AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​​ಬಾಸ್: ಆಗ ‘ಅಣ್ಣ-ತಂಗಿ’, ಈಗ ‘ಕಳ್ಳ-ನಾಯಿ’

ಈ ವಾರ ಪತ್ರಗಳ ಟಾಸ್ಕ್ ನಡೆದಿತ್ತು. ಮನೆಯಿಂದ ಬಂದ ಪತ್ರಗಳನ್ನು ಗಳಿಸಿಕೊಳ್ಳಲು ಟಾಸ್ಕ್ ಆಡಿ ಗೆಲ್ಲಬೇಕಿತ್ತು. ಅದರಂತೆ ಹಲವರು ಟಾಸ್ಕ್ ಆಡಿ ಗೆದ್ದರು ಪತ್ರಗಳನ್ನು ಪಡೆದುಕೊಂಡರು. ಬಳಿಕ ಖುದ್ದು ಬಿಗ್​​ಬಾಸ್​ ಟಾಸ್ಕ್ ನೀಡಿದರು. ಮನೆಯವರು ಸಹ ಸ್ಪರ್ಧಿಗೆ ಅನಾಮಿಕ ಪತ್ರ ಬರೆಯಬೇಕಿತ್ತು. ಅದರಂತೆ ಬರೆದ ಪತ್ರವನ್ನು ಯಾರಿಗೆ ಬರೆಯಲಾಗಿದೆಯೋ ಅವರು ಎಲ್ಲರ ಮುಂದೆ ಓದಿ ಅದನ್ನು ಹರಿದು, ಆ ಪತ್ರ ಯಾರು ಬರೆದಿದ್ದಾರೆಂದು ಊಹಿಸಿ ಅವರ ಮುಖಕ್ಕೆ ಎಸೆಯಬೇಕಿತ್ತು.

ಬಿಗ್​​ಬಾಸ್: ಆಗ ‘ಅಣ್ಣ-ತಂಗಿ’, ಈಗ ‘ಕಳ್ಳ-ನಾಯಿ’
Jagga Soundarya
ಮಂಜುನಾಥ ಸಿ.
|

Updated on: Nov 07, 2026 | 10:53 PM

Share

ಮುಖ್ಯಾಂಶಗಳು

  • ಬಿಗ್​ಬಾಸ್ ಕನ್ನಡ ಸೀಸನ್ 13
  • ಸೌಂದರ್ಯಾ-ಜಗ್ಗಮಮ್ಮಿ ನಡುವೆ ತೀವ್ರ ಜಗಳ
  • ಇಬ್ಬರ ನಡುವೆ ಜಗಳಕ್ಕೆ ಕಾರಣ ಏನು?

ಬಿಗ್​​ಬಾಸ್ ಮನೆಯಲ್ಲಿ ಸಂಬಂಧಗಳು ಬಲು ಕ್ಷಣಿಕ, ಇಂದು ಆತ್ಮೀಯ ಗೆಳೆಯರಾಗಿದ್ದವರು ಕೆಲವೇ ದಿನಗಳಲ್ಲಿ ಬದ್ಧ ವೈರಿಗಳಾಗಿ ಬಿಡುತ್ತಾರೆ. ಅಣ್ಣ-ತಂಗಿ ಎಂದುಕೊಂಡು ಕೈ-ಕೈ ಹಿಡಿದುಕೊಂಡು ಓಡಾಡಿದ್ದವರು ಪರಸ್ಪರ ಕೆಟ್ಟದಾಗಿ ಬೈದುಕೊಂಡು ಓಡಾಡುತ್ತಾರೆ. ಪ್ರತಿ ಸೀಸನ್​​ನಲ್ಲೂ ಇದನ್ನು ಪ್ರೇಕ್ಷಕರು ನೋಡುತ್ತಲೇ ಬಂದಿದ್ದಾರೆ. ಶೋನ ಆರಂಭದಲ್ಲಿ ಒಬ್ಬರಿಗೊಬ್ಬರು ಆತ್ಮೀಯರಾಗಿದ್ದವರು ಕೆಲವೇ ವಾರಗಳಲ್ಲಿ ಒಬ್ಬರಿಗೊಬ್ಬರು ಹೊಡೆದೇ ಹಾಕುವಷ್ಟೆ ವೈರಿಗಳಾಗುತ್ತಾರೆ. ಕೆಲ ವಾರಗಳ ಹಿಂದೆ ಸಹ ಅಣ್ಣ-ತಂಗಿ ಎಂದು ಜೊತೆ-ಜೊತೆಯಾಗಿದ್ದ ಜಗ್ಗ ಮಮ್ಮಿ ಮತ್ತು ಸೌಂದರ್ಯಾ ಈಗ ಬದ್ಧ ವೈರಿಗಳೇ ಆಗಿಬಿಟ್ಟಿದ್ದಾರೆ.

