ್ದಾನೆ.

Loading...

ತಾಂಡವ್ ಎದುರು, ಗಗನ್ ಹಾಗೂ ಪ್ರಶಾಂತ್ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ ಎಂದೂ, ಗಗನ್ ಬಂದಾಗ, ‘ತಾಂಡವ್ ನಿಮ್ಮ ಬೆನ್ನ ಹಿಂದೆ ಮಾತನಾಡುತ್ತಾನೆ’ ಎಂದು ಹೇಳಿದ್ದಾನೆ. ಪ್ರಶಾಂತ್ ಬಗ್ಗೆಯಂತೂ ಮನೆಯ ಹಲವು ಸದಸ್ಯರಿಗೆ ದೂರು ಹೇಳಿದ್ದಾನೆ. ಯಶಸ್, ಸೌಂದರ್ಯಾ ಮತ್ತು ಆಸಿಯಾ ವಿಷಯದಲ್ಲಿಯೂ ಇದೇ ತಂತ್ರ ಬಳಸಿದ ಮಂಜ, ಶಾಸ್ತ್ರಿ ಹಾಗೂ ಸೌಂದರ್ಯಾ ನಡುವಿನ ಗೆಳೆತನಕ್ಕೆ ಬೆಂಕಿ ಇಡುವ ಪ್ರಯತ್ನವನ್ನೂ ಮಾಡಿದ.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಮತ್ತೆ ಬಂದ ‘ರೌಡಿ ಮಂಜ’, ಮನೆಯಲ್ಲಿ ಮತ್ತೆ ಶುರುವಾಗುತ್ತಾ ಗಲಾಟೆ?

ಒಟ್ಟಾರೆ, ಬಿಗ್​​ಬಾಸ್​​, ಮಂಜನಿಗೆ ಹೊರಗಿನ ಪ್ರಪಂಚದ ವಿಷಯಗಳನ್ನು ಸ್ಪರ್ಧಿಗಳ ಬಳಿ ಹೇಳುವಂತೆ ಹೇಳಿದ್ದರೆ, ಮಂಜ ಒಳಗಿನ ಗುಟ್ಟುಗಳನ್ನು ಸ್ಪರ್ಧಿಗಳಿಗೆ ಹೇಳಿ, ಮನೆ ಸದಸ್ಯರ ನಡುವೆ ಗೊಂದಲ ಸೃಷ್ಟಿಸಿದ. ಕೆಟ್ಟ ವ್ಯಕ್ತಿತ್ವದ ಕಾರಣಕ್ಕೆ ಮನೆಯಿಂದ ಹೊರ ಹಾಕಲ್ಪಟ್ಟಿದ್ದ ಮಂಜ, ಈಗ ಮನೆಯ ಕೆಲವು ಸದಸ್ಯರ ಮುಂದೆ ವ್ಯಕ್ತಿತ್ವ, ಒಳ್ಳೆತನ ಇತ್ಯಾದಿಗಳ ಬಗ್ಗೆ ಆಡಿದ್ದು ತಮಾಷೆಯಾಗಿತ್ತು.

ಇದೀಗ ಮಂಜ ಮತ್ತೆ ಮನೆಗೆ ಬಂದಿದ್ದಾನೆ. ಈ ಬಾರಿ ವ್ಯಕ್ತಿತ್ವವನ್ನು ಬದಲಾಯಸಿಕೊಂಡಿದ್ದೇನೆ, ಕೆಟ್ಟ ವ್ಯಕ್ತಿತ್ವ ತ್ಯಜಿಸಿದ್ದೇನೆ ಎಂದೆಲ್ಲ ಹೇಳಿದ್ದಾನೆ. ಮನೆಗೆ ಎಂಟ್ರಿ ಆಗಿರುವ ಮಂಜ, ಮುಂದಿನ ದಿನಗಳಲ್ಲಿ ಹೇಗಿರುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us