‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಪೂರ್ಣಗೊಂಡು ಕೆಲವು ವಾರ ಕಳೆದರೂ ಇನ್ನೂ ಆ ಬಗ್ಗೆ ಶುರುವಾಗಿರೋ ಚರ್ಚೆ ನಿಂತಿಲ್ಲ. ಈ ರಿಯಾಲಿಟಿ ಶೋ ಫಿನಾಲೆ ಸಂದರ್ಭದಲ್ಲಿ ಭರ್ಜರಿ ಟಿಆರ್ಪಿ ಪಡೆದುಕೊಂಡಿದೆ. ಬಿಗ್ ಬಾಸ್ ಇತಿಹಾಸದಲ್ಲೇ ಇದು ಅತಿ ಹೆಚ್ಚು ಟಿಆರ್ಪಿ ಸಿಕ್ಕ ಫಿನಾಲೆ ಎನ್ನಲಾಗಿದೆ. ಶನಿವಾರ (ಜನವರಿ 27) ಹಾಗೂ ಭಾನುವಾರ (ಜನವರಿ 28) ಎರಡೂ ದಿನ ಉತ್ತಮ ಟಿಆರ್ಪಿ ಸಿಕ್ಕಿದೆ. ಈ ಬಾರಿಯ ಶೋಗೆ ಅಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಸಿಕ್ಕಿತ್ತು. ಆ ಬಗ್ಗೆ ಇಲ್ಲಿದೆ ವಿವರ.
ಜನವರಿ 27ರ ಎಪಿಸೋಡ್ನಲ್ಲಿ ಆರು ಮಂದಿಯಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಯಿತು. ಈ ಎಪಿಸೋಡ್ನಲ್ಲಿ ಸಾಕಷ್ಟು ಮನರಂಜನಾ ಕಾರ್ಯಕ್ರಮಗಳು ಇದ್ದವು. ಶನಿವಾರದ ಎಪಿಸೋಡ್ಗೆ 10.3 ಟಿವಿಆರ್ ಸಿಕ್ಕಿದೆ. ಭಾನುವಾರ 12.6 ಟಿವಿಆರ್ ಸಿಕ್ಕಿದೆ. ಎರಡೂ ದಿನಗಳ ಟಿಆರ್ಪಿ ಸರಾಸರಿ ತೆಗೆದಾಗ 11.4 ಟಿವಿಆರ್ ಆಗಲಿದೆ. ಈ ಮೂಲಕ ಒಳ್ಳೆಯ ಟಿಆರ್ಪಿಯೊಂದಿಗೆ ಬಿಗ್ ಬಾಸ್ ಕೊನೆಗೊಂಡಂತೆ ಆಗಿದೆ.
ನಗರ ಭಾಗದ ಟಿಆರ್ಪಿ ಪರಿಗಣಿಸಿದರೆ ಮೊದಲ ಸ್ಥಾನದಲ್ಲಿ ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಹೊಸ ಧಾರಾವಾಹಿ ‘ಲಕ್ಷ್ಮಿ ನಿವಾಸ’ ಇದೆ. ಇದು ಧಾರಾವಾಹಿ ತಂಡದ ಖುಷಿ ಹೆಚ್ಚಿಸಿದೆ. ಎರಡನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಸಂಪೂರ್ಣ ಕರ್ನಾಟಕ ಪರಿಗಣಿಸಿದರೆ ಈ ಧಾರಾವಾಹಿಗೆ ಮೊದಲ ಸ್ಥಾನ ಹಾಗೂ ‘ಲಕ್ಷ್ಮಿ ನಿವಾಸ’ ಎರಡನೇ ಸ್ಥಾನ ಸಿಕ್ಕಿದೆ.
ಇದನ್ನೂ ಓದಿ: ಸಿನಿಮಾ ಮಾಡ್ತಾರೆ ವರ್ತೂರು ಸಂತೋಷ್; ಸೂಚನೆ ಕೊಟ್ಟ ಬಿಗ್ ಬಾಸ್ ಸ್ಪರ್ಧಿ
‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಕೂಡ ಸಮಾನ ಟಿಆರ್ಪಿ ಪಡೆದು ಎರಡನೇ ಸ್ಥಾನದಲ್ಲಿ ಇದೆ. ಸುಧಾರಾಣಿ ಅವರು ಈ ಧಾರಾವಾಹಿಯಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ‘ಸೀತಾ ರಾಮ’ ಧಾರಾವಾಹಿ ಪ್ರಸಾರ ಸಂದರ್ಭದಲ್ಲೇ ‘ಬಿಗ್ ಬಾಸ್’ ಪ್ರಸಾರ ಕಾಣುತ್ತಿತ್ತು. ಈ ಕಾರಣಕ್ಕೆ ‘ಸಿತಾ ರಾಮ’ ಧಾರಾವಾಹಿಗೆ ಟಿಆರ್ಪಿ ಕಡಿಮೆ ಆಗಿತ್ತು. ಈಗ ವೀಕ್ಷಕರು ಮರಳಿದ್ದಾರೆ. ಈ ಧಾರಾವಾಹಿಗೆ ಮೂರನೇ ಸ್ಥಾನ ಸಿಕ್ಕಿದೆ. ‘ಸತ್ಯ’ ಧಾರಾವಾಹಿಗೆ ನಾಲ್ಕನೇ ಸ್ಥಾನ ಹಾಗೂ ‘ಭಾಗ್ಯಲಕ್ಷ್ಮಿ’ ಧಾರಾವಾಹಿಗೆ ಐದನೇ ಸ್ಥಾನ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