ಈ ವಾರ ಪತ್ರಗಳ ಟಾಸ್ಕ್ ನಡೆದಿತ್ತು. ಮನೆಯಿಂದ ಬಂದ ಪತ್ರಗಳನ್ನು ಗಳಿಸಿಕೊಳ್ಳಲು ಟಾಸ್ಕ್ ಆಡಿ ಗೆಲ್ಲಬೇಕಿತ್ತು. ಅದರಂತೆ ಹಲವರು ಟಾಸ್ಕ್ ಆಡಿ ಗೆದ್ದರು ಪತ್ರಗಳನ್ನು ಪಡೆದುಕೊಂಡರು. ಬಳಿಕ ಖುದ್ದು ಬಿಗ್​​ಬಾಸ್​ ಟಾಸ್ಕ್ ನೀಡಿದರು. ಮನೆಯವರು ಸಹ ಸ್ಪರ್ಧಿಗೆ ಅನಾಮಿಕ ಪತ್ರ ಬರೆಯಬೇಕಿತ್ತು. ಅದರಂತೆ ಬರೆದ ಪತ್ರವನ್ನು ಯಾರಿಗೆ ಬರೆಯಲಾಗಿದೆಯೋ ಅವರು ಎಲ್ಲರ ಮುಂದೆ ಓದಿ ಅದನ್ನು ಹರಿದು, ಆ ಪತ್ರ ಯಾರು ಬರೆದಿದ್ದಾರೆಂದು ಊಹಿಸಿ ಅವರ ಮುಖಕ್ಕೆ ಎಸೆಯಬೇಕಿತ್ತು.

ಜಗ್ಗಮಮ್ಮಿಗೆ ಯಶಸ್ ಮತ್ತು ಧನುಶ್ ಪತ್ರ ಬರೆದಿದ್ದರು. ಪತ್ರದಲ್ಲಿ ಜಗ್ಗಮಮ್ಮಿ ಮುಗ್ಧನೆಂಬ ನಾಟಕ ಆಡುತ್ತಾನೆ. ಅವನೊಬ್ಬ ಕಳ್ಳ. ಸ್ವಾರ್ಥಿ, ಒಳ್ಳೆಯವನಂತೆ ನಾಟಕ ಮಾಡುತ್ತಾನೆ. ಆತ ಮುಗ್ಧನೆಂದು ನಂಬಿಸಿ ಆ ಬಳಿಕ ನಿಜ ಮುಖ ತೋರಿಸುತ್ತಾನೆ ಇನ್ನೂ ಏನೇನೋ ಬರೆದಿದ್ದರು. ಜಗ್ಗ ಮಮ್ಮಿ ಆ ಪತ್ರವನ್ನು ಓದುತ್ತಿರುವಾಗಲೇ ಸಿಟ್ಟು ಸಹಿಸಿಕೊಳ್ಳಲಾಗದೆ ಪತ್ರ ಬರೆದವರನ್ನು ‘ಲಫಂಗ, ಲೋಫರ್’ ಇನ್ನಿತರೆ ಕೆಟ್ಟ ಪದಗಳನ್ನು ಬಳಸಿ ಬೈಯ್ಯಲು ಆರಂಭಿಸಿದರು.

