ಬಿಗ್ ಬಾಸ್ ನಿಯಮ ಉಲ್ಲಂಘನೆ: ಆದರೂ ಸಮರ್ಥನೆ ಮಾಡಿಕೊಂಡ ಆಸಿಯಾ

ನಟಿ ಆಸಿಯಾ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಪಿಸುದನಿಯಲ್ಲಿ ಮಾತನಾಡಿದ್ದರೂ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡಿಲ್ಲ. ಕ್ಯಾಪ್ಟನ್ ಧನುಷ್ ನೀಡಿದ ಶಿಕ್ಷೆಯನ್ನು ಕೂಡ ಆಸಿಯಾ ಸ್ವೀಕರಿಸಿಲ್ಲ. ಬಿಗ್ ಬಾಸ್ ಕಡೆಯಿಂದ ಎಚ್ಚರಿಕೆ ಸಂದೇಶ ಬಂದರೂ ಕೂಡ ಆಸಿಯಾ ಅವರು ಸಮರ್ಥನೆ ಮುಂದುವರಿಸಿದ್ದಾರೆ.

ಬಿಗ್ ಬಾಸ್ ನಿಯಮ ಉಲ್ಲಂಘನೆ: ಆದರೂ ಸಮರ್ಥನೆ ಮಾಡಿಕೊಂಡ ಆಸಿಯಾ
Asiya
Image Credit source: Colors Kannada

Updated on: Oct 14, 2026 | 10:48 PM

‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಆಸಿಯಾ ಅವರು ಒಂದು ನಿಯಮ ಉಲ್ಲಂಘನೆ ಮಾಡಿದ್ದಾರೆ. ದೊಡ್ಮನೆ ಒಳಗೆ ಯಾರೂ ಕೂಡ ಪಿಸುದನಿಯಲ್ಲಿ ಮಾತನಾಡುವಂತಿಲ್ಲ. ಆದರೆ ಆ ನಿಯಮವನ್ನು ಆಸಿಯಾ ಅವರು ಉಲ್ಲಂಘಿಸಿದ್ದಾರೆ. ಅಕ್ಟೋಬರ್ 14ರ ಸಂಚಿಕೆಯಲ್ಲಿ ಕಾವ್ಯಾ ಗೌಡ ಜೊತೆ ಮಾತನಾಡುವಾಗ ಈ ರೀತಿ ಆಗಿದೆ. ಕೂಡಲೇ ಅವರನ್ನು ಎಚ್ಚರಿಸಲಾಗಿದೆ. ಆದರೆ ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ ಸಮರ್ಥನೆಯನ್ನು ಆಸಿಯಾ ಅವರು ಮುಂದುವರಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಸದಾ ಕಾಲ ಮೈಕ್ ಧರಿಸಿರಬೇಕು. ಯಾಕೆಂದರೆ, ಯಾವ ಸ್ಪರ್ಧಿಗಳು ಏನು ಮಾತನಾಡುತ್ತಾರೆ ಎಂಬುದು ವೀಕ್ಷಕರಿಗೆ ಮತ್ತು ಕಾರ್ಯಕ್ರಮದ ಆಯೋಜಕರಿಗೆ ಸ್ಪಷ್ಟವಾಗಿ ಕೇಳಿಸಬೇಕು. ಒಂದು ವೇಳೆ ಮೈಕ್ ಧರಿಸುವುದನ್ನು ಮರೆತರೆ ಶಿಕ್ಷೆ ನೀಡಲಾಗುತ್ತದೆ. ಅದೇ ರೀತಿ, ಪಿಸುದನಿಯಲ್ಲಿ ಕೂಡ ಸ್ಪರ್ಧಿಗಳು ಮಾತನಾಡುವಂತಿಲ್ಲ.

ಯಾವುದೇ ಸ್ಪರ್ಧಿ ಪಿಸುದನಿಯಲ್ಲಿ ಮಾತನಾಡಿದರೆ ಕೂಡಲೇ ಬಿಗ್ ಬಾಸ್ ಕಡೆಯಿಂದ ಎಚ್ಚರಿಕೆಯ ಸಂದೇಶ ಬರುತ್ತದೆ. ಪಿಸುದನಿಯಲ್ಲಿ ಮಾತನಾಡುವ ಮೂಲಕ ಬಿಗ್ ಬಾಸ್ ಮನೆಯ ನಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಆಸಿಯಾಗೂ ಎಚ್ಚರಿಕೆ ನೀಡಲಾಯಿತು. ತಪ್ಪು ಮಾಡಿದ್ದಕ್ಕಾಗಿ ಆಸಿಯಾಗೆ ಕ್ಯಾಪ್ಟನ್ ಧನುಷ್ ಅವರು ಶಿಕ್ಷೆ ನೀಡಿದರು. ಆದರೆ ಅದಕ್ಕೆ ಆಸಿಯಾ ತಕರಾರು ತೆಗೆದರು.

ನಿಯಮ ಉಲ್ಲಂಘನೆ ಮಾಡಿದ್ದರಿಂದ ಆಸಿಯಾ ಅವರು ಈ ದಿನ ಪಾತ್ರೆ ತೊಳೆಯಬೇಕು ಎಂದು ಧನುಷ್ ಅವರು ಹೇಳಿದರು. ಆದರೆ ಅದು ಆಸಿಯಾ ಅವರಿಗೆ ಸರಿ ಎನಿಸಲಿಲ್ಲ. ಮೊದಲನೆಯದಾಗಿ, ತಾವು ಪಿಸುದನಿಯಲ್ಲಿ ಮಾತನಾಡಿಯೇ ಇಲ್ಲ ಎಂದು ಅವರು ವಾದಿಸಿದರು. ಮೈಕ್ ಒತ್ತಿಕೊಂಡಿದ್ದರಿಂದ ಈ ರೀತಿ ಕೇಳಿಸಿದೆ ಎಂದು ಅವರು ಸಮರ್ಥನೆ ಮಾಡಿಕೊಂಡರು.

ಇದನ್ನೂ ಓದಿ: ‘ನೀವು ಫೇಲ್ ಆದ್ರಿ’; ಸುದೀಪ್ ಮಾತಿಗೆ ಕಣ್ಣೀರು ಹಾಕಿದ ಆಸಿಯಾ

ತಾವು ಮಾತ್ರವಲ್ಲದೇ ಬೇರೆಯವರು ಕೂಡ ಪಿಸುದನಿಯಲ್ಲಿ ಮಾತನಾಡಿದ್ದಾರೆ, ಅವರಿಗೂ ಹೀಗೆ ಶಿಕ್ಷೆ ನೀಡುತ್ತೀರಾ ಎಂದು ಆಸಿಯಾ ಪ್ರಶ್ನೆ ಮಾಡಿದ್ದಾರೆ. ಈ ವಿಚಾರವಾಗಿ ಕ್ಯಾಪ್ಟನ್ ಧನುಷ್ ಮತ್ತು ಆಸಿಯಾ ನಡುವೆ ವಾಗ್ವಾದ ನಡೆದಿದೆ. ಮಾಡಿದ ತಪ್ಪು ಒಪ್ಪಿಕೊಂಡು ಶಿಕ್ಷೆ ಅನುಭವಿಸುವುದು ಬಿಟ್ಟು ಹಠ ಮಾಡುತ್ತಾ ಕುಳಿತ ಆಸಿಯಾ ಅವರ ವರ್ತನೆಯನ್ನು ಇನ್ನುಳಿದ ಸ್ಪರ್ಧಿಗಳು ಖಂಡಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us