AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಮನೆಗೆ ಮತ್ತೆ ಬಂದ ‘ರೌಡಿ ಮಂಜ’, ಮನೆಯಲ್ಲಿ ಮತ್ತೆ ಶುರುವಾಗುತ್ತಾ ಗಲಾಟೆ?

Bigg Boss Kannada season 13: ಇದೀಗ ಬಿಗ್​​ಬಾಸ್​​ ಅನಿರೀಕ್ಷಿತ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿ ರೌಡಿತನ ಮೆರೆದಿದ್ದ ಮಾಡರ್ನ್ ಕವಿ ಮಂಜ ಇದೀಗ ಬಿಗ್​​ಬಾಸ್ ಮನೆಗೆ ಮರಳುತ್ತಿದ್ದಾರೆ. ಆತನ ವರ್ತನೆಯ ಕಾರಣದಿಂದಾಗಿ ಮಂಜನನ್ನು ಹೊರಗೆ ಹಾಕಿದ್ದ ಬಿಗ್​​ಬಾಸ್ ಇದೀಗ ಮತ್ತೆ ಅವರೇ ಮಂಜನನ್ನು ಮನೆಗೆ ಕಳಿಸುತ್ತಿದ್ದಾರೆ.

ಬಿಗ್​ಬಾಸ್ ಮನೆಗೆ ಮತ್ತೆ ಬಂದ ‘ರೌಡಿ ಮಂಜ’, ಮನೆಯಲ್ಲಿ ಮತ್ತೆ ಶುರುವಾಗುತ್ತಾ ಗಲಾಟೆ?
Bigg Boss Kannada 13
ಮಂಜುನಾಥ ಸಿ.
|

Updated on:Nov 08, 2026 | 8:58 AM

Share

ಮುಖ್ಯಾಂಶಗಳು

  • ಬಿಗ್​​ಬಾಸ್ ಮನೆಗೆ ಮತ್ತೆ ಬಂದ ರೌಡಿ ಮಂಜ
  • ಮನೆಯಿಂದ ಹೊರಹಾಕಲ್ಪಟ್ಟಿದ್ದ ಮಂಜ
  • ಈಗ ಬಿಗ್​​ಬಾಸ್ ಮನೆಗೆ ಕರೆಸಿಕೊಂಡಿದ್ದಾರೆ

ಬಿಗ್​​ಬಾಸ್ ಮನೆಯಲ್ಲಿ ಕಳೆದ ಕೆಲ ವಾರಗಳಿಂದ ನಗು, ತಮಾಷೆ, ಭಾವುಕತೆ, ಸೆಂಟಿಮೆಂಟ್​​ಗಳು ತುಂಬಿವೆ. ಆದರೆ ಇದೀಗ ಬಿಗ್​​ಬಾಸ್​​ ಅನಿರೀಕ್ಷಿತ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ಬಿಗ್​​ಬಾಸ್ ಮನೆಯಲ್ಲಿ ರೌಡಿತನ ಮೆರೆದಿದ್ದ ಮಾಡರ್ನ್ ಕವಿ ಮಂಜ ಇದೀಗ ಬಿಗ್​​ಬಾಸ್ ಮನೆಗೆ ಮರಳುತ್ತಿದ್ದಾರೆ. ಆತನ ವರ್ತನೆಯ ಕಾರಣದಿಂದಾಗಿ ಮಂಜನನ್ನು ಹೊರಗೆ ಹಾಕಿದ್ದ ಬಿಗ್​​ಬಾಸ್ ಇದೀಗ ಮತ್ತೆ ಅವರೇ ಮಂಜನನ್ನು ಮನೆಗೆ ಕಳಿಸುತ್ತಿದ್ದಾರೆ.

ಇಂದು (ನವೆಂಬರ್ 08) ಬೆಳಿಗ್ಗೆ ಪ್ರಸಾರ ಆಗಿರುವ ಪ್ರೋಮೊನಲ್ಲಿ ತೋರಿಸಿರುವಂತೆ ಸುದೀಪ್ ಅವರು ಮಾಡರ್ನ್ ಕವಿ ಮಂಜನನ್ನು ವೇದಿಕೆಗೆ ಕರೆದಿದ್ದಾರೆ. ಅದಕ್ಕೂ ಮುಂಚೆ, ‘ದೀಪಾವಳಿಗೆ ಬರೀ ಸಿಹಿ ಮಾತ್ರವಲ್ಲ ಸ್ವಲ್ಪ ಖಾರವನ್ನೂ ಸಹ ಮನೆಗೆ ಕಳಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ಆ ಮೂಲಕ ಮಂಜನನ್ನು ಮತ್ತೆ ಬಿಗ್​​ಬಾಸ್ ಮನೆಗೆ ಕಳಿಸುತ್ತಿದ್ದಾರೆ ಬಿಗ್​​ಬಾಸ್. ಮಂಜನೂ ಸಹ, ಕಳೆದ ಬಾರಿ ನಾನು ಮಾಡಿದ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂದು ಸುದೀಪ್ ಎದುರು ಹೇಳಿ ಒಳಗೆ ಹೋಗಿದ್ದಾರೆ. ಆದರೆ ಹೋಗುವ ಮುಂಚೆ, ‘ಮನೆಯಲ್ಲಿ ಎಲ್ಲರಿಗೂ ಪಟಾಕಿ ಇಡುತ್ತೀನಿ’ ಎಂದು ಹೇಳಿ ಒಳಗೆ ಹೋಗಿದ್ದಾರೆ ಮಂಜ.