ಇದನ್ನೂ ಓದಿ:ಬಿಗ್​​ಬಾಸ್ ಮನೆಯಿಂದ ಹೊರಬಂದ ಮತ್ತೊಬ್ಬ ವೈಲ್ಡ್ ಕಾರ್ಡ್ ಸ್ಪರ್ಧಿ

ಯಶಸ್​​ಗೆ ಸಹಿಸಲಾಗದೆ ಜಗ್ಗಮಮ್ಮಿಗೆ ಟಾಂಗ್ ಕೊಟ್ಟರು. ಸೌಂದರ್ಯಾ ಸಹ ಸುಮ್ಮನಿರದೆ ತಮಾಷೆಗೆ ಟಾಂಗ್ ಕೊಟ್ಟರು. ಅದಾದ ಬಳಿಕ ಜಗ್ಗಮಮ್ಮಿಯ ಸಿಟ್ಟು ಸೌಂದರ್ಯಾ ಕಡೆಗೆ ತಿರುಗಿತು. ಸೌಂದರ್ಯಾಗೆ ಕೆಟ್ಟ ಪದಗಳನ್ನು ಬಳಸಿ ಬೈದರು ಜಗ್ಗ. ‘ಯೋಗ್ಯತೆ ಇಲ್ಲದವಳು’, ‘ನಾಯಿ’, ‘ಅಸಹ್ಯದವಳು’ ಇತ್ಯಾದಿಗಳನ್ನು ಬೈದರು. ಸೌಂದರ್ಯಾ ಸಹ ಜಗ್ಗ ಮಮ್ಮಿಯನ್ನು ‘ಕಳ್ಳ, ಫೇಕು’ ಇತ್ಯಾದಿ ಪದಗಳನ್ನು ಬಳಸಿ ಬೈದರು.

ಕೆಲ ದಿನಗಳ ಹಿಂದೆ ಕೂಡ ‘ಅಣ್ಣ-ತಂಗಿ’ ಎಂದು ಪರಸ್ಪರ ಅಪ್ಪಿಕೊಂಡು ಓಡಾಡಿದ್ದ ಸೌಂದರ್ಯಾ ಮತ್ತು ಜಗ್ಗ ಮಮ್ಮಿ ಈಗ ಇಡೀ ಮನೆಯೇ ತಿರುಗಿ ನೋಡುವಂತೆ ಅಸಹ್ಯಕರವಾಗಿ ಕಿತ್ತಾಡಿಕೊಂಡಿದ್ದಾರೆ. ಮುಂದೆ ಇವರ ಅಣ್ಣ-ತಂಗಿ ಬಂಧ ಹೀಗೆಯೇ ಇರಲಿದೆಯೇ ಅಥವಾ ವೈರತ್ವ ಮುಂದುವರೆಯಲಿದೆಯೇ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ವೈಷ್ಣವಿ ಸಾವಿಗೆ ಕಾರಣವಾಯ್ತಾ ಅರಮನೆ ರಸ್ತೆಯ ಪ್ರೀ-ವೆಡ್ಡಿಂಗ್ ಶೂಟಿಂಗ್?
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ದೀಪಾವಳಿಗೆ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ ಅಯೋಧ್ಯೆ ರಾಮ ಮಂದಿರ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
ಬೆಂಗಳೂರಲ್ಲಿ ಸರಣಿ ಕೊಲೆ ಕೇಸ್: ತಮಿಳುನಾಡಿನ ಸೇಲಂನಲ್ಲಿ ಎರಡು ಶವ ಪತ್ತೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
30 ಲಕ್ಷಕ್ಕೂ ಹೆಚ್ಚು ದೀಪಗಳು; ಸರಯೂ ದಡದಲ್ಲಿ ಮತ್ತೊಂದು ವಿಶ್ವದಾಖಲೆ
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಬೆಲೆ ಏರಿಕೆ ಭಾಗ್ಯದ ಸರ್ಕಾರವಲ್ಲ, ಗ್ಯಾರಂಟಿಗಳ ಸರ್ಕಾರ: ಡಿಕೆ ಸುರೇಶ್
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಎಥೆನಾಲ್ ವಿಚಾರದಲ್ಲಿ ರಾಜ್ಯ ಸರ್ಕಾರ ಸುಳ್ಳು ಆರೋಪ ಮಾಡ್ತಿದೆ: ಜೋಶಿ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಪ್ರಿಯಾಂಕ್ ಖರ್ಗೆ ವಿರುದ್ಧ ಮರುಳಾರಾಧ್ಯ ಸ್ವಾಮೀಜಿ ಆಕ್ಷೇಪಾರ್ಹ ಹೇಳಿಕೆ
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಕೈಕೊಟ್ಟ ಮಳೆ: ಉಡುಪಿಯಲ್ಲಿ ರೈತರು, ಮೀನುಗಾರರಿಗೆ ಸಂಕಷ್ಟ!
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಲೆಟರ್ ವಿಷಯದಲ್ಲಿ ಗಾನವಿಗೆ ಕ್ಲಾಸ್? ಸೂಚನೆ ಕೊಟ್ಟ ಸುದೀಪ್
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ
ಸ್ಟಿಂಗ್ ಕೇಸ್: ಕುಮಾರಸ್ವಾಮಿ ವಿರುದ್ಧ ಯತೀಂದ್ರ ಸ್ಫೋಟಕ ಹೇಳಿಕೆ