ಮಂಜ ‘ಅಗ್ನಿಪರೀಕ್ಷೆ’ ಮೂಲಕ ಬಿಗ್​​ಬಾಸ್ ಮನೆಗೆ ಬಂದಿದ್ದರು. ಆದರೆ ಮನೆಯಲ್ಲಿ ಮಂಜ ಮಿತಿ ಮೀರಿದ ವರ್ತನೆ ತೋರಿದ್ದರು. ತನ್ನನ್ನು ತಾನು ‘ಮಾಡರ್ನ್ ಕವಿ’ ಎಂದು ಕರೆದುಕೊಳ್ಳುವ ಮಂಜ, ಮನೆಯೊಳಗೆ ತೋರಿದ್ದು ಮಾತ್ರ ಅಪ್ಪಟ ರೌಡಿ ವರ್ತನೆ. ತೀರಾ ಕೆಟ್ಟದಾಗಿ ಮಾತನಾಡುವುದು, ಸಹ ಸ್ಪರ್ಧಿಗಳ ಮೇಲೆ ಅಸಹ್ಯಕರ ರೀತಿಯ ಆರೋಪಗಳನ್ನು ಮಾಡುವುದು. ಸಹಸ್ಪರ್ಧಿಗಳ ಕುಟುಂಬ ಸದಸ್ಯರ ಬಗ್ಗೆ ಕೆಟ್ಟದಾಗಿ ಮಾತನಾಡುವುದು, ಮಹಿಳಾ ಸ್ಪರ್ಧಿಗಳ ಬಗ್ಗೆ ಕೀಳಾಗಿ ಮಾತನಾಡುವುದು ಮಾಡಿದ್ದರು. ಒಟ್ಟಾರೆ ಮನೆಯ ನೆಮ್ಮದಿಯನ್ನು ಹಾಳು ಮಾಡಿದ್ದರು. ಇದೇ ಕಾರಣದಿಂದಾಗಿ ಮಂಜನನ್ನು ಬಿಗ್​ಬಾಸ್ ಮನೆಯಿಂದ ಹೊರಗೆ ಕಳಿಸಲಾಗಿತ್ತು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಿಂದ ಹೊರಬಂದ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ

ಮಂಜನನ್ನು ಹೊರಗೆ ಕಳಿಸಿದ್ದು ವೈಯಕ್ತಿಕವಾಗಿ ಸುದೀಪ್ ಅವರಿಗೆ ಇಷ್ಟವಾಗಿರಲಿಲ್ಲ. ‘ಕೆಟ್ಟ ಭಾಷೆ ಬಳಕೆ ಮಾಡಿದ್ದಕ್ಕೆ ಹೊರಗೆ ಕಳಿಸುವುದಾದರೆ ಮಂಜನನ್ನು ಮಾತ್ರವಲ್ಲ ಇನ್ನೂ ಕೆಲವರನ್ನು ಹೊರಗೆ ಕಳಿಸಬೇಕಿತ್ತು, ಇದು ನನ್ನ ನಿರ್ಧಾರ ಅಲ್ಲ, ಬಿಗ್​​ಬಾಸ್ ನಿರ್ಧಾರ. ಈ ನಿರ್ಧಾರದೊಟ್ಟಿಗೆ ನನ್ನ ಸಹಮತ ಇಲ್ಲ’ ಎಂದು ಸಹ ಸುದೀಪ್ ಹೇಳಿದ್ದರು. ಮಂಜನನ್ನು ಕಳಿಸುವಾಗ, ‘ನೀನು ನನ್ನ ತಮ್ಮನಂತೆ’ ಎಂದು ಬೆಂಬಲ ಸಹ ವ್ಯಕ್ತಪಡಿಸಿದ್ದರು. ಇದೀಗ ಮಂಜನನ್ನು ಶೋಗೆ ವಾಪಸ್ ತರಲಾಗಿದೆ. ಖುದ್ದು ಸುದೀಪ್ ಅವರು ಸ್ವಾಗತಿಸಿ ಮತ್ತೊಮ್ಮೆ ಮಂಜನನ್ನು ಮನೆಯೊಳಗೆ ಕಳಿಸಿದ್ದಾರೆ.

ಕಳೆದ ಬಾರಿ ತಮ್ಮ ದುಷ್ಟ ವರ್ತನೆ, ಕೆಟ್ಟ ಮಾತುಗಳಿಂದ ಮನೆಯಲ್ಲಿ ಅಲ್ಲೋಲ ಕಲ್ಲೊಲ ಎಬ್ಬಿಸಿದ್ದ ಮಂಜ ಈ ಬಾರಿ ಏನೆಲ್ಲ ಮಾಡುತ್ತಾನೆ ಎಂಬುದನ್ನು ಕಾದು ನೋಡಬೇಕಿದೆ. ಭಾನುವಾರದ ಎಪಿಸೋಡಿನಿಂದ ಮಂಜ ಮತ್ತೆ ಮನೆಗೆ ಎಂಟ್ರಿ ಕೊಡುತ್ತಿದ್ದಾನೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:54 am, Sun, 8 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